ಪುನೀತ್ ಚಿತ್ರದ ಮೇಲೆ ಆಟೊಗ್ರಾಫ್ ನೀಡುವಂತೆ ಫ್ಯಾನ್ಸ್ ಮನವಿ; ಯುವ ರಾಜ್ಕುಮಾರ್ ಪ್ರತಿಕ್ರಿಯೆ ಏನಿತ್ತು?
Yuva Rajkumar | Puneeth Rajkumar: ನಟ ಯುವ ರಾಜ್ಕುಮಾರ್ ತಮ್ಮ ನಡವಳಿಕೆಯಿಂದ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ. ಘಟನೆಯೇನು? ವಿಡಿಯೋ ಇಲ್ಲಿದೆ.
ಈಗಾಗಲೇ ಸ್ಯಾಂಡಲ್ವುಡ್ನಲ್ಲಿ (Sandalwood) ಅಪಾರ ನಿರೀಕ್ಷೆ ಹುಟ್ಟುಹಾಕಿರುವ ಯುವ ರಾಜ್ಕುಮಾರ್ (Yuva Rajkumar) ಅವರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಅವರು ತಮ್ಮ ನಡವಳಿಕೆಯಿಂದ ಮತ್ತೆ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ಅಭಿಮಾನಿಗಳು ಯುವ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಆಗ ಅಭಿಮಾನಿಗಳ ಕಾರಿನ ಹಿಂಭಾಗದಲ್ಲಿದ್ದ ಪುನೀತ್ ರಾಜ್ಕುಮಾರ್ (Puneeth Rajkumar) ಫೋಟೋಕ್ಕೆ ಸವಿನೆನಪಿನ ಕಾರಣದಿಂದ ಸಹಿ ಹಾಕುವಂತೆ ಯುವ ರಾಜ್ಕುಮಾರ್ ಅವರನ್ನು ಕೋರಿಕೊಂಡಿದ್ದಾರೆ. ಇದನ್ನು ನಯವಾಗಿಯೇ ತಿರಸ್ಕರಿಸಿದ ಯುವ ರಾಜ್ಕುಮಾರ್, ಅವರ ಫೋಟೋದ ಮೇಲೆ ಸಹಿ ಹಾಕುವುದಿಲ್ಲ. ಅದು ಸರಿಯಾಗುವುದಿಲ್ಲ ಎಂದಿದ್ದಾರೆ. ನಂತರ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾರಿನ ಒಳಭಾಗದಲ್ಲಿ ಆಟೋಗ್ರಾಫ್ ನೀಡಿದ್ದಾರೆ. ಈ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ವೈರಲ್ ಆಗಿದೆ. ಯುವ ರಾಜ್ಕುಮಾರ್ ಅವರ ಗುಣಕ್ಕೆ ಅಭಿಮಾನಿಗಳು ತಲೆದೂಗಿದ್ದಾರೆ.
ಇದನ್ನೂ ಓದಿ:
ಅಪ್ಪು-ಅಂಬಿ ಫ್ಯಾನ್ಸ್ ನಡುವೆ ಮನಸ್ತಾಪ? ರಸ್ತೆಗೆ ಪುನೀತ್ ಹೆಸರಿಡುವುದಕ್ಕೆ ಅಂಬರೀಷ್ ಅಭಿಮಾನಿಗಳ ಆಕ್ಷೇಪ
ಗಣರಾಜ್ಯೋತ್ಸವಕ್ಕೆ ರಿಲೀಸ್ ಆಗಲಿದೆ ಪುನೀತ್ ನಟನೆಯ ‘ಜೇಮ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್