‘ಒಂಟಿ ಮನುಷ್ಯನಾಗಿಯೇ ಉಳಿಯೋದು ನೀನು’; ಕಾರ್ತಿಕ್​ಗೆ ನೇರವಾಗಿ ಹೇಳಿದ ವಿನಯ್

|

Updated on: Nov 08, 2023 | 9:09 AM

ಕಾರ್ತಿಕ್ ಹಾಗೂ ಸಂಗೀತಾ ಎದುರು ಸಿರಿ ಟೀಂನವರು ಕೂಗಾಡಿದ್ದಾರೆ. ‘ನೀನು ಒಂಟಿಯಾಗಿಯೇ ಸಾಯೋದು’ ಎಂದು ಕಾರ್ತಿಕ್​ಗೆ ಹೇಳಿದ್ದಾರೆ ವಿನಯ್. ಈ ಪ್ರೋಮೋ ಗಮನ ಸೆಳೆಯುತ್ತಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್​ನಲ್ಲಿ (Bigg Boss) ಹೊಸ ಹೊಸ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಎಲ್ಲಾ ಟಾಸ್ಕ್​ಗಳು ಭಿನ್ನವಾಗಿವೆ. ಇವುಗಳು ವೀಕ್ಷಕರಿಗೆ ಇಷ್ಟ ಆಗುತ್ತಿವೆ. ಇದರ ಜೊತೆ ಈ ಟಾಸ್ಕ್​ಗಳಿಂದ ಮನೆಯಲ್ಲಿ ಮನಸ್ತಾಪಗಳು ಉಂಟಾಗುತ್ತಿವೆ. ಇಂದು (ನವೆಂಬರ್ 8) ಹೊಸ ಟಾಸ್ಕ್ ಒಂದನ್ನು ನೀಡಲಾಗಿದೆ. ಈ ಟಾಸ್ಕ್​ ಪ್ರಕಾರ ಒಬ್ಬರು ಕುಳಿತಿರುತ್ತಾರೆ. ಅವರ ಎದುರು ಹೋಗಿ ಎದುರಾಳಿಗಳು ಅವರನ್ನು ಕೆಣಕಬೇಕು. ಕಾರ್ತಿಕ್ ಹಾಗೂ ಸಂಗೀತಾ (Sangeetha Sringeri) ಎದುರು ಸಿರಿ ಟೀಂನವರು ಕೂಗಾಡಿದ್ದಾರೆ. ‘ನೀನು ಒಂಟಿಯಾಗಿಯೇ ಸಾಯೋದು’ ಎಂದು ಕಾರ್ತಿಕ್​ಗೆ ಹೇಳಿದ್ದಾರೆ ವಿನಯ್. ಈ ಪ್ರೋಮೋ ಗಮನ ಸೆಳೆಯುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡುವ ಅವಕಾಶವೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ