ಮೆಕ್ಸಿಕೋದ ಬಾರ್ನಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ; 10 ಜನ ಸಾವು
ಕಳೆದ ಮಾರ್ಚ್‌ನಲ್ಲಿ ಸೆಂಟ್ರಲ್ ಮೆಕ್ಸಿಕೋದಲ್ಲಿ 19 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೆಕ್ಸಿಕೋ: ಸೆಂಟ್ರಲ್ ಮೆಕ್ಸಿಕೋದ (Central Mexico) ಬಾರ್ವೊಂದರಲ್ಲಿ ಇಂದು (ಗುರುವಾರ) ಬಂದೂಕುಧಾರಿಗಳು ಗುಂಡಿನ ದಾಳಿ (Firing) ನಡೆಸಿದ್ದರಿಂದ ಸುಮಾರು 10 ಜನರು ಸಾವನ್ನಪ್ಪಿದ್ದಾರೆ. ಮೇ ತಿಂಗಳಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆ ಘಟನೆಯಲ್ಲಿ ಮೆಕ್ಸಿಕೋದ ಸೆಂಟ್ರಲ್ ಸಿಟಿ ಸಿಲೆಯಾದಲ್ಲಿ ಹೋಟೆಲ್ ಮತ್ತು ಎರಡು ಬಾರ್‌ಗಳ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ 10 ಜನರನ್ನು ಕೊಂದಿದ್ದರು.
ಕಳೆದ ಮಾರ್ಚ್‌ನಲ್ಲಿ ಸೆಂಟ್ರಲ್ ಮೆಕ್ಸಿಕೋದಲ್ಲಿ 19 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು ಎಂದು ರಾಜ್ಯ ಅಟಾರ್ನಿ ಜನರಲ್ ಕಚೇರಿ (ಎಫ್‌ಜಿಇ) ಹೇಳಿಕೆಯಲ್ಲಿ ತಿಳಿಸಿದೆ. ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಅಮೆರಿಕಾದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವು; ಕೃತ್ಯದ ವೇಳೆ ಫೇಸ್ಬುಕ್ ಲೈವ್ ವಿಡಿಯೋ ಮಾಡಿದ 19 ವರ್ಷದ ಆರೋಪಿ
ಜನವರಿಯಲ್ಲಿ ಗುವಾನಾಜುವಾಟೊ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಒಂದೇ ಕುಟುಂಬದ 6 ಜನರನ್ನು ಕೊಲ್ಲಲಾಗಿತ್ತು. ಕಳೆದ 4 ತಿಂಗಳಲ್ಲಿ ಸಿಲಾವೊ ಪುರಸಭೆಯಲ್ಲಿ ನಡೆದ 5ನೇ ದಾಳಿ ಇದಾಗಿದೆ.