Greek Earthquake: ಗ್ರೀಕ್​ನ ದ್ವೀಪದಲ್ಲಿ ಪ್ರಬಲ ಭೂಕಂಪ; ಒಬ್ಬ ಸಾವು, 9 ಜನರಿಗೆ ಗಾಯ

| Updated By: Lakshmi Hegde

Updated on: Sep 27, 2021 | 4:26 PM

ಭೂಕಂಪ ಸೋಮವಾರ ಬೆಳಗ್ಗೆ 9.17ರ ಹೊತ್ತಿಗೆ ಗ್ರೀಕ್​ ರಾಜಧಾನಿ ಅಥೆನ್ಸ್​​ನ ದಕ್ಷಿಣ-ಆಗ್ನೇಯಕ್ಕೆ 246 ಕಿಮೀ ದೂರಲ್ಲಿ ಸಂಭವಿಸಿದೆ ಎಂದು  ಅಥೆನ್ಸ್ ಜಿಯೋಡೈನಾಮಿಕ್ ಸಂಸ್ಥೆ ಮಾಹಿತಿ ನೀಡಿದೆ.

Greek Earthquake: ಗ್ರೀಕ್​ನ ದ್ವೀಪದಲ್ಲಿ ಪ್ರಬಲ ಭೂಕಂಪ; ಒಬ್ಬ ಸಾವು, 9 ಜನರಿಗೆ ಗಾಯ
ಭೂಕಂಪವಾಗುತ್ತಿದ್ದಂತೆ ಶಾಲೆಯೊಳಗಿಂದ ಮಕ್ಕಳನ್ನು ಹೊರಗೆ ಕರೆತರಲಾಯಿತು
Follow us on
ಗ್ರೀಕ್​ನ ಕ್ರೀಟ್​ ದ್ವೀಪ (Greek Earthquake)ದಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಸುಮಾರು 9 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಮನೆಗಳು, ಚರ್ಚೆಗಳು ಕುಸಿದಿದ್ದು, ಕಲ್ಲುಬಂಡೆಗಳೆಲ್ಲ ಒಡೆದುಬಿದ್ದಿವೆ.  ಅರ್ಕಲೋಹರಿ ಗ್ರಾಮದಲ್ಲಿರುವ ಚರ್ಚ್​ವೊಂದು ಕುಸಿದುಬಿದ್ದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಗಾಯಗೊಂಡ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.8ರಷ್ಟು ದಾಖಲಾಗಿದೆ. ಹೆರಾಕ್ಲಿಯನ್​ ನಗರದಲ್ಲಿ ಭೂಮಿ ನಡುಗುತ್ತಿದ್ದಂತೆ ಜನರೆಲ್ಲ ಬೀದಿಗೆ ಓಡಿದ್ದಾರೆ. ಶಾಲೆಗಳನ್ನು ಮುಚ್ಚಿ, ಮಕ್ಕಳಿಗೆ  ಮನೆಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. 
ಭೂಕಂಪ ಸೋಮವಾರ ಬೆಳಗ್ಗೆ 9.17ರ ಹೊತ್ತಿಗೆ ಗ್ರೀಕ್​ ರಾಜಧಾನಿ ಅಥೆನ್ಸ್​​ನ ದಕ್ಷಿಣ-ಆಗ್ನೇಯಕ್ಕೆ 246 ಕಿಮೀ ದೂರಲ್ಲಿ ಸಂಭವಿಸಿದೆ ಎಂದು  ಅಥೆನ್ಸ್ ಜಿಯೋಡೈನಾಮಿಕ್ ಸಂಸ್ಥೆ ಮಾಹಿತಿ ನೀಡಿದೆ. ನಾವು ಹಲವು ತಿಂಗಳುಗಳಿಂದ ಈ ಪ್ರದೇಶವನ್ನು ಗಮನಿಸುತ್ತಿದ್ದೇವೆ. ಈಗ ಸಂಭವಿಸಿದ ಭೂಕಂಪದ ಬಗ್ಗೆ ಹಿಂದೆಯೇ ಎಚ್ಚರಿಕೆಯನ್ನೂ ನೀಡಿದ್ದೆವು. ಇಂದಿನ ಭೂಕಂಪ ಸಾಗರದ ಅಡಿಯಿಂದ ಆಗಿದ್ದಲ್ಲ, ಭೂಮಿಯಡಿಯಲ್ಲೇ ಆಗಿದೆ. ಜನರಿಗೆ ತೊಂದರೆಯನ್ನುಂಟು ಮಾಡಿದೆ ಎಂದು ಗ್ರೀಸ್​ನ ಭೂಕಂಪಶಾಸ್ತ್ರಜ್ಞ ಗೆರಾಸಿಮೊಸ್ ಪಾಪಡೋಪೌಲೋಸ್ ಹೇಳಿದ್ದಾರೆ.
ಇದೀಗ ಗ್ರೀಕ್​​ನ ದ್ವೀಪದಲ್ಲಿ ಉಂಟಾದ ಭೂಕಂಪದ ತೀವ್ರತೆಯನ್ನು ವಿವಿಧ ಭೂಕಂಪನಶಾಸ್ತ್ರ ಕೇಂದ್ರಗಳು ಬೇರೆಬೇರೆ ರೀತಿಯಲ್ಲಿ ದಾಖಲಿಸಿವೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ ಇಂದು ಕ್ರೀಟ್​ ದ್ವೀಪದಲ್ಲಿ 6.5ರಷ್ಟು ತೀವ್ರತೆಯ ಭೂಕಂಪವಾಗಿದೆ. ಹಾಗೇ, ಇಲ್ಲಿ 6.0ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ ಎಮದು ಯುಎಸ್​​ನ ಜಿಲಾಜಿಕಲ್​ ಸರ್ವೇ ಹೇಳಿದೆ.  ಹಾನಿಗೊಳಗಾದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ನಡೆದ ಸ್ಫೋಟದಲ್ಲಿ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಪ್ರತಿಮೆ ಧ್ವಂಸ
‘ಕಾಶ್ಮೀರದ ಜನರೀಗ ಸಂತೋಷವಾಗಿದ್ದಾರೆ, ಅವರಿಗೆ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ‘-ಭಾರತೀಯ ಸೇನೆ ಲೆಫ್ಟಿನೆಂಟ್​ ಜನರಲ್​
(1 dead after strong earthquake hits Greek island of Crete homes and churches damaged)