‘ಕಾರ್ತಿಕ್​ನ ಸಂಗೀತಾ ಟಿಶ್ಯೂ ರೀತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ’; ಬಿಗ್ ಬಾಸ್​ನಲ್ಲಿ ಕೇಳಿತು ಹೊಸ ಆರೋಪ

ಸಂಗೀತಾ ಅವರು ತಮ್ಮ ಆಟಕ್ಕಾಗಿ ಕಾರ್ತಿಕ್ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಅವರ ಕಿವಿಗೆ ಬಿದ್ದರೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ಕಾರ್ತಿಕ್​ನ ಸಂಗೀತಾ ಟಿಶ್ಯೂ ರೀತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ’; ಬಿಗ್ ಬಾಸ್​ನಲ್ಲಿ ಕೇಳಿತು ಹೊಸ ಆರೋಪ
ಸಂಗೀತಾ-ಕಾರ್ತಿಕ್
Follow us
ರಾಜೇಶ್ ದುಗ್ಗುಮನೆ
|

Updated on:Nov 08, 2023 | 7:46 AM

ಕಾರ್ತಿಕ್ ಮಹೇಶ್ (Karthik Mahesh) ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಆಪ್ತತೆ ಬೆಳೆದಿದೆ. ಆರಂಭದಿಂದ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ, ದಿನ ಕಳೆದಂತೆ ಇಬ್ಬರ ಮಧ್ಯೆ ಯಾಕೋ ಹೊಂದಾಣಿಕೆ ಆಗುತ್ತಿಲ್ಲ. ಇವರು ಕಿತ್ತಾಡಿಕೊಳ್ಳೋಕೆ ಶುರು ಮಾಡಿದ್ದಾರೆ. ಇಬ್ಬರ ಮಧ್ಯೆ ಮನಸ್ತಾಪಗಳು ಹೆಚ್ಚಾಗುತ್ತಿವೆ. ಸಂಗೀತಾ ಅವರು ತಮ್ಮ ಆಟಕ್ಕಾಗಿ ಕಾರ್ತಿಕ್ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಅವರ ಕಿವಿಗೆ ಬಿದ್ದರೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ನವೆಂಬರ್ 7ರ ಎಪಿಸೋಡ್​ನಲ್ಲಿ ಮುಂಜಾನೆ ಕಾರ್ತಿಕ್ ಹಾಗೂ ಸಂಗೀತಾ ಬೆಡ್​ನಿಂದ ಒಟ್ಟಿಗೆ ಎದ್ದರು. ಆಗ ಸಂಗೀತಾ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು ಕಾರ್ತಿಕ್. ‘ಎಲ್ಲರೂ ಮಲಗಿದ್ದಾರೆ ಮಾತನಾಡಬೇಡ’ ಎಂದು ಕಾರ್ತಿಕ್​ಗೆ ಸಂಗೀತಾ ಹೇಳಿದರು. ಆದಾಗ್ಯೂ ಕಾರ್ತಿಕ್​ ಮಾತನಾಡೋಕೆ ಹೋದರು. ಇದು ಸಂಗೀತಾಗೆ ಕೋಪ ತರಿಸಿತು. ಈ ಕೋಪ ನೋಡಿ ಕಾರ್ತಿಕ್​ಗೆ ಅಸಮಾಧಾನ ಆಗಿದೆ.

‘ಶ್ ಅಂದ ತಕ್ಷಣ ನಾನು ಸುಮ್ಮನಿರಬೇಕು. ಇಷ್ಟೊಂದು ಡಾಮಿನೇಷನ್ ಆದರೆ ನನ್ನ ಬಳಿ ಸಾಧ್ಯವಿಲ್ಲ’ ಎಂದು ಸಂಗೀತಾ ಬಗ್ಗೆ ಕಾರ್ತಿಕ್ ಅವರು ತನಿಷಾ ಬಳಿ ಹೇಳಿದ್ದಾರೆ. ತನಿಷಾ ಅವರು ಕಾರ್ತಿಕ್​ನ ಸಮಾಧಾನ ಮಾಡೋಕೆ ಪ್ರಯತ್ನಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕುಳಿತು ನೋಡುತ್ತಿದ್ದರು. ಅವರು ಈ ಜೋಡಿ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದರು.

‘ಸಂಗೀತಾ ಸ್ಟ್ರಾಂಗ್ ಆಗಿದ್ದಾರೆ. ಅವರಿಗೆ ಬೇರೆಯವರ ಸಹಾಯ ಬೇಡ. ಆದಾಗ್ಯೂ ಕಾರ್ತಿಕ್ ಜೊತೆ ಅವಳು ಆಪ್ತವಾಗಿದ್ದಾಳೆ. ಅವಳಿಗೆ ಕಾರ್ತಿಕ್ ಟಿಶ್ಯೂ ಪೇಪರ್ ಇದ್ದ ಹಾಗೆ. ಮುಖ ಒರೆಸಿಕೊಂಡು ಬಿಸಾಕುತ್ತಾಳೆ’ ಎಂದು ವರ್ತೂರು ಸಂತೋಷ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದರು. ಇದಕ್ಕೆ ತುಕಾಲಿ ಸಂತೋಷ್ ಅವರು ಹೌದು ಎಂಬಂತೆ ತಲೆ ಅಲ್ಲಾಡಿಸಿದ್ದಾರೆ.

ಇದನ್ನೂ ಓದಿ: ‘ನಾನು ನಿಮ್ಮ ಉದ್ಯೋಗಿ ಅಲ್ಲ’; ಸಂಗೀತಾ, ತನಿಷಾ ಜೊತೆ ಜಗಳಕ್ಕೆ ಇಳಿದ ಸ್ನೇಹಿತ್

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರತಿ ದಿನ ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ. ಈ ಬಾರಿ ಬಿಗ್ ಬಾಸ್​ಗೆ ಒಳ್ಳೆಯ ಟಿಆರ್​ಪಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:37 am, Wed, 8 November 23

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ