17ವರ್ಷದಿಂದ ಅರಮನೆಯಲ್ಲಿ ವಾಸವಾಗಿದ್ದ ಬೆಕ್ಕನ್ನು ಓಡಿಸಿದ್ದಕ್ಕೆ ಸಿಟ್ಟಾದ 12 ಸಾವಿರ ಜನರು ಮಾಡಿದ್ದೇನು?

ಇದೊಂದು ಬೀಡಾಡಿ ಬೆಕ್ಕು. ಅಂದರೆ ಯಾರೂ ಸಾಕಿದ್ದಲ್ಲ. ಅದಕ್ಕೆ ಯಾರೋ ಅನಸ್ತಾಸಿಯಾ ಎಂದು ಹೆಸರನ್ನೂ ಇಟ್ಟಿದ್ದರು. ಎಲ್ಲೇ ಹೋಗಲಿ ವಾಪಸ್​ ಬಂದು ಇದೇ ಅರಮನೆಯ ಆವರಣದಲ್ಲಿಯೇ ಮಲಗುತ್ತಿತ್ತು.

17ವರ್ಷದಿಂದ ಅರಮನೆಯಲ್ಲಿ ವಾಸವಾಗಿದ್ದ ಬೆಕ್ಕನ್ನು ಓಡಿಸಿದ್ದಕ್ಕೆ ಸಿಟ್ಟಾದ 12 ಸಾವಿರ ಜನರು ಮಾಡಿದ್ದೇನು?
ಅರಮನೆಯಲ್ಲಿದ್ದ ಬೆಕ್ಕು
Follow us
TV9 Web
| Updated By: Lakshmi Hegde

Updated on: Apr 17, 2022 | 7:07 PM

ಆಗ್ನೇಯ ಯುರೋಪ್​​ನ ಬಾಲ್ಕನ್ಸ್​​ ಎಂಬ ಭೌಗೋಳಿಕ ಪ್ರದೇಶದಲ್ಲಿ ಕ್ರೊಯೇಷಿಯಾ ಎಂಬುದೊಂದು ದೇಶವಿದೆ. ಈ ದೇಶದ ಖ್ಯಾತ ಪ್ರವಾಸಿ ತಾಣ ಡುಬ್ರೋವ್ನಿಕ್​. ಇಲ್ಲಿರುವ ಐತಿಹಾಸಿಕ ಅರಮನೆ ಆಕರ್ಷಣೆಯ ಕೇಂದ್ರ ಬಿಂದು. ಇದೊಂದು 14ನೇ ಶತಮಾನದ ರಾಜನೊಬ್ಬನಿಗೆ ಸೇರಿದ್ದ ಅರಮನೆ ಎಂದು ಹೇಳಲಾಗಿದೆ.  ಅದೆಷ್ಟೋ ಸಾವಿರಗಳಷ್ಟು ಜನ ತಮ್ಮ ರಜಾದಿನಗಳನ್ನು ಕಳೆಯಲು ಇಲ್ಲಿಗೆ ಬರುತ್ತಾರೆ. ಹಾಗೇ ಈ ಅರಮನೆಯ ಹೊರಾಂಗಣದಲ್ಲಿ ಒಂದು ಬೆಕ್ಕು ವಾಸವಾಗಿತ್ತು. ಸುಮಾರು 17ವರ್ಷಗಳಿಂದಲೂ ಇಲ್ಲಿಯೇ ಇದ್ದ ಬೆಕ್ಕನ್ನು ಅರಮನೆ ಆವರಣದಿಂದ ಹೊರಗೆ ಹಾಕಲಾಗಿದೆ. ಆದರೆ ಬೆಕ್ಕನ್ನು ಹೊರಹಾಕಿದ್ದನ್ನು ಸುಮಾರು 12 ಸಾವಿರಗಳಷ್ಟು ಜನರು ವಿರೋಧಿಸಿ, ಅರ್ಜಿ ಸಲ್ಲಿಸಿದ್ದಾರೆ. 

ಇದೊಂದು ಬೀಡಾಡಿ ಬೆಕ್ಕು. ಅಂದರೆ ಯಾರೂ ಸಾಕಿದ್ದಲ್ಲ. ಅದಕ್ಕೆ ಯಾರೋ ಅನಸ್ತಾಸಿಯಾ ಎಂದು ಹೆಸರನ್ನೂ ಇಟ್ಟಿದ್ದರು. ಎಲ್ಲೇ ಹೋಗಲಿ ವಾಪಸ್​ ಬಂದು ಇದೇ ಅರಮನೆಯ ಆವರಣದಲ್ಲಿಯೇ ಮಲಗುತ್ತಿತ್ತು. ಹೀಗೆ 17ವರ್ಷಗಳಿಂದ ಅಲ್ಲಿಯೇ ಇದ್ದ ಅದನ್ನು ಅನೇಕರು ಪದೇಪದೆ ನೋಡುತ್ತಿದ್ದರು. ಹೀಗೆ ಯಾರೋ ಆ ಬೆಕ್ಕಿಗೊಂಡು ಕಾರ್ಡ್​ಬೋರ್ಡ್​ ಗೂಡನ್ನೂ ಮಾಡಿಕೊಟ್ಟಿದ್ದರು. ಅರಮನೆಯ ಮುಖಮಂಟಪದ ಬಳಿಯೇ ಅದರ ಪುಟ್ಟ ಮನೆಯಿತ್ತು. ಆದರೆ ಈಗೀಗ ನಗರದ ಮ್ಯೂಸಿಯಂ ಪ್ರಾಧಿಕಾರದ ಕೆಂಗಣ್ಣು ಬೆಕ್ಕು ಮತ್ತು ಅದರ ಪುಟ್ಟ ಗೂಡಿನ ಮೇಲೆ ಬಿದ್ದಿತ್ತು.  ಅರಮನೆಯ ನಿರ್ವಹಣೆ ಈ ಪ್ರಾಧಿಕಾರದ ಅಡಿಯಲ್ಲೇ ಬರುತ್ತದೆ. ಹೀಗೆ ಐತಿಹಾಸಿಕವಾಗಿ ಪ್ರಾಧಾನ್ಯತೆ ಪಡೆದ ಅರಮನೆಯ ಮುಖಮಂಟಪದ ಎದುರೇ ಬೆಕ್ಕು ಇರುವುದನ್ನು ಅದು ಸಹಿಸಲಿಲ್ಲ. ಆ ಕಾರ್ಡ್​ಬೋರ್ಡ್​ನ ಚಿಕ್ಕ ಪಂಜರವನ್ನು ತೆಗೆದು ಹಾಕುವಂತೆ ಆದೇಶಿಸಲಾಯಿತು ಮತ್ತು ಬೆಕ್ಕನ್ನು ಓಡಿಸಲಾಯಿತು.

ಆದರೆ ಬೆಕ್ಕನ್ನು ಓಡಿಸಿದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದೊಡ್ಡ ವಿವಾದವೇ ಶುರುವಾಗಿದೆ. ಮ್ಯೂಸಿಯಂ ಪ್ರಾಧಿಕಾರದ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಬೆಕ್ಕನ್ನು ಮತ್ತೆ ವಾಪಸ್​ ಕರೆದುಕೊಂಡು ಬರಬೇಕು ಎಂದು ಆಗ್ರಹಿಸಿ, ಸುಮಾರು 12 ಸಾವಿರ ಜನರು ಸಹಿ ಮಾಡಿದ ಅರ್ಜಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಬೆಕ್ಕಿಗೂ ಅಲ್ಲಿರಲು ಹಕ್ಕು ಇದೆ. ನಾವು ಹೇಳುತ್ತಿರುವುದು 70-80 ಬೆಕ್ಕು ಕರೆದುಕೊಂಡು ಬಂದು ಇಲ್ಲಿ ಇಟ್ಟುಕೊಳ್ಳಿ ಎಂದಲ್ಲ, 17ವರ್ಷಗಳಿಂದ ಇಲ್ಲಿಯೇ ಇದ್ದ ಬೆಕ್ಕನ್ನು ವಾಪಸ್​ ಕರೆದುಕೊಂಡು ಬನ್ನಿ ಎಂಬುದು ನಮ್ಮ ಆಗ್ರಹ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಶಾಂತಿ ಸೌಹಾರ್ದತೆ ಕಾಪಾಡುವಂತೆ ಜಾಗೃತಿ; ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರ ಪಥಸಂಚಲನ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ