ಬೆಂಗಳೂರಿನಲ್ಲಿ ಹೆಚ್ಚಾದ ಯುವಕರ ಪುಂಡಾಟ, ಬೈಕ್ ವೀಲ್ಹಿಂಗ್ ಮಾಡುತ್ತ ಅಟ್ಟಹಾಸ
ಬೆಂಗಳೂರಿನ ಬಾಬುಸಪಾಳ್ಯದ ಟಿನ್ ಫಾಕ್ಟರಿ ರಿಂಗ್ ರೋಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕರು ವೀಲ್ಹಿಂಗ್ ಮಾಡಿದ್ದಾರೆ. ಡುರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಸೆರೆಹಿಡಿದಿರುವ ಸಾರ್ವಜನಿಕರು ಯುವಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವೀಲ್ಹಿಂಗ್ ವಿಡಿಯೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಯುವಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಂಗಳೂರು, ಫೆ.19: ಬೆಂಗಳೂರಿನಲ್ಲಿ ಯುವಕರು ಅಪಾಯಕಾರಿ ರೀತಿಯಲ್ಲಿ ವೀಲ್ಹಿಂಗ್ (Bike Wheeling) ಮಾಡುವುದು ಹೆಚ್ಚಾಗಿದೆ. ಎಷ್ಟೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರೂ ಯುವಕರು ಭಯಾನಕ ವೀಲ್ಹಿಂಗ್ ಮಾಡಿ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡುತ್ತಿದ್ದಾರೆ. ಬೆಂಗಳೂರಿನ ಬಾಬುಸಪಾಳ್ಯದ ಟಿನ್ ಫಾಕ್ಟರಿ ರಿಂಗ್ ರೋಡ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕರು ವೀಲ್ಹಿಂಗ್ ಮಾಡಿದ್ದಾರೆ.
ದ್ವಿಚಕ್ರ ವಾಹನದ ಮೇಲೆ ನಿಂತು ವೀಲ್ಹಿಂಗ್ ಮಾಡಿರುವ ಯುವಕರ ವಿಡಿಯೋ ಸೆರೆಯಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇಲ್ಲ. ಸದ್ಯ ವೀಲ್ಹಿಂಗ್ ವಿಡಿಯೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಯುವಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ನಡುರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಸೆರೆಹಿಡಿದಿರುವ ಸಾರ್ವಜನಿಕರು ಯುವಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Feb 19, 2024 11:33 AM