10 ಸೆಕೆಂಡ್​ಗಳ ವಿಡಿಯೊ ಬರೋಬ್ಬರಿ 48.4 ಕೋಟಿಗೆ ಮಾರಾಟ: ಏನಿದರ ವೈಶಿಷ್ಟ್ಯ

| Updated By: ganapathi bhat

Updated on: Apr 06, 2022 | 7:30 PM

ವಿಡಿಯೊದಲ್ಲಿ ಅಮೆರಿಕಾದ ಮಾಜಿ ಪ್ರಧಾನಿ ಡೊನಾಲ್ಡ್ ಟ್ರಂಪ್ ನೆಲದಲ್ಲಿ ಮಲಗಿಕೊಂಡಿರುವುದು ಹಾಗೂ ಅವರ ದೇಹದ ತುಂಬೆಲ್ಲಾ ಘೋಷಣೆಗಳು ತುಂಬಿಕೊಂಡಿರುವುದನ್ನು ಚಿತ್ರಿಸಲಾಗಿದೆ.

10 ಸೆಕೆಂಡ್​ಗಳ ವಿಡಿಯೊ ಬರೋಬ್ಬರಿ 48.4 ಕೋಟಿಗೆ ಮಾರಾಟ: ಏನಿದರ ವೈಶಿಷ್ಟ್ಯ
ಡಿಜಿಟಲ್ ಆರ್ಟ್
Follow us on

ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯಿಂದ ಏನು ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಹತ್ತು ಸೆಕೆಂಡ್​ಗಳ ವಿಡಿಯೊ ಕ್ಲಿಪ್ ಒಂದು ಲಂಡನ್​ನಲ್ಲಿ ಬರೋಬ್ಬರಿ 48.4 ಕೋಟಿ ರೂಪಾಯಿಗೆ (6.6 ಮಿಲಿಯನ್ ಡಾಲರ್) ಮಾರಾಟವಾಗಿದೆ. ಮೂಲಗಳ ವರದಿಯ ಪ್ರಕಾರ, ಬೀಪಲ್ ಎಂಬ ಅಮೆರಿಕ ಮೂಲದ ಡಿಜಿಟಲ್ ಕಲಾವಿದ ತಯಾರಿಸಿದ ಈ ವಿಡಿಯೊವನ್ನು ಮಿಯಾಮಿ ಮೂಲದ ವ್ಯಕ್ತಿ, ರಾಡ್ರಿಗಸ್ ಪ್ರೈಲ್ ಎಂಬಾತ ಸುಮಾರು ₹ 48.23 ಲಕ್ಷ ವ್ಯಯಿಸಿ ನಿರ್ಮಾಣ ಮಾಡಿದ್ದ. ಕಳೆದ ವಾರ ಇದೇ ವಿಡಿಯೊ ಬಂಡವಾಳದ ನೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ.

ವಿಡಿಯೊ ಅಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದ್ದೇಕೆ?
ಈ ವಿಡಿಯೊ ಹೊಸ ರೀತಿಯ ಡಿಜಿಟಲ್ ವಿಡಿಯೊ ಆಗಿದೆ. Non-fungible token (NFT) ಎಂಬ ಹೊಸ ವಿಧಾನದ ಈ ವಿಡಿಯೊವನ್ನು ಬ್ಲಾಕ್ ಚೈನ್ ಮೂಲಕ ತಯಾರಿಸಲಾಗಿದೆ. ವಿಡಿಯೊದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆಲದಲ್ಲಿ ಮಲಗಿಕೊಂಡಿರುವುದು ಹಾಗೂ ಅವರ ದೇಹದ ಮೇಲೆಲ್ಲಾ ಘೋಷಣೆಗಳು ತುಂಬಿಕೊಂಡಿರುವುದನ್ನು ಚಿತ್ರಿಸಲಾಗಿದೆ. ಜನರು ಅದನ್ನು ನೋಡುತ್ತಾ ಬೀದಿಯಲ್ಲಿ ನಡೆದು ಹೋಗುತ್ತಿರುತ್ತಾರೆ.

ವಿಡಿಯೊ ಹಂಚಿಕೊಂಡಿರುವ ರಾಯಿಟರ್ಸ್​, ಆನ್​ಲೈನ್​ನಲ್ಲಿ ಮಾತ್ರ ಇರುವ ವಸ್ತುಗಳಿಗೂ ಜನರು ಇಷ್ಟೊಂದು ಬೆಲೆ ತೆರುತ್ತಿದ್ದಾರೆ ಎಂದು ಬರೆದುಕೊಂಡಿದೆ. ನಾನ್ ಫಂಜಿಬಲ್ (Non-fungible) ಎಂದರೆ ಬದಲಾಯಿಸಿಕೊಳ್ಳಲಾಗದ ವಸ್ತುಗಳು. ಅವು ಪ್ರತಿಯೊಂದಕ್ಕೂ ವಿಭಿನ್ನ ಸ್ಥಾನವಿರುತ್ತದೆ. Non-fungible ಎಂದರೆ Fungible ಗೆ ವಿರುದ್ಧವಾದದ್ದಾಗಿದೆ. Fungible ಆಸ್ತಿಗಳಾದ ಹಣ, ಚಿನ್ನದಂತೆ Non-fungible ಆಸ್ತಿಗಳನ್ನು ಬದಲಿಸಿಕೊಳ್ಳಲಾಗುವುದಿಲ್ಲ.

ಅಂದರೆ, ನಾವು ಲಿಯೊನಾರ್ಡೊ ಡಾ ವಿನ್ಚಿ ಬರೆದ ಮೊನಾಲಿಸಾಳ ಚಿತ್ರ ಇರುವ ಕಡೆಗೆ ಹೋಗಿ ಅದರ ಫೊಟೊ ತೆಗೆದುಕೊಂಡು ಬರಬಹುದು. ಆದರೆ, ನಾವು ತೆಗೆದು ತಂದ ಚಿತ್ರಕ್ಕೆ ಮೂಲ ಚಿತ್ರದಷ್ಟು ಬೆಲೆ ಇರುವುದಿಲ್ಲ. ಆ ಚಿತ್ರದ ಇತಿಹಾಸವೂ ನಾವು ತೆಗೆದ ಭಾವಚಿತ್ರದಲ್ಲಿ ಇರುವುದಿಲ್ಲ. ಅಂತೆಯೇ, ಈ 10 ಸೆಕೆಂಡ್​ಗಳ ವಿಡಿಯೊ ಎಂದು ರಾಡ್ರಿಗಸ್ ಪ್ರೈಲ್ ಹೇಳಿದ್ದಾರೆ.

ರಾಯ್ಟರ್ಸ್ ಸುದ್ದಿ ಸಂಸ್ಥೆ ವಿಡಿಯೊವನ್ನು ಹಂಚಿಕೊಂಡಿದೆ

ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ 2 ಬಾರಿ ಮಹಾಭಿಯೋಗಕ್ಕೆ ಗುರಿಯಾದ ಡೊನಾಲ್ಡ್​ ಟ್ರಂಪ್

ಟ್ರಂಪ್ ಬೆಂಬಲಿಗರ ಗಲಾಟೆ: ಟ್ವಿಟರ್ ಸಿಇಒ ವಿರುದ್ಧ ಹರಿಹಾಯ್ದ ಕಂಗನಾ ರನೌತ್

Published On - 8:21 pm, Tue, 2 March 21