AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಎಸ್​​ಎಸ್​​ ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ ಸಿಗುತ್ತೆ: ಶಾಸಕ ಯತ್ನಾಳ್​​ ಆರೋಪ

ಆರ್​​ಎಸ್​​ಎಸ್​​ ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ ಸಿಗುತ್ತೆ: ಶಾಸಕ ಯತ್ನಾಳ್​​ ಆರೋಪ

Anil Kalkere
| Edited By: |

Updated on: Jul 09, 2026 | 5:13 PM

Share

Basanagouda Patil Yatnal on Congress: ಕಾಂಗ್ರೆಸ್ ಪಕ್ಷದಲ್ಲಿ ಆರ್‌ಎಸ್‌ಎಸ್, ಹಿಂದೂ ಧರ್ಮ ಮತ್ತು ದೇಶದ ವಿರುದ್ಧ ಮಾತನಾಡುವವರಿಗೆ ಪ್ರಮೋಷನ್ ನೀಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ನೇರ ನೇಮಕಾತಿ ಪ್ರಕ್ರಿಯೆಯನ್ನು ಭ್ರಷ್ಟಾಚಾರಕ್ಕೆ ದಾರಿ ಎಂದಿರುವ ಅವರು, ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, ಜುಲೈ 09: ದೇಶ, ಹಿಂದೂ ಧರ್ಮ ಮತ್ತು ಆರ್​​ಎಸ್​​ಎಸ್​​ ವಿರುದ್ಧ ಮಾತಾಡುವವರಿಗೆ ರಾಹುಲ್​​ ಗಾಂಧಿ ಕಾಂಗ್ರೆಸ್​​ನಲ್ಲಿ ಬಡ್ತಿ​​ ಕೊಡುತ್ತಾರೆ. ಬಿಕೆ ಹರಿಪ್ರಸಾದ್​​​ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರಿಯಾಂಕ್​​ ಖರ್ಗೆಗೆ ಗೃಹ ಸಚಿವ ಹುದ್ದೆ ಸಿಕ್ಕಿದ್ದು ಇದೇ ಕಾರಣಕ್ಕೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಆರೋಪಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದೂ ಹೀಗೆಯೇ. ದೇಶದ ವಿರುದ್ಧ ಹೇಳಿಕೆ ನೀಡುವುದು, ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ನೇರ ನೇಮಕಾತಿ ಆದೇಶವನ್ನು ತೀವ್ರವಾಗಿ ವಿರೋಧಿಸಿರುವ ಯತ್ನಾಳ್​​, ಇದು ಭ್ರಷ್ಟಾಚಾರಕ್ಕೆ ನೇರ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us