Bike Wheeling: ಅಂತರಗಂಗೆ ರಸ್ತೆಯಲ್ಲಿ ಯುವಕರ ಬೈಕ್ ವೀಲಿಂಗ್, ಕ್ರಮಕ್ಕೆ ಸ್ಥಳೀಯರ ಒತ್ತಾಯ

| Updated By: ಆಯೇಷಾ ಬಾನು

Updated on: Jan 31, 2024 | 1:07 PM

ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಕೆಲ ಯುವಕರು  ಬೈಕ್ ವೀಲಿಂಗ್ ಮಾಡಿದ್ದಾರೆ. ವೀಲಿಂಗ್ ವೇಳೆ ಅಪಘಾತ ಸಂಭವಿಸಿದರೆ ಅಮಾಯಕ ಜೀವ ಹೋಗುವ ಸಾಧ್ಯತೆ ಇದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಲಾರ, ಜ.31: ಯುವಕರಲ್ಲಿ ಬೈಕ್ ವೀಲಿಂಗ್ (Bike Wheeling) ಕ್ರೇಜ್ ಹೆಚ್ಚಾಗಿದೆ. ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ, ಕಂಬಿ ಹಿಂದೆ ಕೂರಿಸಿದರೂ ವೀಲಿಂಗ್ ಮಾಡುವುದನ್ನು ನಿಲ್ಲಿಸಲ್ಲ. ಇತರೆ ವಾಹನ ಸವಾರರಿಗೆ ಸಮಸ್ಯೆಯಾಗುತ್ತೆ, ಅಪಘಾತ ಸಂಭವಿಸಬಹುದು ಎಂದು ತಿಳಿದಿದ್ದರೂ ವೀಲಿಂಗ್ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಪ್ರತಿ ದಿನ ಒಂದಲ್ಲಾ ಒಂದು ಕಡೆಗಳಲ್ಲಿ ಯುವಕರು ವೀಲಿಂಗ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ಕೋಲಾರ ನಗರದಲ್ಲಿ ಬೈಕ್ ವೀಲಿಂಗ್ ಮಾಡಿ ಕೆಲ ಯುವಕರು ಪುಂಡಾಟ ಮೆರೆದಿದ್ದಾರೆ.

ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಕೆಲ ಯುವಕರು  ಬೈಕ್ ವೀಲಿಂಗ್ ಮಾಡಿದ್ದಾರೆ. ಡಿಯೋ ಬೈಕ್ ನಲ್ಲಿ ವೀಲಿಂಗ್ ಮಾಡಿದ್ದು ವೀಲಿಂಗ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ. ವೀಲಿಂಗ್ ವೇಳೆ ಅಪಘಾತ ಸಂಭವಿಸಿದರೆ ಅಮಾಯಕ ಜೀವ ಹೋಗುವ ಸಾಧ್ಯತೆ ಇದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ