ನೆಲಮಂಗಲ: ಪಿಸ್ಟಲ್ ಹಿಡಿದು ಚಿನ್ನಾಭರಣ ಅಂಗಡಿಗೆ ನುಗ್ಗಿದ ಆಗುಂತಕರು ಏನನ್ನೂ ದೋಚದೆ ವಾಪಸ್ಸು ಹೋದರು!
ಕಪ್ಪುಬಟ್ಟೆ ಧರಿಸಿ ಇಬ್ಬರು ಯುವಕರ ಪೈಕಿ ಒಬ್ಬನ ಕೈಯಲ್ಲಿ ಪಿಸ್ಟಲ್ ಇದೆ. ಕಪ್ಪುವಸ್ತ್ರಧಾರಿಗಳು ನೇರವಾಗಿ ಅಂಗಡಿಯ ಮಾಲೀಕನ ಮೇಲೆ ಅಟ್ಯಾಕ್ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ, ಮಾಲೀಕ ಹಿಂಬಾಗಿಲನ್ನು ಓಪನ್ ಮಾಡಿ ಒಳಗೋಡಿ ತಪ್ಪಿಸಿಕೊಳ್ಳುತ್ತಾನೆ. ಆಗ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರೂ ಯುವಕರು ಏನನ್ನೂ ದೋಚದೆ ಅಲ್ಲಿಂದ ಪರಾರಿಯಾಗುತ್ತಾರೆ.
ನೆಲಮಂಗಲ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆಯೇ ಮತ್ತು ಕಳ್ಳಕಾಕರಿಗೆ ಕಾನೂನಿನ ಭಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಶಂಕೆ ಈ ವಿಡಿಯೋ ನೋಡಿದ ನಂತರ ಎರಡು ಜಿಲ್ಲೆಗಳ ನಾಗರಿಕರನ್ನು ಕಾಡಿದರೆ ಆಶ್ಚರ್ಯವಿಲ್ಲ. ಬೆಳಗಿನ 9 ಗಂಟೆ ಸುಮಾರಿಗೆ ನಾಲ್ವರು ಯುವಕರು ಕೈಯಲ್ಲೊಂದು ಪಿಸ್ಟಲ್ (pistol) ಹಿಡಿದು ನೆಲಮಂಗಲದ (Nelamangala) ಭೈರವೇಶ್ವರ ಸರ್ಕಲ್ ನಲಲ್ಲಿರುವ ಒಂದು ಚಿನ್ನಾಭರಣಗಳ ಅಂಗಡಿಗೆ (jewelry shop) ನುಗ್ಗುತ್ತಾರೆ. ಮೊದಲಿಬ್ಬರು ಬರುತ್ತಾರೆ ಆಮೇಲೆ ಮತ್ತಿಬ್ಬರು. ಕಪ್ಪುಬಟ್ಟೆ ಧರಿಸಿ ಇಬ್ಬರು ಯುವಕರ ಪೈಕಿ ಒಬ್ಬನ ಕೈಯಲ್ಲಿ ಪಿಸ್ಟಲ್ ಇದೆ. ಕಪ್ಪುವಸ್ತ್ರಧಾರಿಗಳು ನೇರವಾಗಿ ಅಂಗಡಿಯ ಮಾಲೀಕನ ಮೇಲೆ ಅಟ್ಯಾಕ್ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ, ಮಾಲೀಕ ಹಿಂಬಾಗಿಲನ್ನು ಓಪನ್ ಮಾಡಿ ಒಳಗೋಡಿ ತಪ್ಪಿಸಿಕೊಳ್ಳುತ್ತಾನೆ.
ಆಗ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರೂ ಯುವಕರು ಏನನ್ನೂ ದೋಚದೆ ಅಲ್ಲಿಂದ ಪರಾರಿಯಾಗುತ್ತಾರೆ. ಕಳುವು ಅವರ ಉದ್ದೇಶವಾಗಿತ್ತೋ ಇಲ್ಲವೋ ಅಂತ ತನಿಖೆಯ ನಂತರ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ಯುವಕರಲ್ಲಿ ಪಿಸ್ಟಲ್ ಹೇಗೆ ಬಂತು ಅಂತ ಪೊಲೀಸರೇ ಹೇಳಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

