ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತಂದು ಚೆಲ್ಲುತ್ತಿರುವ ಮಾನವ ಮಲಿನ ಮತ್ತು ಚರಂಡಿ ನೀರು ಸಮುದ್ರ ಜೀವರಾಶಿಗೆ ವಿನಾಶಕಾರಿಯಾಗಿ ಪರಿಣಮಿಸಿದೆ
ಚೀನಾ ಹೊರತುಪಡಿಸಿದರೆ ವಿಯೆಟ್ನಾಮಿನ ಪಡೆಗಳು ಸಹ ಯೂನಿಯನ್ ಬ್ಯಾಂಕ್ಸ್ ಪ್ರದೇಶದ ಸ್ವಲ್ಪ ಭಾಗವನ್ನು ಆಕ್ರಮಿಸಿಕೊಂಡಿವೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಭಾಗದಲ್ಲಿ ತನ್ನದೂ ಪಾಲಿದೆ ಎಂದು ಹೇಳುವ ಫೀಲಿಪ್ಪೈನ್ಸ್ ಪಡೆಗಳು ಅಲ್ಲಿ ಒಂದೂ ಇಲ್ಲ.
ಹಲವಾರು ವರ್ಷಗಳಿಂದ ಚೀನಾದ ರಾಶಿ ರಾಶಿ ಹಡಗುಗಳು ಮಾನವರು ವಿಸರ್ಜಿಸುವ ಮಲಿನ ಮತ್ತು ಚರಂಡಿ ನೀರನ್ನು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೆಲ್ಲಿರಿರುವುದರಿಂದ ಆ ಸಮುದ್ರ ತೀರದಲ್ಲಿ ಭಯಂಕರ ಪ್ರಮಾಣದಲ್ಲಿ ಪಾಚಿ ಸೃಷ್ಟಿಯಾಗಿದ್ದು ಮಿನುಗಳಿಗೆ ವಿನಾಶಕರಿಯಾಗಿ ಪರಿಣಮಿಸಿದೆ ಎಂದು ಅಮೇರಿಕಾದ ತಜ್ಞರೊಬ್ಬರು ಸೋಮವಾರದಂದು ಹೇಳಿದ್ದಾರೆ. ‘ಕಳೆದ 5 ವರ್ಷಗಳಲ್ಲಿ ಸ್ಯಾಟಲೈಟ್ಗಳ ಮೂಲಕ ಲಭ್ಯವಾಗಿರುವ ಚಿತ್ರಗಳು, ಮಾನವ ಮಲಿನ ಸ್ಪಾರ್ಟ್ಲಿಸ್ ಪ್ರಾಂತ್ಯದಲ್ಲಿ ಶೇಖರಣೆಗೊಂಡು ಬೃಹತ್ ಪ್ರಮಾಣದಲ್ಲಿ ಪಾಚಿ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ, ಮತ್ತು ಅಲ್ಲಿ ಚೀನಾದ ಅಸಂಖ್ಯಾತ ಮೀನು ಹಿಡಿಯುವ ನೌಕೆಗಳು ಜಮಾಯಿಸಿವೆ.’ ಎಂದು ಲಿಜ್ ಡೆರ್ ಹೇಳಿದ್ದಾರೆ. ಡೆರ್ ಸೈಮಲಾರಿಟಿ ಹೆಸರಿನ ಒಂದು ಸಂಸ್ಥೆಯ ಮುಖ್ಯಸ್ಥರಾಗಿದ್ದು ಅದು ಸ್ಯಾಟಲೈಟ್ ಇಮೇಜರಿ ವಿಶ್ಲೇಷಣೆಗೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಸೃಷ್ಟಿಸುತ್ತದೆ.
ಅಂತರರಾಷ್ಟ್ರೀಯವಾಗಿ ಯೂನಿಯನ್ ಬ್ಯಾಂಕ್ಸ್ ಎಂದು ಕರೆಯಲ್ಪಡುವ ಸಮುದ್ರ ನೀರಿನಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಕನಿಷ್ಟ 236 ಹಡಗುಗಳಿರುವುದು ಕಂಡುಬಂದಿದೆ ಎಂದು ಫೀಲಿಪ್ಪೈನ್ ಆನ್ಲೈನ್ ಸುದ್ದಿ ಸಂಸ್ಥೆಯೊಂದಕ್ಕೆ ಆಕೆ ಜೂನ್ 17 ರಂದು ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸದರಿ ಸಮುದ್ರ ಬಾಗವು ತನಗೆ ಮಾತ್ರ ಸೇರಿದ್ದು ಚೀನಾ ವಾದಿಸುತ್ತಲೇ ಬಂದಿದೆ.
‘ಹಡಗುಗಳು ಚಲಿಸದಿದ್ದರೆ, ಮಾನವ ಮಲಿನ ಗುಡ್ಡೆಯಾಗುತ್ತಾ ಸಾಗುತ್ತದೆ,’ ಎಂದು ಡೆರ್ ಹೇಳಿದ್ದಾರೆ ಡೆರ್ ಅವರ ಪರಿಸರ ಹಾನಿ ಕುರಿತ ವಿಶ್ಲೇಷಣೆಗೆ ಬೀಜಿಂಗ್ ಕೂಡಲೇ ಪ್ರತಿಕ್ರಿಯಿಸಿಲ್ಲವಾದರೂ ದಕ್ಷಿಣ ಚೀನಾ ಸಮುದ್ರ ಭಾಗದ ಜಲಜೀವವನ್ನು ರಕ್ಷಿಸಲು ಮತ್ತು ಆ ಭಾಗದಲ್ಲಿ ಪರಿಸರ ಮಾಲಿನ್ಯ ಆಗದಿರಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಚೀನಾ ಹೊರತುಪಡಿಸಿದರೆ ವಿಯೆಟ್ನಾಮಿನ ಪಡೆಗಳು ಸಹ ಯೂನಿಯನ್ ಬ್ಯಾಂಕ್ಸ್ ಪ್ರದೇಶದ ಸ್ವಲ್ಪ ಭಾಗವನ್ನು ಆಕ್ರಮಿಸಿಕೊಂಡಿವೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಭಾಗದಲ್ಲಿ ತನ್ನದೂ ಪಾಲಿದೆ ಎಂದು ಹೇಳುವ ಫೀಲಿಪ್ಪೈನ್ಸ್ ಪಡೆಗಳು ಅಲ್ಲಿ ಒಂದೂ ಇಲ್ಲ.
ಫಿಲಿಪ್ಪೈನ್ಸ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿರುವ ಎದರಾಡೊ ಮೆನಜ್, ಮನಿಲಾದಲ್ಲಿ ಹೇಳಿಕೆಯೊಂದನ್ನು ನೀಡಿ, ಡೆರ್ ಒದಗಿಸಿರುವ ಮಾಹಿತಿಯನ್ನು ಪರಿಶೀಲಿಸಿ ವಿದ್ಯಮಾನಗಳನ್ನು ಖಚಿತಪಡಿಸಿಕೊಂಡ ನಂತರ ಚೀನಾದ ವಿರುದ್ಧ ಪ್ರತಿಭಟನೆ ನಡೆಸಬೇಕೇ ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗವುದು ಎಂದು ಹೇಳಿದರು.
‘ಈ ವಿನಾಶಕಾರಿ ಸನ್ನಿವೇಶ ಎಲ್ಲ ಮಿತಿಗಳನ್ನು ಮೀರಿದೆ, ಮುಂಚಿನ ಸ್ಥಿತಿಗೆ ಹಿಂತಿರುಗುವುದು ಸಾಧ್ಯವೇ ಇಲ್ಲ’ ಎಂದು ಡೆರ್ ಹೇಳಿದ್ದಾರೆ. ಈ ಭಾಗದಲ್ಲಿ ಮೀನು ಎಷ್ಟು ನಾಶವಾಗಿವೆಯೆಂದರೆ, ಅಲ್ಲಿನ ಭೂಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಮೀನಿನ ತೀವ್ರ ಅಭಾವ ತಲೆದೋರಲಿದೆ ಎಂದು ಆಕೆ ಹೇಳಿದ್ದಾರೆ.
ಸೋಮವಾರ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ಚೀನಾದ ಮಿಲಿಟರಿ ಪಡೆಗಳು ಅಮೇರಿಕಾದ ಯುದ್ಧ ನೌಕೆಯೊಂದನ್ನು ಹಿಮ್ಮೆಟ್ಟಿಸಿದವು. ಫಿಲಿಪ್ಪೈನ್ಸ್ ಮೇಲೆ ಆಕ್ರಮಣ ನಡೆಸಿದರೆ, ಪರಸ್ಪರ ರಕ್ಷಣಾ ಒಪ್ಪಂದವನ್ನು ಸಕ್ರಿಯಗೊಳಿಸಿದಂತಾಗುತ್ತದೆ ಎಂದು ವಾಷಿಂಗ್ಟನ್ ಎಚ್ಚರಿಸಿದೆ.
ದಕ್ಷಿಣ ಏಷ್ಯಾ ಸರ್ಕಾರಗಳು ತಮ್ಮದು ಎಂದು ಹೇಳಿಕೊಂಡಿರುವ ಸಮುದ್ರದ ಪ್ರದೇಶಗಳೆಲ್ಲ ಸಹ ತನಗೆ ಸೇರಿದ್ದು ಎಂದು ಚೀನಾ ಹೇಳುತ್ತಿದೆ. ಫಿಲಿಪೈನ್ಸ್ ಪರವಾಗಿ 2016 ರ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪಿಗೆ ಭಾನುವಾರ ಬಿಡೆನ್ ಆಡಳಿತದ ಬೆಂಬಲ ಘೋಷಣೆ ಪ್ರಕಟಿಸಿದ್ದನ್ನು ಚೀನಾ ತಿರಸ್ಕರಿಸಿದೆ.
ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಇರುವ ಚೀನಾ ತನ್ನ ಆಕ್ರಮಣಕಾರಿ ಧೋರಣೆಯಿಂದ ನೆರೆಹೊರೆಯ ರಾಷ್ಟ್ರಗಳಾಗಿರುವ ಜಪಾನ್, ಭಾರತ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ಗಳೊಂದಿಗೆ ಉದ್ವಿಗ್ನ ಸ್ಥಿತಿಯನ್ನು ಕಾಯ್ದುಕೊಂಡಿದೆ.
ಅಮೇರಿಕಾದ ಯುಎಸ್ಎಸ್ ಬೆನ್ಫೋಲ್ಡ್ ಪ್ಯಾರಾಸೆಲ್ ದ್ವೀಪಗಳ ಸುತ್ತಮುತ್ತಲಿನ ಜಲಪ್ರದೇಶದಲ್ಲಿ ಕಾಣಿಸಿಕೊಂಡ ನಂತರ ಅಲ್ಲಿಗೆ ಯುದ್ಧ ನೌಕೆ ಮತ್ತು ವಿಮಾನಗಳನ್ನು ಕಳಿಸಲಾಗಿದೆ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಹೇಳಿದೆ.
ಮಾರ್ಚ್ನಲ್ಲಿ ಯೂನಿಯನ್ ಬ್ಯಾಂಕ್ಸ್ನ ಈಶಾನ್ಯ ಭಾಗದಲ್ಲಿರುವ ವ್ಹಿಟ್ಸನ್ ರೀಫ್ ಎಂಬಲ್ಲಿ 200ಕ್ಕಿಂತ ಹೆಚ್ಚು ಚೀನಾದ ಮೀನುಗಾರಿಕೆ ನೌಕೆಗಳನ್ನು ನೋಡಿರುವುದಾಗಿ ಫಿಲಪ್ಫೈನ್ಸ್ ಸರ್ಕಾರ ಹೇಳಿದ್ದು ಅವಗಳನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಬೀಜಿಂಗ್ಗೆ ಸೂಚಿಸಿತ್ತು. ಆದರೆ ಚೀನಾ ಅದನ್ನು ನಿರ್ಲಕ್ಷಿಸಿ ತನ್ನ ಪಡೆಗಳನ್ನು ಹೆಚ್ಚಿಸುವುದು ಮುಂದುವರಿಸಿದೆ.
ಮನಿಲಾದಲ್ಲಿರುವ ಚೀನಾದ ರಾಯಭಾರಿ ಕಚೇರಿ ಎದುರು ನೂರಾರು ಜನ ಜಮಾಯಿಸಿ ಚೀನಾದ ಅತಿಕ್ರಮಣದ ವಿರುದ್ಧ ಪ್ರತಿಭಟನೆ ನಡೆಸಿದರು. ಚೀನಾದೊಂದಿಗೆ ಉತ್ತಮ ಸಂಬಂಧಗಳಿಗೆ ತಾಕಲಾಡುವ ಫಿಲಿಪ್ಪೈನ್ಸ್ ಅಧ್ಯಕ್ಷ ರಾಡ್ರಿಗೋ ಡುಟರ್ಟೆ ವಿರುದ್ಧ ಸಹ ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: China Vaccine: ಚೀನಾ ಸರಕುಗಳಂತೆ ಚೀನಾ ಲಸಿಕೆಯೂ ಕಳಪೆ! ಚೀನಾದ ಲಸಿಕೆ ವಿರುದ್ಧ ಬಹರೇನ್, ಯುಎಇ ನಿರ್ಧಾರ