ಉಕ್ರೇನ್​​ನಲ್ಲಿ ರಷ್ಯಾ ಆಕ್ರಮಣದ ಪ್ರಭಾವ; ಸಾವಿರಾರು ಗ್ರಾಹಕರಿಗೆ ಸಿಗುತ್ತಿಲ್ಲ ಗ್ಯಾಸ್, 16 ಪೂರೈಕೆ ಕೇಂದ್ರಗಳು ಬಂದ್​​

| Updated By: Lakshmi Hegde

Updated on: Mar 06, 2022 | 3:14 PM

ರಷ್ಯಾ ಆಕ್ರಮಣದಿಂದಾಗಿ ಪ್ರಾದೇಶಿಕ ಗ್ಯಾಸ್​ ಕಂಪನಿಗಳ ಪ್ರಾದೇಶಿಕ ಆಪರೇಟರ್​​ ನೆಟ್ವರ್ಕ್​ಗೆ ಹಾನಿಯುಂಟಾಗಿದೆ. ಅಷ್ಟೇ ಅಲ್ಲ, ಇನ್ನೂ ಸಹ  ಮಿಲಿಟರಿ ಕಾರ್ಯಾಚರಣೆಗಳು ನಡೆಯುತ್ತಲೇ ಇದೆ.

ಉಕ್ರೇನ್​​ನಲ್ಲಿ ರಷ್ಯಾ ಆಕ್ರಮಣದ ಪ್ರಭಾವ; ಸಾವಿರಾರು ಗ್ರಾಹಕರಿಗೆ ಸಿಗುತ್ತಿಲ್ಲ ಗ್ಯಾಸ್, 16 ಪೂರೈಕೆ ಕೇಂದ್ರಗಳು ಬಂದ್​​
ಖಾರ್ಕೀವ್​ ಚಿತ್ರಣ
Follow us on

ರಷ್ಯಾ  ಮಿಲಿಟರಿ ಉಕ್ರೇನ್​ಗೆ ಕಾಲಿಟ್ಟು 10ದಿನಗಳೇ ಕಳೆದು ಹೋಗಿವೆ. ಅಲ್ಲಿರುವ ಪ್ರಜೆಗಳ ಕಷ್ಟ, ಸಂಕಟ ಮಿತಿಮೀರಿದೆ. ಈ ಮಧ್ಯೆ ಉಕ್ರೇನ್​ ಸುಮಾರು 6 ಪ್ರದೇಶಗಳಲ್ಲಿ ಜನರಿಗೆ ಗ್ಯಾಸ್​ ಪೂರೈಕೆ ಇಲ್ಲದಂತಾಗಿದೆ. ಯುದ್ದ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್​ನ ಖಾರ್ಕೀವ್​, ಕೀವ್​,  ಮೈಕೊಲೈವ್, ಡೊನೆಟ್ಸ್ಕ್, ಲುಹಾನ್ಸ್ಕ್ ಮತ್ತು ಝಪೊರಿಜಿಯಾ ಪ್ರದೇಶಗಳ ಒಟ್ಟು 16 ಗ್ಯಾಸ್​ ವಿತರಣಾ ಕೇಂದ್ರಗಳನ್ನು ಮುಚ್ಚಲಾಗುವುದು. ಹೀಗಾಗಿ ಜನರಿಗೆ ಅನಿಲ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಉಕ್ರೇನ್​ನ ಗ್ಯಾಸ್​ ಪ್ರಸರಣ ವ್ಯವಸ್ಥೆಯ ಆಪರೇಟರ್​ ಘೋಷಿಸಿದೆ.   ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ಈಗ ಅನೇಕರಿಗೆ ಗ್ಯಾಸ್​ ಸೌಲಭ್ಯ ಸಿಗದಂತಾಗಿದೆ ಎಂದು ಕೀವ್​ ಇಂಡಿಪೆಂಡೆಂಟ್ ಮಾಧ್ಯಮ ವರದಿ ಮಾಡಿದೆ.

ರಷ್ಯಾ ಆಕ್ರಮಣದಿಂದಾಗಿ ಪ್ರಾದೇಶಿಕ ಗ್ಯಾಸ್​ ಕಂಪನಿಗಳ ಪ್ರಾದೇಶಿಕ ಆಪರೇಟರ್​​ ನೆಟ್ವರ್ಕ್​ಗೆ ಹಾನಿಯುಂಟಾಗಿದೆ. ಅಷ್ಟೇ ಅಲ್ಲ, ಇನ್ನೂ ಸಹ  ಮಿಲಿಟರಿ ಕಾರ್ಯಾಚರಣೆಗಳು ನಡೆಯುತ್ತಲೇ ಇರುವುದರಿಂದ ಅನೇಕ ಅನಿಲ ಪೂರೈಕೆ ಕೇಂದ್ರಗಳಿಂದ ಮತ್ತೊಮ್ಮೆ ಪೂರೈಕೆ ಶುರು ಮಾಡುವುದು ಅಸಾಧ್ಯ ಎಂದೂ ಹೇಳಲಾಗಿದೆ. ಹಾಗೇ, ಪೋಲ್ಯಾಂಡ್​​ನಿಂದ ಗ್ಯಾಸ್ ಆಮದು ಮಾಡಿಕೊಳ್ಳುವ ಸಂಬಂಧ ಅಲ್ಲಿ ಗ್ಯಾಸ್​ ಆಪರೇಟರ್​ ವ್ಯವಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದೂ ಕೀವ್​ ಇಂಡಿಪೆಂಡೆಂಟ್ ವರದಿ ಮಾಡಿದೆ.

ಯುದ್ಧಕ್ಕೂ ಮೊದಲು ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿಕೊಂಡು ಬಂದಿದದ ನ್ಯಾಟೋ ಇದೀಗ ಉಕ್ರೇನ್​ಗೆ ಸಹಕಾರ ಕೊಡಲು ನಿರಾಕರಿಸುತ್ತಿದೆ. ಅದರಲ್ಲೂ ಉಕ್ರೇನ್​ನ ವಾಯುಪ್ರದೇಶವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಪರಿಗಣಿಸಬೇಕು ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನ್ಯಾಟೊಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಟೋ ಅದನ್ನು ತಿರಸ್ಕರಿಸಿತ್ತು. ನಾವೇನೂ ಮಾಡಲು ಸಾಧ್ಯವಿಲ್ಲ. ಉಕ್ರೇನ್​ ವಾಯುಪ್ರದೇಶವನ್ನು ನೋ ಫ್ಲೈ ಝೋನ್​ ಎಂದು ಘೋಷಣೆ ಮಾಡಿದರೆ, ಪೂರ್ವ ಯುರೋಪ್​ನಾದ್ಯಂತ ಯುದ್ಧ ಸೃಷ್ಟಿಯಾಗುತ್ತದೆ ಎಂದು ಹೇಳಿದೆ. ಹೀಗಾಗಿ ಝೆಲೆನ್ಸ್ಕಿ ನ್ಯಾಟೋವನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನಾನು ಶೂಟ್​ ಮಾಡಿದ ಸ್ಥಳಗಳಲ್ಲಿ ಈಗ ಬಾಂಬ್​ ಸಿಡಿಯುತ್ತಿದೆ’; ಬಾಲಿವುಡ್​ ನಿರ್ದೇಶಕನ ಬೇಸರ