AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾಗೆ ನಾಯಕಿ ಆದ ನಟಿ ಭವ್ಯಾ ಗೌಡ; ಚಿತ್ರಕ್ಕೆ ‘ದೇವಿ’ ಟೈಟಲ್

'ಗೀತಾ' ಧಾರಾವಾಹಿಯ ಮೂಲಕ ಮನೆಮಾತಾಗಿ, ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ಭವ್ಯಾ ಗೌಡ ಈಗ ಬೆಳ್ಳಿತೆರೆಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಪ್ರಸ್ತುತ 'ಕರ್ಣ' ಧಾರಾವಾಹಿಯಲ್ಲಿ ನಟಿಸುತ್ತಿರುವ ಇವರು, ಈಗ 'ದೇವಿ' ಎಂಬ ಹೊಸ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಯುವ ರೈತ ಚೇತನ್ ಗೌಡ ಜೊತೆ ನಟಿಸುತ್ತಿರುವ ಭವ್ಯಾ, ಕಿರುತೆರೆ ಹಾಗೂ ಹಿರಿತೆರೆ ಎರಡನ್ನೂ ಸಮತೋಲನ ಮಾಡುತ್ತಿದ್ದಾರೆ.

ಸಿನಿಮಾಗೆ ನಾಯಕಿ ಆದ ನಟಿ ಭವ್ಯಾ ಗೌಡ; ಚಿತ್ರಕ್ಕೆ ‘ದೇವಿ’ ಟೈಟಲ್
ಭವ್ಯಾ ಗೌಡ
ರಾಜೇಶ್ ದುಗ್ಗುಮನೆ
|

Updated on: Jul 09, 2026 | 10:44 AM

Share

ಮುಖ್ಯಾಂಶಗಳು

  • 'ದೇವಿ' ಚಿತ್ರದ ಮೂಲಕ ಸಿನಿಮಾರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಭವ್ಯಾ ಗೌಡ
  • ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಭವ್ಯಾ
  • ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಭವ್ಯಾ ಗೌಡ

‘ಗೀತಾ’ ಧಾರಾವಾಹಿ ಮೂಲಕ ಗಮನ ಸೆಳೆದವರು ನಟಿ ಭವ್ಯಾ ಗೌಡ (Bhavya Gowda). ಆ ಬಳಿಕ ಬಿಗ್ ಬಾಸ್ ಶೋಗೆ ಆಗಮಿಸಿದರು. ಅಲ್ಲಿ ಅದ್ಭುತವಾಗಿ ಟಾಸ್ಕ್​​ಗಳನ್ನು ಆಡುವ ಮೂಲಕ ಗಮನ ಸೆಳೆದರು. ಈಗ ಭವ್ಯಾ ಗೌಡ ಅವರು ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ‘ದೇವಿ’ ಹೆಸರಿನ ಸಿನಿಮಾಗೆ ನಾಯಕಿ ಆಗಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಯುವ ರೈತ ಚೇತನ್ ಗೌಡ ಹಾಗೂ ಬಿಗ್ ಬಾಸ್ ಖ್ಯಾತಿಯ ಭವ್ಯ ಗೌಡ ‘ದೇವಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತದ ಪತ್ರಿಕಾಗೋಷ್ಠಿಯನ್ನು ಇಂದು (ಜುಲೈ 9) ಆಯೋಜಿಸಲಾಗಿದ್ದು, ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಈ ವೇಳೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಇದೆ.

ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧೆ ಮಾಡಿದ್ದರು. ಈ ಶೋ 2024ರಲ್ಲಿ ಪ್ರಾರಂಭವಾಯಿತು. ಅವರು ಉತ್ತಮವಾಗಿ ಆಟ ಪ್ರದರ್ಶನ ಮಾಡಿದ್ದರು. ಇದರಿಂದ ಅವರಿಗೆ ಆಫರ್ ಹೆಚ್ಚಿತು. ಶೋನಲ್ಲಿ ಇರುವಾಗಲೇ ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋಗೆ ಅವಕಾಶ ಸಿಕ್ಕಿತ್ತು. ಆದರೆ, ಇದನ್ನು ಅವರು ತಿರಸ್ಕರಿಸಿದರು.

ಇದನ್ನೂ ಓದಿ: ಅಂದು ಮುದ್ದು ಕಂದಮ್ಮ, ಇಂದು ಕಿರುತೆರೆ ಸುಂದರಿ: ಧೂಳೆಬ್ಬಿಸಿದ ಭವ್ಯಾ ಗೌಡ ಬಾಲ್ಯದ ಫೋಟೋ

ಆ ಬಳಿಕ ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಟಿಸೋ ಅವಕಾಶವನ್ನು ಭವ್ಯಾ ಗೌಡ ಪಡೆದುಕೊಂಡರು. ಈಗ ಭವ್ಯಾ ಅವರು ಈ ಧಾರಾವಾಹಿಯಲ್ಲಿ ಯಶಸ್ವಿಯಾಗಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಸಿನಿಮಾ ಅವಕಾಶ ಸಿಕ್ಕಿದೆ. ಅನೇಕ ಕಲಾವಿದರು ಹಿರಿತೆರೆ ಹಾಗೂ ಕಿರುತೆರೆ ಎರಡನ್ನೂ ಸಮದೂಗಿಸಿಕೊಂಡು ಹೋಗುತ್ತಿದ್ದಾರೆ. ಈಗ ಅದರಲ್ಲಿ ನಟಿ ಭವ್ಯಾ ಗೌಡ ಕೂಡ ಒಬ್ಬರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us