ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ

Updated on: Jul 09, 2026 | 9:33 PM

ಮುಖ್ಯಾಂಶಗಳು

  • ‘ದೇವಿ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ ಯುವ ರೈತ ಚೇತನ್.
  • ಚಿತ್ರದ ಸುದ್ದಿಗೋಷ್ಠಿಗೆ ಹಿರಿಯ ರೈತರನ್ನು ವೇದಿಕೆಗೆ ಕರೆಸಿ, ಅವರಿಂದಲೇ ಚಿತ್ರಕ್ಕೆ ಶುಭ ಹಾರೈಸಿಸಿದ್ದು ವಿಶೇಷವಾಗಿತ್ತು.
  • ‘ಬಿಗ್ ಬಾಸ್’ ರಿಯಾಲಿಟಿ ಶೋ ಖ್ಯಾತಿಯ ಭವ್ಯಾ ಗೌಡ ಈ ಚಿತ್ರದಲ್ಲಿ ಚೇತನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ದೇವಿ’ ಸಿನಿಮಾ ಮೂಲಕ ಯುವ ರೈತ ಚೇತನ್ ಹೀರೋ ಆಗುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ನಡೆದಿದೆ. ಸಿನಿಮಾಗೆ ಶುಭ ಕೋರಲು ರೈತರನ್ನೇ ವೇದಿಕೆಗೆ ಕರೆಸಲಾಯಿತು. ದೊಡ್ಡ ಬಜೆಟ್​ನಲ್ಲಿಯೇ ಈ ಚಿತ್ರವನ್ನು ಮಾಡುತ್ತಿರುವುದಾಗಿ ಚೇತನ್ ಹೇಳಿದ್ದಾರೆ. ‘ದೇವಿ’ ಚಿತ್ರಕ್ಕೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಖ್ಯಾತಿಯ ಭವ್ಯಾ ಗೌಡ ನಾಯಕಿ.​

‘ದೇವಿ’ ಸಿನಿಮಾ ಮೂಲಕ ಯುವ ರೈತ ಚೇತನ್ ಅವರು ಹೀರೋ ಆಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಚಿತ್ರಕ್ಕೆ ಶುಭ ಹಾರೈಸಲು ರೈತರನ್ನೇ ವೇದಿಕೆಗೆ ಕರೆಸಿದ್ದು ವಿಶೇಷವಾಗಿತ್ತು. ‘ದೇಶದ ಬೆನ್ನೆಲುಬು ರೈತ ಅಂತ ಹೇಳುತ್ತಾರೆ. ಆದರೆ ಯುವ ರೈತರು ಇಂದು ವ್ಯವಸಾಯಕ್ಕೆ ಬರುತ್ತಿಲ್ಲ. ಇಂದು ನಮ್ಮ ಚೇತನ್ ಅವರು ಯುವ ರೈತ ಎಂಬ ಬಿರುದಿನೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಎಲ್ಲ ರೀತಿಯ ಶೋಷಣೆಗೆ ಒಳಪಡುವವನೇ ರೈತ. ಚೇತನ್ ಅವರು ಎಲ್ಲ ರೈತನಿಗೆ ಮಾದರಿ ಆಗಲಿ. ಎಲ್ಲ ರೈತರ ಪರವಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ. ನಮ್ಮೆಲ್ಲರ ಪ್ರೋತ್ಸಾಹ ಹಾಗೂ ಆಶೀರ್ವಾದ ಇರುತ್ತದೆ’ ಎಂದು ಹಿರಿಯ ರೈತರು ಸುದ್ದಿಗೋಷ್ಠಿಯಲ್ಲಿ ಚೇತನ್ ಅವರಿಗೆ ಶುಭ ಕೋರಿದರು. ದೊಡ್ಡ ಬಜೆಟ್​ನಲ್ಲಿಯೇ ಈ ಸಿನಿಮಾ ಮಾಡುತ್ತಿರುವುದಾಗಿ ಚೇತನ್ ಅವರು ಹೇಳಿದ್ದಾರೆ. ‘ದೇವಿ’ ಸಿನಿಮಾಗಾಗಿ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ (Bhavya Gowda) ಅವರು ನಾಯಕಿ ಆಗಿದ್ದಾರೆ.​

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More