ಸಂಯುಕ್ತಾ ಪಾಟೀಲ್ ಗೆ ಮತ್ತೊಂದು ಹಿನ್ನಡೆ, ಕಸಿನ್ ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆ!

|

Updated on: Apr 06, 2024 | 10:34 AM

ನಿನ್ನೆ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಗೊಂಡ ಸಂದರ್ಭದಲ್ಲಿ ಹರ್ಷಗೌಡ ಸಹ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಹರ್ಷ, ಸಚಿವ ಶಿವಾನಂದ ಪಾಟೀಲ್ ಸಹೋದರನ ಪುತ್ರ. ಅವರ ಬಿಜೆಪಿ ಸೇರ್ಪಡೆಯಿಂದ ಬಾಗಲಕೋಟೆ ಲೋಕಸಭಾ ಕ್ಷೆತ್ರದ ಮತದಾರರ ಮೇಲೆ ಎಷ್ಟು ಪ್ರಭಾವ ಬೀರುತ್ತದೋ ಗೊತ್ತಿಲ್ಲ ಅದರೆ ಪಾಟೀಲ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ.

ಬೆಂಗಳೂರು: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ (Samyukta Patil) ಅವರಿಗೆ ಯಾಕಾದರೂ ರಾಜಕೀಯಕ್ಕೆ ಬಂದೆನೋ ಅಂತ ಅನಿಸರಲಿಕ್ಕೂ ಸಾಕು ಮಾರಾಯ್ರೇ. ಕ್ಷೇತ್ರದಲ್ಲಿ ಅವರು ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ (Veena Kashappanavar) ಮತ್ತು ಅವರ ಅಸಂಖ್ಯಾತ ಅದರಲ್ಲೂ ವಿಶೇಷವಾಗಿ ಬಹುಸಂಖ್ಯಾತ ಪಂಚಮಸಾಲಿ ಲಿಂಗಾಯತರ ಅಸಮಾಧಾನ ಮತ್ತು ವಿರೋಧ ಎದುರಿಸುತ್ತಿದ್ದಾರೆ. ವೀಣಾ ಅವರಂತೂ ಸಂಯುಕ್ತಾ ಪರ ಪ್ರಚಾರಕ್ಕಿಳಿಯಲ್ಲ ಅಂತ ಜಿದ್ದಿಗೆ ಬಿದ್ದಿದ್ದಾರೆ. ಇಷ್ಟು ಸಾಲದೆಂಬಂತೆ ಸಂಯುಕ್ತಾ ಅವರ ಕಸಿನ್ ಹರ್ಷಗೌಡ ಪಾಟೀಲ್ (Harsh Gouda Patil) ನಿನ್ನೆ ಬಿಜೆಪಿ ಸೇರಿದ್ದಾರೆ. ನಿನ್ನೆ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಗೊಂಡ ಸಂದರ್ಭದಲ್ಲಿ ಹರ್ಷಗೌಡ ಸಹ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಹರ್ಷ, ಸಚಿವ ಶಿವಾನಂದ ಪಾಟೀಲ್ ಸಹೋದರನ ಪುತ್ರ. ಅವರ ಬಿಜೆಪಿ ಸೇರ್ಪಡೆಯಿಂದ ಬಾಗಲಕೋಟೆ ಲೋಕಸಭಾ ಕ್ಷೆತ್ರದ ಮತದಾರರ ಮೇಲೆ ಎಷ್ಟು ಪ್ರಭಾವ ಬೀರುತ್ತದೋ ಗೊತ್ತಿಲ್ಲ ಅದರೆ ಪಾಟೀಲ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ವೀಣಾ ಕಾಶಪ್ಪನವರ್ ಖಂಡಿತವಾಗಿಯೂ ನನ್ನ ಪರ ಪ್ರಚಾರಕ್ಕೆ ಬರಲಿದ್ದಾರೆ: ಸಂಯುಕ್ತ ಪಾಟೀಲ್