Russia Ukraine War: ಊಟ, ನೀರು ಇಲ್ಲದೇ ಉಕ್ರೇನ್ನಲ್ಲಿ ಮುಂದುವರೆದ ರಾಜ್ಯದ ವಿದ್ಯಾರ್ಥಿಗಳ ಪರದಾಟ
ಉಕ್ರೇನ್ನಲ್ಲಿರುವ ಭಾರತೀಯರಿಗೆ ವಿಶೇಷ ರೈಲುಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಭಾರತದ ರಾಯಭಾರ ಕಚೇರಿಯಿಂದ ಭಾರತೀಯರಿಗೆ ಸಲಹೆ ನೀಡಲಾಗಿದೆ. ಕೀವ್‌ನಲ್ಲಿ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ.
ಉಕ್ರೇನ್(ukraine)ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪರದಾಟ ಮುಂದುವರೆದಿದೆ. ಇಂದು ಮುಂಜಾನೆಯಿಂದ ಬಾಂಬ್ ಹಾಗೂ ಗುಂಡಿನ ದಾಳಿ ಹೆಚ್ಚಾಗಿದೆ. ಬಂಕರ್ಗಳಿಂದ ಹೊರಬರಲು ಜನ ಭಯಪಡುತ್ತಿದ್ದಾರೆ. ಉಕ್ರೇನ್ನ ಖಾರ್ಕೀವ್ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಖಾರ್ಕೀವ್ನ ಮೆಟ್ರೋ ಅಂಡರ್ ಪಾಸ್ ಹಾಗೂ ಬಂಕರ್ಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಬಿಸ್ಕೇಟ್ ಹಾಗೂ ಬ್ರೆಡ್ ತಿಂದು ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ. ಕೊಡಗಿನ ಮತ್ತೋರ್ವ ವಿದ್ಯಾರ್ಥಿ ಉಕ್ರೇನ್ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ನಿವಾಸಿ ಚಂದನ್ ಅಪಾಯದಲ್ಲಿದ್ದು, ಕಳೆದ ಒಂದು ವಾರದಿಂದ ಕಾರ್ಕಿವ್ ಪ್ರಾಂತ್ಯದ ಕತ್ತಲ ಬಂಕರ್ನಲ್ಲಿರುವ ಕರ್ನಾಟಕದ ಒಂಭತ್ತು ಮಂದಿಯಿದ್ದಾರೆ. ಅಸಹ್ಯ ವಾತಾವರಣದಲ್ಲಿ ಒಂಭತ್ತು ವಿದ್ಯಾರ್ಥಿಗಳಿದ್ದು, ದಿನಕ್ಕೆರಡು ಬಿಸ್ಕೆಟ್ ಮಾತ್ರ ತಿಂದು ಬದುಕುತ್ತಿದ್ದಾರೆ. ತಮ್ಮ ದಯನೀಯ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿದ್ದಾರೆ. ನಾವು ಜೀವಂತವಾಗಿ ಬರುತ್ತೀವೋ ಇಲ್ವೋ ಆನ್ನೋ ಆತಂಕವಿದ್ದು, ನಮ್ಮ ಜೀವ ಉಳಿಸಿ ಅಂತ ಕನ್ನಡಿಗ ವಿದ್ಯಾರ್ಥಿಗಳು ಮೊರೆ ಇಡುತ್ತಿದ್ದಾರೆ.
ಸದ್ಯ 5ನೇ ಬ್ಯಾಚ್ನಲ್ಲಿ ಉಕ್ರೇನ್ನಿಂದ ವಿದ್ಯಾರ್ಥಿಗಳು ವಾಪಸಾಗಿದ್ದಾರೆ. ಏರ್ ಏಷ್ಯಾ ವಿಮಾನದ ಮೂಲಕ ಸಂಜೆ 6.45ಕ್ಕೆ 5 ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಶ್ರವಣ ಸಂಗಣ್ಣ ಬಿರಾದಾರ್, ಶಕ್ತಿ ಶ್ರೀ ಶೇಖರ್, ಮೈನಾ ನೈಲ್ ನಾಯ್ಕ್, ನಿಹಾರಿಕಾ ಮತ್ತು ಆಶಾ ವೆಂಕಟೇಶ್ ರೆಡ್ಡಿ ಭಾರತಿ ಲಕ್ಷ್ಮೀಪುರ ಶ್ರೀನಿವಾಸ ಇಂಡಿಗೋ ವಿಮಾನದ ಮೂಲಕ ಮಧ್ಯಾಹ್ನ 2.55ಕ್ಕೆ ಹೈದರಾಬಾದ್ಗೆ ಆಗಮಿಸಿದರು. ಉಳಿದ ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿ ಬಗ್ಗೆ ಕ್ರಮ ವಹಿಸಲು ವಿದೇಶಾಂಗ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದೇವೆ ಎಂದು ನೋಡಲ್ ಅಧಿಕಾರಿಗೆ ಸಿಎಂ ಸೂಚನೆ ನೀಡಿದ್ದಾರೆ.
ಉಕ್ರೇನ್ನಲ್ಲಿ ರಾಜ್ಯದ 451 ವಿದ್ಯಾರ್ಥಿಗಳು ಸಿಲುಕಿದ್ದು, ಅವರ ಪೈಕಿ 37 ಸ್ಟೂಡೆಂಟ್ಸ್ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಬೆಂಗಳೂರು ನಗರ 170, ಮೈಸೂರು 29, ಬಾಗಲಕೋಟೆ 23. ತುಮಕೂರು 22, ದಕ್ಷಿಣ ಕನ್ನಡ 18, ವಿಜಯಪುರ 18, ಬೆಂಗಳೂರು ಗ್ರಾಮಾಂತರ 18, ರಾಯಚೂರು 15, ಹಾಸನ 13, ಬೆಳಗಾವಿ 13, ಕೊಡಗು 12 ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರ 10, ಹಾವೇರಿ 10, ಕೋಲಾರ 9, ದಾವಣಗೆರೆ 9, ಉಡುಪಿ 8, ಚಿಕ್ಕಮಗಳೂರು 8, ಬಳ್ಳಾರಿ 6, ಚಿತ್ರದುರ್ಗ 5, ಬೀದರ್ 5 ವಿದ್ಯಾರ್ಥಿಗಳು. ಶಿವಮೊಗ್ಗ 4, ಕಲಬುರಗಿ 4, ಧಾರವಾಡ 4, ಚಾಮರಾಜನಗರ 4, ರಾಮನಗರ 3, ಉತ್ತರಕನ್ನಡ 3, ಮಂಡ್ಯ 3, ಕೊಪ್ಪಳ 3, ಗದಗ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯರಿಗೆ ವಿಶೇಷ ರೈಲುಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಭಾರತದ ರಾಯಭಾರ ಕಚೇರಿಯಿಂದ ಭಾರತೀಯರಿಗೆ ಸಲಹೆ ನೀಡಲಾಗಿದೆ. ಕೀವ್‌ನಲ್ಲಿ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ಎಲ್ಲ ವಿದ್ಯಾರ್ಥಿಗಳು ಪಶ್ಚಿಮ ಭಾಗಗಳಿಗೆ ಪ್ರಯಾಣಿಸಲು ಸಲಹೆ ನೀಡಲಾಗಿದೆ. ರೈಲ್ವೆ ನಿಲ್ದಾಣಕ್ಕೆ ದಾರಿ ಮಾಡಿಕೊಡುವಂತೆ ಸೂಚಿಸಲಾಗಿದ್ದು, ಉಕ್ರೇನ್ ರೈಲ್ವೆಯಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಹಗಲು ರಾತ್ರಿ ಶ್ರಮವಹಿಸುತ್ತಿದೆ.
ಇದನ್ನೂ ಓದಿ:
ಉಕ್ರೇನಿನ ಬೇರೆ ಬೇರೆ ಪ್ರಾಂತ್ಯದ ಊರುಗಳಲ್ಲಿರುವ ಜನ ಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ!