AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷನನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ; 10 ಮಂದಿ ಸಾವು, 490 ಜನರ ಬಂಧನ

ಪ್ರತಿಭಟನಾಕಾರರನ್ನು ಪೊಲೀಸರು ಮತ್ತು ಸೇನಾಸಿಬ್ಬಂದಿ ಖಂಡಿತವಾಗಿ ನಿಯಂತ್ರಿಸುತ್ತಾರೆ. ಯಾರೂ ಹೆದರಬೇಡಿ. ದಕ್ಷಿಣ ಆಫ್ರಿಕಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷನನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ; 10 ಮಂದಿ ಸಾವು, 490 ಜನರ ಬಂಧನ
ದಕ್ಷಿಣ ಆಫ್ರಿಕಾ ಹಿಂಸಾಚಾರದ ಒಂದು ಚಿತ್ರ
TV9 Web
| Updated By: Lakshmi Hegde|

Updated on: Jul 13, 2021 | 2:33 PM

Share

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್​ ಜುಮಾರನ್ನು ಜೈಲಿಗೆ ಹಾಕಿದ ಬೆನ್ನಲ್ಲೇ ಅವರ ಬೆಂಬಲಿಗರಿಂದ ಗಲಭೆ ಶುರುವಾಗಿದೆ. ಆ ಗಲಭೆಯೀಗ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಈ ಹಿಂಸಾಚಾರದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಸಾರ್ವಜನಿಕ ಹಿಂಸಾಚಾರ ಕಾಯ್ದೆಯಡಿ 490 ಮಂದಿಯನ್ನು ಬಂಧಿಸಲಾಗಿದೆ. ಜಾಕೋಬ್​ ಬಂಧನದಿಂದ ಕ್ರೋಧಗೊಂಡಿರುವ ಅವರ ಬೆಂಬಲಿಗರು ಜೊಹಾನ್ಸ್​ಬರ್ಗ್​​ನಲ್ಲಿರುವ ಶಾಪಿಂಗ್​ ಮಾಲ್​ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಪ್ರಮುಖ ರಸ್ತೆಗಳ ಮಧ್ಯೆ ಟೈಯರ್​ಗಳನ್ನು ಸುಡುವ ಮೂಲಕ ದಾರಿಯನ್ನು ಬಂದ್​ ಮಾಡುತ್ತಿದ್ದಾರೆ. ಪ್ರತಿಭಟನಾಕಾರರ ಹಿಂಸೆಯನ್ನು ತಡೆಯಲು ಪೊಲೀಸರು, ದಕ್ಷಿಣ ಆಫ್ರಿಕಾ ಸೇನಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಪ್ರತಿಭಟನಾಕಾರರನ್ನು ಪೊಲೀಸರು ಮತ್ತು ಸೇನಾಸಿಬ್ಬಂದಿ ಖಂಡಿತವಾಗಿ ನಿಯಂತ್ರಿಸುತ್ತಾರೆ. ಯಾರೂ ಹೆದರಬೇಡಿ. ದಕ್ಷಿಣ ಆಫ್ರಿಕಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಪೊಲೀಸ್​, ಸೇನಾ ಸಿಬ್ಬಂದಿ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಸೋಮವಾರ ರಾತ್ರಿ, ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಭರವಸೆ ನೀಡಿದ್ದಾರೆ. ದಾಂಧಲೆ, ಲೂಟಿ, ಹಿಂಸಾಚಾರದ ಹಲವು ಫೋಟೋ, ವಿಡಿಯೋಗಳು ವೈರಲ್​ ಆಗುತ್ತಿವೆ.

ಜಾಕೋಬ್​ ಜುಮಾ 2009 ರಿಂದ 2018ರವರೆಗೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಎದ್ದಿತ್ತು. ಅದನ್ನು ತನಿಖಾ ಮಾಡುತ್ತಿರುವ ತನಿಖಾ ದಳಕ್ಕೆ ಸಾಕ್ಷ್ಯ ಒದಗಿಸಬೇಕು ಎಂದು ನ್ಯಾಯಾಲಯ ಜಾಕೋಬ್​ಗೆ ಆದೇಶ ನೀಡಿತ್ತು. ಆದರೆ, ಕೋರ್ಟ್​ನ ಆದೇಶನ್ನು ಜಾಕೋಬ್​ ಉಲ್ಲಂಘಿಸಿದ್ದರು. ನ್ಯಾಯಾಲಯದ ಆದೇಶದ ಉಲ್ಲಂಘನೆಗಾಗಿ ಅವರಿಗೆ 15 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಕಳೆದವಾರವೇ ಜೈಲಿಗೆ ಹಾಕಲಾಗಿದೆ.

ಕಳೆದವಾರ ಜಾಕೋಬ್​ ಜೈಲಿಗೆ ಸೇರಿದಾಗಿನಿಂದಲೂ ಅವರ ಬೆಂಬಲಿಗರಿಂದ ಗಲಭೆ ನಡೆಯುತ್ತಿದೆ. ಜಾಕೋಬ್​ ಮನೆ ಇರುವ ಕ್ವಾಜುಲು ನಟಾಲ್​​ ಪ್ರಾಂತ್ಯದಲ್ಲಿ ಮೊದಲು ಸಣ್ಣ ಪ್ರಮಾಣದಲ್ಲಿ ಶುರುವಾದ ಪ್ರತಿಭಟನೆ ನಿನ್ನೆಯಿಂದ ತೀವ್ರಗೊಂಡಿದೆ. ಅದೀಗ ದಕ್ಷಿಣ ಆಫ್ರಿಕಾದ ಖ್ಯಾತ ಪ್ರದೇಶವಾದ ಗೌಟೆಂಗ್​, ಜೊಹಾನ್ಸ್​ಬರ್ಗ್​ಗೂ ವ್ಯಾಪಿಸಿದೆ. ಜೊಹಾನ್ಸ್​ಬರ್ಗ್​​ನಲ್ಲಂತೂ ಅನೇಕ ಅಂಗಡಿಗಳು, ಮಾಲ್​​ಗಳನ್ನು ಧ್ವಂಸ ಮಾಡಲಾಗಿದೆ. ಎಲ್ಲ ಸ್ಥಳಗಳಲ್ಲೂ ದಕ್ಷಿಣ ಆಫ್ರಿಕಾದ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Explainer: ಅಸ್ಸಾಂನಲ್ಲಿ ಗೋಮಾಂಸ ಸೇವಿಸದ ಸಮುದಾಯದವರ ಪ್ರದೇಶದಲ್ಲಿ ಗೋಮಾಂಸ ನಿಷೇಧ; ಏನಿದು ಜಾನುವಾರು ಸಂರಕ್ಷಣಾ ಮಸೂದೆ?

10 Dead in Riots Over Jailing of Ex leader Jacob Zuma of South Africa