ಮೈಸೂರು: ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ದಸರಾ ವೇಳೆ ಅರಮನೆ ಆವರಣದಲ್ಲಿ ಕಂಜನ್ ಮೇಲೆ ದಾಳಿ ಮಾಡಿದ್ದ ಧನಂಜಯ ಆನೆ ಇದೀಗ ಮತ್ತೊಮ್ಮೆ ದಾಳಿ ಮಾಡಿರುವಂತಹ ಘಟನೆ ಮೈಸೂರು ಶಿಬಿರದಲ್ಲಿ ನಡೆದಿದೆ. ಮಾವುತರು ಮತ್ತು ಕಾವಾಡಿಗರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ವಿಡಿಯೋ ನೋಡಿ.
ಮೈಸೂರು, ಅಕ್ಟೋಬರ್ 23: ಮೈಸೂರು ದಸರಾ ಸಮಯದಲ್ಲಿ ಅರಮನೆ ಆವರಣದಲ್ಲೇ ಕಾದಾಟಕ್ಕೆ ಇಳಿದಿದ್ದ ಕಂಜನ್ ಮತ್ತು ಧನಂಜಯ ಆನೆಗಳ (elephants) ನಡುವೆ ಇದೀಗ ಮತ್ತೆ ಗಲಾಟೆ ನಡೆದಿದೆ. ಆನೆ ಶಿಬಿರದಲ್ಲಿ ಘಟನೆ ನಡೆದಿದ್ದು, ಕಂಜನ್ ಮೇಲೆ ಮತ್ತೊಮ್ಮೆ ಧನಂಜಯ ಆನೆ ದಾಳಿ ಮಾಡಿದೆ. ಮಾವುತರು ಮತ್ತು ಕಾವಾಡಿಗರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸದ್ಯ ಎರಡು ಆನೆಗಳ ನಡುವಿನ ಗಲಾಟೆ ವಿಡಿಯೋ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos