ಯುವಕ ಯುವತಿಯರಲ್ಲಿ ಹೃದಯಾಘಾತ; ಸರ್ಕಾರ ಕಾರಣ ಪತ್ತೆ ಮಾಡಬೇಕು: ಜೈರಾಜ್, ಹರ್ಷಿತಾ ಸಂಬಂಧಿ
ಆಹಾರ ಕ್ರಮದಿಂದ ಅಥವಾ ಚಟುವಟಿಕೆಯಿಲ್ಲದ ಜೀವನ ಶೈಲಿಯಿಂದಾಗಿ ಚಿಕ್ಕವಯಸ್ಸಿನವರು ಹೃದಯಾಘಾತಕ್ಕೊಳಗಾಗತ್ತಿದ್ದಾರಾ ಅನ್ನೋದನ್ನು ಸರ್ಕಾರ ಬೇಗ ತಿಳಿಸಬೇಕು, ಪ್ರತಿದಿನ ಯುವತಕ ಯುವತಿಯರು ಹೀಗೆ ಸಾಯುತ್ತಿದ್ದರೆ ಸಹಜವಾಗೇ ಎಲ್ಲರೂ ಗಾಬರಿಗೊಳಗಾಗುತ್ತಾರೆ, ಹರ್ಷಿತಾ ಎಲ್ಲರೊಂದಿಗೆ ಚೆನ್ನಾಗಿ ಮಾತಾಡಿಕೊಂಡಿದ್ದಳು, ಇದ್ದಕ್ಕಿದ್ದಂತೆ ಬಂದ ಎದೆನೋವಿಂದ ಸತ್ತಿದ್ದಾಳೆ ಎಂದು ಜೈರಾಜ್ ಹೇಳುತ್ತಾರೆ.
ಹಾಸನ, ಜುಲೈ 1: ಕೇವಲ 37 ದಿನಗಳ ಹಿಂದೆ ಹೆಣ್ಣಮಗುವೊಂದಕ್ಕೆ ಜನ್ಮ ನೀಡಿದ್ದ 22-ವರ್ಷ ವಯಸ್ಸಿನ ಹರ್ಷಿತಾ (Harshita) ಅಸಲಿಗೆ ಶಿವಮೊಗ್ಗ ಜಿಲ್ಲೆಯವರು. ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ಹಾಸನ ಜಿಲ್ಲೆ ಕೊಮ್ಮೆನಳ್ಳಿಯ ಪವನ್ ಕುಮಾರ್ ಎನ್ನುವವರನ್ನು ಮದುವೆಯಾಗಿದ್ದರು. ಹೆರಿಗೆ ಮತ್ತು ಬಾಣಂತನಕ್ಕೆ ಶಿವಮೊಗ್ಗದಲ್ಲಿರುವ ಅಮ್ಮನೂರಿಗೆ ಹೋಗಿದ್ದ ಹರ್ಷಿತಾ ನಿನ್ನೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪತಿಯ ಊರಲ್ಲಿ ನಡೆದ ಹರ್ಷಿತಾ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಆವರ ಸಂಬಂಧಿ ಜೈರಾಜ್ ಎನ್ನುವವರು ಮಾಧ್ಯಮಗಳೊಂದಿಗೆ ಮಾತಾಡಿ, ಜಿಲ್ಲೆಯಲ್ಲಿ ಚಿಕ್ಕವಯಸ್ಸಿನವರು ಯಾಕೆ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ ಅಂತ ಸರ್ಕಾರ ವೈದ್ಯರ ಮೂಲಕ ಆದಷ್ಟು ಬೇಗ ಕಂಡುಹಿಡಿಯಬೇಕು, ಯುವಜನತೆಯಲ್ಲಿ ಭಾರೀ ಆತಂಕ ಮೂಡಿದೆ ಎಂದರು.
ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ