ಜೊಮ್ಯಾಟೊ ಡೆಲಿವರಿ ಬಾಯ್ ಧರಿಸಿದ್ದ ಸಾಂತಾಕ್ಲಾಸ್ ಡ್ರೆಸ್ ಬಿಚ್ಚಿಸಿದ ಹಿಂದೂಗಳು
ಜೊಮ್ಯಾಟೊ ಡೆಲಿವರಿ ಮಾಡುವ ವ್ಯಕ್ತಿ ಇಂದೋರ್‌ನಲ್ಲಿ ಸಾಂತಾಕ್ಲಾಸ್ ವೇಷಭೂಷಣವನ್ನು ತೆಗೆದುಹಾಕಲು ಕೆಲವು ಹಿಂದೂಪರ ಸಂಘಟನೆಗಳ ಜನರು ಒತ್ತಾಯಿಸಿದ್ದಾರೆ. ಕ್ರಿಸ್‌ಮಸ್‌ನಲ್ಲಿ ಸಾಂಟಾ ಕ್ಲಾಸ್‌ನಂತೆ ಡ್ರೆಸ್ ಧರಿಸಿದ್ದ ಜನರಿಗೆ ಆಹಾರದ ಆರ್ಡರ್‌ಗಳನ್ನು ನೀಡಲು ಬಂದಿದ್ದ ಇಂದೋರ್‌ನ ಝೊಮಾಟೊ ಡೆಲಿವರಿ ಏಜೆಂಟ್‌ಗೆ ಪ್ರಶ್ನಿಸಿದ ಬಲಪಂಥೀಯ ಸಂಘಟನೆಯ ಸದಸ್ಯರು ಆ ವೇಷಭೂಷಣವನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.
ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಜೊಮ್ಯಾಟೊ ಡೆಲಿವರಿ ಮಾಡುವ ವ್ಯಕ್ತಿಯೊಬ್ಬರಿಗೆ ಹಿಂದೂಪಗಳ ಗುಂಪೊಂದು ಕ್ರಿಸ್ಮಸ್ ಸಂದರ್ಭದಲ್ಲಿ ಕ್ಲಾಸ್ ತೆಗೆದುಕೊಂಡಿದೆ. ನೀವು ಹೋಳಿ, ದೀಪಾವಳಿ ಹಬ್ಬದಂದು ಕೇಸರಿ ಬಟ್ಟೆ ಧರಿಸುತ್ತೀರಾ? ಕ್ರಿಸ್ಮಸ್ಗೆ ಏಕೆ ಸಾಂತ್ಲಾಕ್ಲಾಸ್ ಡ್ರೆಸ್ ಧರಿಸಿದ್ದೀರಿ ಎಂದು ಅವರು ಪ್ರಶ್ನೆ ಮಾಡಿದ್ದು, ಬಲವಂತವಾಗಿ ಆ ಡ್ರೆಸ್ ಬಿಚ್ಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ