AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಕೆಎಸ್ ಈಶ್ವರಪ್ಪ ಅವರು ತೊಡೆತಟ್ಟಿದ್ದಾರೆ. ದಿನಂಪ್ರತಿ ಬಿಎಸ್​ವೈ ಮತ್ತು ಮಕ್ಕಳ ವಿರುದ್ಧ ಗುಡುಗುತ್ತಿದ್ದಾರೆ. ಇದೀಗ ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ, ಯುವಕರನ್ನು ತುಳಿಯುತ್ತಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ.

ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ
ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ
Follow us
Basavaraj Yaraganavi
| Updated By: Rakesh Nayak Manchi

Updated on: Mar 24, 2024 | 6:46 PM

ಶಿವಮೊಗ್ಗ, ಮಾ.24: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ (BY Raghavendra) ವಿರುದ್ಧ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಅವರು ತೊಡೆತಟ್ಟಿದ್ದಾರೆ. ಪುತ್ರ ಕೆಈ ಕಾಂತೇಶ್​ಗೆ ಹಾವೇರಿ ಟಿಕೆಟ್ ಕೈತಪ್ಪಿದ ನಂತರ ದಿನಂಪ್ರತಿ ಬಿಎಸ್​ವೈ ಮತ್ತು ಮಕ್ಕಳ ವಿರುದ್ಧ ಗುಡುಗುತ್ತಿದ್ದಾರೆ. ಇದೀಗ ವಿಜಯೇಂದ್ರ ಕ್ಷೇತ್ರ ಶಿಕಾರಿಪುರದಲ್ಲಿ ನಿಂತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅವರು ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ, ಯುವಕರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರೇ ನನಗೆ ಏಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರನ್ನು ಕುರಿಗಳ ರೀತಿ ಅಂದುಕೊಂಡಿದ್ದಾರೆ. ಅಪ್ಪ-ಮಕ್ಕಳು ಬೇಡವೆಂದು ಶಿಕಾರಿಪುರದ ಜ‌ನ ತೀರ್ಮಾನಿಸಿದ್ದಾರೆ. ರಾಘವೇಂದ್ರ ಸೋಲಿಸುವ ಮೂಲಕ ಅವರಿಗೆ ಬುದ್ಧಿ ಕಲಿಸಬೇಕು. ಸೋಲಿನ ರುಚಿ‌ ಏನು ಅಂತಾ ಯಡಿಯೂರಪ್ಪಗೆ ತೋರಿಸಬೇಕು ಎಂದರು.

ಡಮ್ಮಿ ಕ್ಯಾಂಡಿಡೇಟ್ ಹಾಕಿದ ಕಾಂಗ್ರೆಸ್

ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿವೈ ರಾಘವೇಂದ್ರ ವಿರುದ್ಧ ನಟ ಶಿವರಾಜ್​ಕುಮಾರ್ ಪತ್ನಿ ಗೀತಾ ಶಿವರಾಜ್​ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಘವೇಂದ್ರ ಗೆಲ್ಲಬೇಕು ಅಂತಾ ಶಿವಮೊಗ್ಗದಲ್ಲಿ ಡಮ್ಮಿ ಕ್ಯಾಂಡಿಡೇಟು ಹಾಕಿಕೊಂಡಿದ್ದಾರೆ ಅಂತಾ ಜ‌ನ ಮಾತನಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಯಡಿಯೂರಪ್ಪರ ಇಬ್ಬರು ಮಕ್ಕಳಿಗೆ ಅಧಿಕಾರ, ಈಶ್ವರಪ್ಪ ಪುತ್ರನಿಗೆ ಅನ್ಯಾಯ ಯಾಕೆ?: ಬೆಂಬಲಿಗರ ಪ್ರಶ್ನೆ

ಯುವಕರನ್ನು ತುಳಿಯುವುದೇ ಯಡಿಯೂರಪ್ಪ ಕೆಲಸ

ನರೇಂದ್ರ ಮೋದಿ ಯುವಕರು ಬೆಳೆಯಬೇಕು ಅಂತಾ ಹೇಳುತ್ತಾರೆ. ಆದರೆ ಯುವಕರನ್ನು ತುಳಿಯುವುದೇ ಯಡಿಯೂರಪ್ಪ ಕೆಲಸ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಕೆಜೆಪಿ ಕಟ್ಟಿ ಕೇವಲ 6 ಸೀಟ್ ಗೆದ್ದರು. ಕೇಂದ್ರದವರಿಗೆ ಯಡಿಯೂರಪ್ಪ ಒಬ್ಬರೇ ಲಿಂಗಾಯತ ನಾಯಕರಾ? ಎಂದು ಪ್ರಶ್ನಿಸಿದರು.

ವಿಜಯೇಂದ್ರ ಆಣೆ ಪ್ರಮಾಣ ಮಾಡಲಿ

ಶಿಕಾರಿಪುರದಲ್ಲಿ ಕಾಂಗ್ರೆಸ್​ ಜತೆ ಹೊಂದಾಣಿಕೆ ಮಾಡಿಕೊಂಡು ವಿಜಯೇಂದ್ರ ಅವರು ಗೆದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಒಳ ಒಪ್ಪಂದ ಮಾಡಿಕೊಂಡಿಲ್ಲ ಅಂತಾ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಶಿಕಾರಿಪುರದಲ್ಲಿ ಇಂದು ಪ್ರಚಾರ ಆರಂಭವಾಗಿದೆ. ಶಿಕಾರಿಪುರದಲ್ಲಿ ಯುವಕರು ಬೈಕ್ ರ್ಯಾಲಿ ನಡೆಸಿದರು. ಬೈಕ್ ರ್ಯಾಲಿಯಲ್ಲಿ ಯುವಕರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರೇರಣೆ ನೀಡಿದ್ದಾರೆ ಎಂದರು.

ಈಶ್ವರಪ್ಪ ಅವರಿಗೆ ಗಂಡಸುತನ ಇದ್ದರೆ ಮಗನಿಗೆ ಟಿಕೇಟ್ ಕೊಡಿಸಬೇಕಿತ್ತು ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ತಿರುಗೇಟುಕೊಟ್ಟ ಈಶ್ವರಪ್ಪ, ಅವರು ಮಾಡಿದ ಪದದ ಕೀಳು ಮಟ್ಟಕ್ಕೆ ನಾನು ಇಳಿಯಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು