ಕಾಂಗ್ರೆಸ್ ತತ್ವ ಸಿದ್ಧಾಂತಗಳು ಯೋಗೇಶ್ವರ್ಗೆ ಗೊತ್ತು, ಪಕ್ಷಕ್ಕೆ ಹೊಸಬರಲ್ಲ: ಡಿಕೆ ಸುರೇಶ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸುರೇಶ್ ಅವರೇ ಸೂಕ್ತ ಅಭ್ಯರ್ಥಿಯಾಗಬಹುದಿತ್ತಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದ, ಒಂದಷ್ಟು ದಿನ ವಿಶ್ರಾಂತಿ ತಗೆದುಕೊಳ್ಳುವಂತೆ ತನಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ವರಿಷ್ಟರು ಹೇಳಿದ್ದಾರೋ ಅಥವಾ ಖುದ್ದು ಸುರೇಶ್ ರಾಜಕೀಯದಿಂದ ದೂರವಾಗಿದ್ದಾರೋ ಗೊತ್ತಾಗಲಿಲ್ಲ.
ಬೆಂಗಳೂರು: ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರಲು ಪ್ರಮುಖ ಕಾರಣವೆಂದು ಹೇಳಲಾಗುತ್ತಿರುವ ಮಾಜಿ ಸಂಸದ ಡಿಕೆ ಸುರೇಶ್ ನಮ್ಮ ವರದಿಗಾರನಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ಧಾಂತಗಳು ಮುಖ್ಯ, ವ್ಯಕ್ತಿ ಮುಖ್ಯವಲ್ಲ, ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹೊಸಬರಲ್ಲ, ಅವರ ವಿಷಯದಲ್ಲಿ ಪಕ್ಷ ತೆಗೆದುಕೊಂಡಿರುವ ನಿರ್ಣಯಕ್ಕೆ ತಾನು ಸೇರಿದಂತೆ ಎಲ್ಲರೂ ಬದ್ಧರಾಗಿದ್ದರೆ ಎಂದರು. ಜೆಡಿಎಸ್ ಪಕ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯೋಗೇಶ್ವರ್ ಬಿಜೆಪಿ ಕಟ್ಟಾಳು ಅಲ್ಲ, ಸಿದ್ಧಾಂತದಿಂದ ಬಂದವರಲ್ಲ: ಸಿಪಿವೈ ವಿರುದ್ಧ ಅಶೋಕ್ ವಾಗ್ದಾಳಿ