ಆತ್ಮಹತ್ಯೆ ಮೂಲಕ ನಿಧನ ಹೊಂದಿದ ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ ಬೆಂಗಳೂರಿಗೆ ಶಿಫ್ಟ್ ಆಗಿ ವರ್ಷ ಮಾತ್ರ ಕಳೆದಿತ್ತು
ಬೌರಿಂಗ್ ಆಸ್ಪತ್ರೆಯ ಮೂವರು ವೈದ್ಯರು ಹಾಗೂ ತಹಸೀಲ್ದಾರ ಅವರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಮತ್ತು ಪರೀಕ್ಷೆಯ ವಿಡಿಯೋ ಚಿತ್ರೀಕರಣ ಮಾಡಲಾಯಿತು ಎಂದು ನಮಗೆ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ. ಪೋಸ್ಟ್ ಮಾರ್ಟೆಮ್ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಅಸ್ಪತ್ರೆಯಿಂದ ಪಡೆದುಕೊಂಡಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ (BS Yediyurappa) ಶುಕ್ರವಾರದ ಬೆಳಗು ಎಂದಿನಂತಿರಲಿಲ್ಲ. ಸುಮಾರು 10 ಗಂಟೆಯ ಹೊತ್ತಿಗೆ ವೃತ್ತಿಯಲ್ಲಿ ವೈದ್ಯೆಯಾಗಿದ್ದ 30 ವರ್ಷ ವಯಸ್ಸಿನ ಅವರ ಮೊಮ್ಮಗಳು ಸೌಂದರ್ಯರ (Dr Soundarya) ದೇಹ ಬೆಂಗಳೂರು ವಸಂತನಗರದಲ್ಲಿರುವ ಫ್ಲ್ಯಾಟೊಂದರಲ್ಲಿ ಸೀಲಿಂಗ್ ಫ್ಯಾನಿಗೆ ನೇತಾಡುತ್ತಿದ್ದ ಆಘಾತಕಾರಿ ಸುದ್ದಿ ಬಿ ಎಸ್ ವೈ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿತು. ಘಟನೆ ನಡೆದಾಗ ಅವರ ಪತಿ ಡಾ. ನೀರಜ್ (Dr Neeraj) ತಾವು ಕೆಲಸ ಮಾಡುತ್ತಿದ್ದ ಎಮ್ ಎಸ್ ರಾಮಯ್ಯ ಆಸ್ಪತ್ರೆಯಲ್ಲಿದ್ದರು. ನೀರಜ್ ಕೂಡ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಮನೆ ಕೆಲಸದವರು ಮನೆಗೆ ಬಂದು ಬಹಳ ಸಮಯದವರಗೆ ಬೆಲ್ ಮಾಡಿದರೂ ಪ್ರತಿಕ್ರಿಯೆ ಬಾರದೇ ಹೋದಾಗ ಡಾ ನೀರಜ್ ಅವರಿಗೆ ಫೋನ್ ಮಾಡಿದ್ದಾರೆ. ನೀರಜ್ ಕೂಡಲೇ ಮನೆಗೆ ಧಾವಿಸಿ ಬಾಗಿಲು ತೆರೆದಾಗ ಡಾ ಸೌಂದರ್ಯ ಅವರ ದೇಹ ಫ್ಯಾನಿಗೆ ನೇತಾಡುತ್ತಿದ್ದಿದ್ದು ಕಂಡಿದೆ. ಅವರೇ ನೀಡಿರುವ ದೂರಿನ ಮೇರೆಗೆ ಹೌಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಸೌಂದರ್ಯ ಅವರ ದೇಹ ಮರಣೋತ್ತರ ಪರೀಕ್ಷೆ ಬೌರಿಂಗ್ ಅಸ್ಪತ್ರೆಯಲ್ಲಿ ನಡೆಸಲಾಯಿತು.
ಬೌರಿಂಗ್ ಆಸ್ಪತ್ರೆಯ ಮೂವರು ವೈದ್ಯರು ಹಾಗೂ ತಹಸೀಲ್ದಾರ ಅವರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಮತ್ತು ಪರೀಕ್ಷೆಯ ವಿಡಿಯೋ ಚಿತ್ರೀಕರಣ ಮಾಡಲಾಯಿತು ಎಂದು ನಮಗೆ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ. ಪೋಸ್ಟ್ ಮಾರ್ಟೆಮ್ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಅಸ್ಪತ್ರೆಯಿಂದ ಪಡೆದುಕೊಂಡಿದ್ದಾರೆ.
ಸೌಂದರ್ಯ ಅವರ ಕುತ್ತಿಗೆಯ ಹಿಂಭಾಗದಲ್ಲಿ ಒಂದು ಗುರುತು ಇತ್ತೆನ್ನೆವುದು ಗೊತ್ತಾಗಿದೆ. ಅವರ ಸಾವಿನ ಬಗ್ಗೆ ವಿವರಗಳೆಲ್ಲ ಪೊಲೀಸರ ತನಿಖೆಯ ನಂತರವೇ ಗೊತ್ತಾಗಬೇಕು.
ಯಡಿಯೂರಪ್ಪನವರ ಮೊದಲ ಮಗಳು ಪದ್ಮ ಮತ್ತು ಹುಬ್ಬಳ್ಳಿಯ ವಿಬಿ ಯಮಕನಮರಡಿ ಅವರ ಕುಡಿಯಾಗಿದ್ದ ಸೌಂದರ್ಯ ಇತ್ತೀಚಿಗಷ್ಟೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರಂತೆ. ಯಮಕನಮರಡಿ ಅವರ ನಿವೃತ್ತಿಯ ಬಳಿಕ ಕುಟುಂಬವು ಬೆಂಗಳೂರಿಗೆ ಬಂದು ನೆಲೆಸಿತ್ತು. ಸೌಂದರ್ಯ ಮತ್ತು ಡಾ ನೀರಜ್ ಮದುವೆಯಾಗಿದ್ದು ಮೂರೂವರೆ ವರ್ಷಗಳ ಹಿಂದೆ.
ಅಬ್ಬಿಗೆರೆಯ ಫಾರ್ಮ್ ಹೌಸ್ನಲ್ಲಿ ಸೌಂದರ್ಯ ಅವರ ಅಂತ್ಯ ಸಂಸ್ಕಾರ ನಡೆಸಲಾಗುವುದು.
ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಮೊಮ್ಮಗಳ ಆತ್ಮಹತ್ಯೆ ಪ್ರಕರಣ: ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು