ನಮ್ಮನ್ನೂ ಕೊಲ್ಲಿ ಅಂತ ಅಭಿಜಯ್ ಹೇಳಿದಾಗ ಉಗ್ರರು ನಹೀಂ ತುಮ್ ಜಾಕೆ ಮೋದಿ ಕೋ ಬತಾವ್ ಅಂದರಂತೆ!
ಮಂಜುನಾಥ್ ಅವರನ್ನು ಕೊಂದ ಉಗ್ರರಿಗೆ ಅಭಿಜಯ್ ಮತ್ತು ಪಲ್ಲವಿ, ನಮ್ಮನ್ಯಾಕೆ ಉಳಿಸಿದದ್ದೀರಾ, ನಮ್ಮನ್ನೂ ಕೊದುಬಿಡಿ ಅಂದಾಗ ಅವರು, ನಹೀ ತುಮ್ ಜಾಕೆ ಮೋದಿ ಕೋ ಬೋಲೋ ಅಂದರಂತೆ. ಮೊದಲ ಒಂದು ಗಂಟೆಯವರೆಗೆ ಯಾರೂ ಇವರ ಸಹಾಯಕ್ಕೆ ಬಂದಿಲ್ಲ. ನಿಮಗೆ ಸಹಾಯ ಮಾಡಿದರೆ ಉಗ್ರರು ನಮ್ಮನ್ನೂ ಕೊಂಡು ಬಿಡುತ್ತಾರೆ ಎನ್ನುತ್ತಾ ಜನ ಅಲ್ಲಿಂದ ಓಡುತ್ತಿದ್ದರಂತೆ!
ಶಿವಮೊಗ್ಗ, ಏಪ್ರಿಲ್ 26: ಮಂಗಳವಾರದಂದು ಕಾಶ್ಮೀರ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ (Manjunath Rao) ಅವರ ಮಗ ಅಭಿಜಯ್ ಅಲ್ಲಿ ಭಯಾನಕ ಘಟನೆಯ ಬಗ್ಗೆ ನಮ್ಮ ವರದಿಗಾರನೊಂದಿಗೆ ಮಾತಾಡಿದ್ದಾನೆ. ಅಭಿಜಯ್, ಈಗಿನ್ನೂ 18ರ ಪ್ರಾಯದ ಮೀಸೆಯೂ ಚಿಗುರದ ಹುಡುಗ. ಓದಿನಲ್ಲಿ ಭಾರೀ ಮುಂದು, ಪಿಯು ನಲ್ಲಿ ಶೇಕಡ 96ರಷ್ಟು ಮಾರ್ಕ್ಸ್ ತೆಗೆದಿದ್ದಾನೆ. ಮಂಗಳವಾರದಂದು ತನಗೆ ಗೊತ್ತಿರದ ಪ್ರದೇಶದಲ್ಲಿ ತನ್ನ ಕಣ್ಣ ಮುಂದೆಯೇ ಅಪ್ಪನನ್ನು ಉಗ್ರರು ಗುಂಡಿಟ್ಟು ಕೊಂದ ದೃಶ್ಯವನ್ನು ಹದಿಹರೆಯದ ಬಾಲಕ ಕಣ್ಣಾರೆ ವೀಕ್ಷಿಸಿದ್ದಾನೆ. ಆ ದೃಶ್ಯವನ್ನು ಅವನಾಗಲೀ ಅವನ ತಾಯಿ ಪಲ್ಲವಿಯವರಾಗಲೀ ಯಾವತ್ತಾದರೂ ಮರೆಯಲು ಸಾಧ್ಯವೇ?
ಇದನ್ನು ಓದಿ: ಪತಿ ಮಂಜುನಾಥ್ ಮೇಲೆ ನಡೆದ ಉಗ್ರರ ದಾಳಿಯನ್ನು ಮಾಧ್ಯಮಗಳಿಗೆ ವಿವರಿಸಿದ ಪಲ್ಲವಿ ರಾವ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 26, 2025 11:32 AM