ಯಡಿಯೂರಪ್ಪರ ಇಬ್ಬರು ಮಕ್ಕಳಿಗೆ ಅಧಿಕಾರ, ಈಶ್ವರಪ್ಪ ಪುತ್ರನಿಗೆ ಅನ್ಯಾಯ ಯಾಕೆ?: ಬೆಂಬಲಿಗರ ಪ್ರಶ್ನೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕುಟುಂಬ ರಾಜಕಾರಣದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಸ್ವತಃ ಬಿಜೆಪಿ ನಾಯಕರೇ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬಸ್ಥರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇದೀಗ ಗದಗದಲ್ಲಿ ನಡೆದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಈಶ್ವರಪ್ಪ ಬೆಂಬಲಿಗರು ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪರ ಇಬ್ಬರು ಮಕ್ಕಳಿಗೆ ಅಧಿಕಾರ, ಈಶ್ವರಪ್ಪ ಪುತ್ರನಿಗೆ ಅನ್ಯಾಯ ಯಾಕೆ?: ಬೆಂಬಲಿಗರ ಪ್ರಶ್ನೆ
ಯಡಿಯೂರಪ್ಪರ ಇಬ್ಬರು ಮಕ್ಕಳಿಗೆ ಅಧಿಕಾರ, ಈಶ್ವರಪ್ಪ ಪುತ್ರನಿಗೆ ಅನ್ಯಾಯ ಯಾಕೆ? ಎಂದು ಗದಗದಲ್ಲಿ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Mar 24, 2024 | 5:19 PM

ಗದಗ, ಮಾ.24: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕುಟುಂಬ ರಾಜಕಾರಣದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಸ್ವತಃ ಬಿಜೆಪಿ ನಾಯಕರೇ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಕುಟುಂಬಸ್ಥರ (ಪುತ್ರರಾದ ಬಿವೈ ವಿಜಯೇಂದ್ರ ಮತ್ತು ಬಿವೈ ರಾಘವೇಂದ್ರ) ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇದೀಗ ಗದಗದಲ್ಲಿ (Gadag) ನಡೆದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಕೆಎಸ್ ಈಶ್ವರಪ್ಪ (KS Eshwarappa) ಬೆಂಬಲಿಗರು ಮತ್ತೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ 31ಜಿಲ್ಲೆಗಳ ಪೈಕಿ ಈಶ್ವರಪ್ಪನವರ ಪರವಾಗಿ ಗಟ್ಟಿ ದ್ವನಿ ಎತ್ತಿದ್ದು ಹಾವೇರಿ-ಗದಗ ಕ್ಷೇತ್ರದಲ್ಲಿ ಮಾತ್ರ. ರಾಜ್ಯದ ಹಲವು ಕ್ಷೇತ್ರದಲ್ಲಿ ತಮ್ಮ-ತಮ್ಮ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ಆದರೆ, ಈಶ್ವರಪ್ಪನವರ ಮಗನಿಗೆ ಯಾಕೆ ಟಿಕೆಟ್ ನೀಡಲಿಲ್ಲ? ಈಶ್ವರಪ್ಪನವರು ಡಿಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಬ್ರಾಹ್ಮಣ ಮಠಗಳಿಗೆ ಈಶ್ವರಪ್ಪನವರು ಸಾಕಷ್ಟು ಸಹಾಯ ಮಾಡಿದ್ದಾರೆ. ಹಿಗಿದ್ದರೂ ಯಾಕೆ ಕಾಂತೇಶ್​ಗೆ ಟಿಕೆಟ್ ನೀಡಲಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಆಕ್ರೋಶ ಹೊರಹಾಕಿದರು.

ಕಳೆದ ಬಾರಿ ಬಿಜೆಪಿಗೆ 25 ಸೀಟ್ ಬರಲು ಕುರುಬರ ಮತಗಳೇ ನಿರ್ಣಾಯಕವಾಗಿದ್ದವು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿದ್ದರೂ ಅವರಿಗೆ ಟಿಕೆಟ್ ನೀಡಿದ್ದು ಯಾಕೆ? ಇಡೀ ದೇಶದಲ್ಲಿ ಕುರುಬರಿಂದಲೇ ಹಿಂದುತ್ವ ಉಳಿದಿದೆ. ಇಂತಹ ಕುರುಬರಿಗೆ ಅನ್ಯಾಯ ಮಾಡಿದ್ದು ಎಷ್ಟು ಸರಿ? ಹಿಂದುತ್ವದ ಹೆಸರಿನಲ್ಲಿ ಹಿಂದುಳಿದ ವರ್ಗದವರನ್ನು ಬಿಜೆಪಿ ತುಳಿಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸಲು ಶೋಭಾರನ್ನು ಯಡಿಯೂರಪ್ಪ ಜೊತೆಗೆ ಕರೆದೊಯ್ದಿದ್ದರೆ? ಕೆಎಸ್ ಈಶ್ವರಪ್ಪ

ರಾಜ್ಯದಲ್ಲಿ ಬಿಜೆಪಿಗೆ 25 ಸೀಟ್ ಬರಬೇಕಂದರೆ ಬಿಜೆಪಿ ನಾಯಕರು ಈಶ್ವರಪ್ಪನವರ ಮನೆಗೆ ಹೋಗಿ ಕೈ-ಕಾಲು ಬಿದ್ದು ಕೆ.ಈ. ಕಾಂತೇಶ್ ಅವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೇ, ಕುರುಬ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತದೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕುರುಬರು ಕೇಲಸ ಮಾಡಿದರೆ ಬಸವರಾಜ ಬೊಮ್ಮಾಯಿ ಅವರು ಗೆಲ್ಲುತ್ತಾರೆ. ಇಲ್ಲದಿದ್ದರೇ ನಿಮ್ಮ ಸೋಲು ಕಟ್ಟಿಟ್ಚ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಈಶ್ವರಪ್ಪನವರನ್ನು ಹೊರಗಿಟ್ಟು 28 ಸ್ಥಾನ ಗೆಲ್ಲುವ ತಾಕತ್ ಬಿಜೆಪಿಗೆ ಇಲ್ಲ. 28 ಸ್ಥಾನಗಳಲ್ಲಿ ಒಂದು ಸ್ಥಾನ ನೀಡಿ. ಕುರುಬ ಸಮುದಾಯಕ್ಕೆ ಒಂದು ಟಿಕೆಟ್ ಕೂಡ ನೀಡದೆ ಬಿಜೆಪಿ ಅಭ್ಯರ್ಥಿಗಳು ಪ್ರಚಾರಕ್ಕೆ ಬಂದರೆ ಕುರುಬ ಸಮುದಾಯದವರು ಬಹಿಷ್ಕರಿಸಿ ಎಂದು ಕರೆ ನೀಡಿದರು. ರಾಜ್ಯಾಧ್ಯಂತ ಮತ್ತೋಮ್ಮೆ ಸಭೆ ಕರೆದು ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ಮನವಿ ಮಾಡಿದರು.

ಹಿಂದೂಳಿದ ವರ್ಗದವರಿಗೆ 28 ಲೋಕಸಭಾ ಕ್ಷೇತ್ರದಲ್ಲಿ ನೀಡಲಿಲ್ಲ. ಮೇಲ್ವರ್ಗದ ಜಾತಿಯವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದ್ದು, ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. 28ಕ್ಷೇತ್ರದಲ್ಲಿ ಯಾವುದೇ ಕ್ಷೇತ್ರಕ್ಕೂ ಟಿಕೆಟ್ ನೀಡದೇ ಅನ್ಯಾಯ ಮಾಡಿದ್ದಾರೆ. ಹಿಂದೂತ್ವದ ವಿಷಯದಲ್ಲಿ ಈಶ್ವರಪ್ಪನವರು ಬದ್ಧರಾಗಿದ್ದಾರೆ. ಯಡಿಯೂರಪ್ಪನವರು ತಮ್ಮ ಇಬ್ಬರು ಮಕ್ಕಳಿಗೆ ಸ್ಥಾನ-ಮಾನ ನೀಡಿದ್ದಾರೆ. ಆದರೆ, ಮಾತು ಕೋಟ್ಟು ನಮ್ಮ ಕೆ.ಈ. ಕಾಂತೇಶ್ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ತಾಲೂಕ ಪಂಚಾಯತ್ ಅಧ್ಯಕ್ಷ ಕಾಂತೇಶ್ ಜಗಳೂರು ಹೇಳಿದರು.

ಇದನ್ನೂ ಓದಿ: ಮೋದಿ ಹೇಳಿದ ಪರಿವಾರವಾದ ರಾಜ್ಯದಲ್ಲಿ ಮುಕ್ತವಾಗಬೇಕು: ಬಿಎಸ್​ವೈಗೆ ಸದಾನಂದಗೌಡ ಟಾಂಗ್

ಈ ವೇಳೆ ಮಾತನಾಡಿ ಬಿಜೆಪಿ ಮುಖಂಡ ಹಾಗೂ ಈಶ್ವರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಅರುಣ ಅಣ್ಣಿಗೇರಿ, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪನವರಿಗೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಕ್ಕಳಿಂದ ಅನ್ಯಾಯ ಮಾಡಿದೆ ಅಂತ ಆರೋಪಿಸಿದರು. ಈಶ್ವರಪ್ಪ ಒಬ್ಬ ಹಿಂದುಳಿದ ವರ್ಗದ‌ ಧೀಮಂತ ನಾಯಕ. ಅವರಿಗೆ ಆಗಿರುವ ನೋವು, ಅನ್ಯಾಯಕ್ಕೆ ಅವರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು.

ಈಸ್ವರಪ್ಪ ಅವರಿಗೆ ನಾವು ಬೆಂಬಲ ಸೂಚಿಸುತ್ತೇವೆ. ನಿರಂತರವಾಗಿ ಬಿಜೆಪಿಯಲ್ಲಿ ಈಶ್ವರಪ್ಪನವರಿಗೆ ಅನ್ಯಾಯ ಆಗಿದೆ. ಹಿಂದೆ ಎಂಎಲ್​ಎ ಟಿಕೆಟ್ ತ್ಯಾಗ ಮಾಡಿದರೂ ನ್ಯಾಯ ದೊರಕಲಿಲ್ಲ. ಆಗ ಪ್ರಧಾನಿ ಮೋದಿ ಅವರು ಕರೆ ಮಾಡಿ ಮುಂದೆ ಸುವರ್ಣ ಅವಕಾಶ ಬರತ್ತದೆ, ತಾಳ್ಮೆಯಿಂದ ಇರಿ ಅಂತ ಹೇಳಿದ್ದರು. ಆಗ ಈಶ್ವರಪ್ಪನವರು ತಾಳ್ಮೆಯಿಂದ ಇದ್ದರು. ಆದರೆ ಈಗ ಲೋಕಸಭಾ ಚುನಾವಣೆ ಬಂದಿದೆ. ನಿನಗೆ ಟಿಕೆಟ್ ಕೊಡುತ್ತೇವೆ ಹಾವೇರಿ ಕ್ಷೇತ್ರದಲ್ಲಿ ಓಡಾಡುವಂತೆ ಯಡಿಯೂರಪ್ಪ ಹೇಳಿದ್ದರು. ನಾನೇ ಓಡಾಡಿ ಚುನಾಚಣೆ ಗೆಲ್ಲಿಸುತ್ತೇನೆ ಅಂದಿದ್ದರು. ಮಾತು ಕೊಟ್ಟಂತೆ ಯಡಿಯೂರಪ್ಪ ನಡೆದುಕೊಂಡಿಲ್ಲ ಅಂತ ಕಿಡಿಕಾರಿದರು.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

ಹಾವೇರಿ-ಗದಗ ಟಿಕೇಟ್ ಕಾಂತೇಶ್ ಅವರಿಗೆ ನೀಡಲಿಲ್ಲ. ಯಡಿಯೂರಪ್ಪ ಮಕ್ಕಳಿಗೆ ಎಂಎಲ್ಎ, ಎಂಪಿ ಸ್ಥಾನ ನೀಡಲಾಗಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದು ಸರಿನಾ ಅಂತ ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಶಿವಮೊಗ್ಗ ಕ್ಷೇತ್ರಕ್ಕೆ ಪಕ್ಷೇತರ ಅಬ್ಯರ್ಥಿಯಾಗಿ ಗೆಲ್ಲಿಸಿ ತರೋಕೆ ನಾವೆಲ್ಲರೂ ಪ್ರಯತ್ನಿಸುತ್ತೇವೆ. ಕೇವಲ ಶಿವಮೊಗ್ಗ ಅಲ್ಲ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಇದರ ಪರಿಣಾಮ ಆಗತ್ತೆ ಎಂದರು.

ಇನ್ನೂ ಬಿ ಫಾರ್ಮ ಕೊಟ್ಟಿಲ್ಲ, ಸರಿಪಡಿಸಿದರೆ ಉತ್ತಮ. ಹಾವೇರಿಯಲ್ಲಿ ಕಾಂತೇಶ್ ಅವರಿಗೆ ಟಿಕೇಟ್ ಕೊಟ್ಟರೆ ಒಳ್ಳೆದು. ಇಲ್ಲವಾದರೆ ಗದಗ-ಹಾವೇರಿ ಕ್ಷೇತ್ರಕ್ಕೂ ಪರಿಣಾಮ ಆಗತ್ತೆ ಎಂದರು. ಮೂಗು ಹಿಡಿದರೆನೇ ಬಾಯಿ ತೆರೆಯಬೇಕು. ಹಾಗಾಗಿ ಶಿವಮೊಗ್ಗಕ್ಕೆ ಲೋಕಸಭೆಗೆ ಈಶ್ವರಪ್ಪ ಪಕ್ಷೇತರವಾಗಿ ನಿಂತಿದ್ದಾರೆ. ಕೆಂದ್ರದ ನಾಯಕರ ಮೇಲೆ ಇನ್ನೂ ಆಶಾಭಾವನೆ ಇದೆ. ಮುಖಂಡರು ಮಾತುಕತೆ ಮಾಡಿ ಸಂಧಾನ ಮಾಡಲು ಹೋಗುತ್ತಿದ್ದಾರೆ. ಆದರೆ ಈಶ್ವರಪ್ಪ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ