ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವ ಉಕ್ರೇನ್: ರಷ್ಯಾ ಸೇನೆ ಆರೋಪ

ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವ ಉಕ್ರೇನ್: ರಷ್ಯಾ ಸೇನೆ ಆರೋಪ
ಉಕ್ರೇನ್ ನಗರಗಳಲ್ಲಿ ಹೋರಾಟ ತೀವ್ರಗೊಂಡಿದೆ

ಉಕ್ರೇನ್​ನ ಆಗಸಗಳನ್ನು ರಷ್ಯಾದ ವಾಯುಪಡೆಯು  ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ರಾಜಧಾನಿ ಕೀವ್​ನಿಂದ ನಾಗರಿಕರು ಹೊರಗೆ ತೆರಳಲು ರಷ್ಯಾ ಸೇನೆ ಯಾವುದೇ ರೀತಿಯಲ್ಲಿಯೂ ಅಡ್ಡಿಪಡಿಸುವುದಿಲ್ಲ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 28, 2022 | 8:49 PM

ಕೀವ್: ಉಕ್ರೇನ್​ನ ರಾಷ್ಟ್ರೀಯವಾದಿಗಳು (Ukraine Nationalists) ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವು ಉಕ್ರೇನ್​ನ ಸೇನಾ ನೆಲೆ ಮತ್ತು ಯುದ್ಧೋಪಕರಣಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ಮಾಡುತ್ತಿದ್ದೇವೆ. ಎಲ್ಲಿಯೂ ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ರಷ್ಯಾ ಸೇನೆಯು ಸೋಮವಾರ ಸ್ಪಷ್ಟಪಡಿಸಿದೆ. ಉಕ್ರೇನ್​ನ ಆಗಸಗಳನ್ನು ರಷ್ಯಾದ ವಾಯುಪಡೆಯು  ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ರಾಜಧಾನಿ ಕೀವ್​ನಿಂದ ನಾಗರಿಕರು ಹೊರಗೆ ತೆರಳಲು ರಷ್ಯಾ ಸೇನೆ ಯಾವುದೇ ರೀತಿಯಲ್ಲಿಯೂ ಅಡ್ಡಿಪಡಿಸುವುದಿಲ್ಲ. ಕೀವ್-ವಾಸ್ಲಿಕಿವ್ ಹೆದ್ದಾರಿಯಲ್ಲಿ ನಾಗರಿಕರು ಹೊರನಡೆಯಬಹುದು. ಈ ಮಾರ್ಗವು ಸಂಪೂರ್ಣ ಮುಕ್ತ ಮತ್ತು ಸುರಕ್ಷಿತ ಎಂದು ರಷ್ಯಾದ ರಕ್ಷಣಾ ಇಲಾಖೆ ವಕ್ತಾರ ಇಗೊರ್ ಕೊನಾಶೆನ್​ಕೊವ್ ಟಿವಿಯಲ್ಲಿ ಪ್ರಸಾರವಾದ ಭಾಷಣದಲ್ಲಿ ಹೇಳಿದರು.

ಇನ್ನೊಂದೆರೆಡು ದಿನಗಳಲ್ಲಿ ರಷ್ಯಾ ಸೇನೆಯು ಕೀವ್​ನ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಬಹುದು ಎನ್ನುವ ಸೂಚನೆಯನ್ನು ರಷ್ಯಾ ಈ ಮೂಲಕ ನೀಡಿದೆ. ಉಕ್ರೇನ್ ಸೇನೆಯು ತನ್ನ ನಾಗರಿಕರನ್ನು ಗುರಾಣಿಯಂತೆ ಬಳಸಿಕೊಂಡು ರಷ್ಯಾ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಆದರೆ ಉಕ್ರೇನ್ ಆಡಳಿತ ಮಾತ್ರ ತನ್ನ ನಾಗರಿಕರಿಗೆ ಮನೆಯಲ್ಲಿಯೇ ಇರುವಂತೆ ಮತ್ತು ರಾತ್ರಿಹೊತ್ತು ಕರ್ಫ್ಯೂ ಅನುಸರಿಸುವಂತೆ ಸೂಚಿಸಿದೆ. ನಾಗರಿಕ ವಸತಿ ಪ್ರದೇಶಗಳಲ್ಲಿಯೇ ಉಕ್ರೇನ್ ಸೇನೆಯು ಆರ್ಟಿಲರಿ ಮತ್ತು ಯುದ್ಧೋಪಕರಣಗಳನ್ನು ನೆಲೆಗೊಳಿಸಿದೆ. ಉಕ್ರೇನ್ ತನ್ನ ನಾಗರಿಕರಿಗೆ ಶಸ್ತ್ರಗಳನ್ನು ಕೊಟ್ಟಿರುವುದರಿಂದ ಕೀವ್​ನಲ್ಲಿ ಈಗ ಕಳ್ಳರು, ಲೂಟಿಕೋರರು ಮತ್ತು ದರೋಡೆಕೋರರು ವಿಜೃಂಭಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ಮಾಸ್ಕೊದ ಮಿಲಿಟರಿ ಮುನ್ನಡೆ ಮತ್ತು ನಿಚ್ಚಳ ಮೇಲುಗೈ ಬಗ್ಗೆಯೂ ಕೊನಶೆನ್​ಕೊವ್ ವಿವರ ನೀಡಿದರು. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್ ಆಗಸವನ್ನು ನಿಚ್ಚಳವಾಗಿ ಆಳುತ್ತಿವೆ. ಉಕ್ರೇನ್​ನ ದಕ್ಷಿಣದಲ್ಲಿರುವ ಬಂದರು ನಗರಿ ಬರ್ಡ್​ಯನ್ಸಕ್​ ಮತ್ತು ಪರಮಾಣ ಕೇಂದ್ರ ಇರುವ ಎನೆರ್​ಗೊಡರ್ ನಗರಗಳನ್ನು ರಷ್ಯಾ ಸೇನೆಯು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಝಪೊರಿಕ್​ಕಿಯಾ ನಗರದಲ್ಲಿರುವ ಪರಮಾಣ ಕೇಂದ್ರವನ್ನು ರಷ್ಯಾ ಪಡೆಗಳು ನಿಯಂತ್ರಿಸುತ್ತಿವೆ. ಈ ಕೇಂದ್ರವು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ವಿಕಿರಣದ ಪ್ರಮಾಣ ಸಾಮಾನ್ಯ ಸ್ಥಿತಿಯಲ್ಲಿಯೇ ಇದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Russia-Ukraine Crisis: ಉಕ್ರೇನ್ ಮತ್ತು ರಷ್ಯಾ ಯುದ್ಧದ ನಡುವೆ ಹೆಚ್ಚು ಹಾನಿಗೊಳಗಾದ ನಗರಗಳು ಯಾವವು ಗೊತ್ತಾ..! ಇಲ್ಲಿದೆ ಮಾಹಿತಿ

ಇದನ್ನೂ ಓದಿ: Russia Ukraine War: ಊಟ, ನೀರು ಇಲ್ಲದೇ ಉಕ್ರೇನ್​ನಲ್ಲಿ ಮುಂದುವರೆದ ರಾಜ್ಯದ ವಿದ್ಯಾರ್ಥಿಗಳ ಪರದಾಟ

Follow us on

Related Stories

Most Read Stories

Click on your DTH Provider to Add TV9 Kannada