ಪಾಕಿಸ್ತಾನ: 55ರ ಹರೆಯದ ವ್ಯಕ್ತಿಯನ್ನು ಮದುವೆಯಾದ 18ರ ಯುವತಿ ಇವರ ಪ್ರೇಮಕ್ಕೆ ಕಾರಣವಾಗಿದ್ದು ಬಾಬ್ಬಿ ಡಿಯೋಲ್ ಹಾಡು!

ಮೊದಲು ಪ್ರೇಮ ಹುಟ್ಟಿದ್ದು ಮುಸ್ಕಾನ್​​ಗೆ. ಫಾರೂಕ್ ತನ್ನ ಭಾವನೆಯನ್ನು ವ್ಯಕ್ತ ಪಡಿಸಲಿಲ್ಲ. ಅದೊಂದು ದಿನ ಆಕೆ ಅವನನ್ನಿ ತನ್ನ ಮನಸ್ಸಿನ ಭಾವನೆಯನ್ನು ಹೇಳಿದಾಗ ಅವನೂ ಪ್ರೀತಿಸುವುದಾಗಿ ಹೇಳಿದರು. ಹಾಗೆ ಇವರಿಬ್ಬರೂ ಮೊಹಬ್ಬತ್ ಕಿ ಶಾದಿ ಅಂದರೆ ಪ್ರೇಮ ವಿವಾಹವಾಗಲು ತೀರ್ಮಾನಿಸಿದರು.

ಪಾಕಿಸ್ತಾನ: 55ರ ಹರೆಯದ ವ್ಯಕ್ತಿಯನ್ನು ಮದುವೆಯಾದ 18ರ ಯುವತಿ ಇವರ ಪ್ರೇಮಕ್ಕೆ ಕಾರಣವಾಗಿದ್ದು ಬಾಬ್ಬಿ ಡಿಯೋಲ್ ಹಾಡು!
ಪಾಕ್ ದಂಪತಿ
Edited By:

Updated on: Aug 30, 2022 | 9:35 PM

ಮುಸ್ಕಾನ್ ಎಂಬ 18 ವರ್ಷದ ಹುಡುಗಿ 55 ವರ್ಷ ವಯಸ್ಸಿನ ಫಾರೂಕ್ ಅಹ್ಮದ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇವರದ್ದು ಪ್ರೇಮ ವಿವಾಹ. ಇವರಲ್ಲಿ ಪ್ರೇಮ ಮೊಳಕೆಯೊಡೆಯುವಂತೆ ಮಾಡಿದ್ದು ಸಂಗೀತ. ಯುಟ್ಯೂಬರ್ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಸೈಯದ್ ಬಸಿತ್ ಅಲಿ ಅವರು “ಅನನ್ಯ ದಂಪತಿಗಳನ್ನು” ಸಂದರ್ಶಿಸಿದಾಗ ಪಾಕಿಸ್ತಾನದ ವಿಚಿತ್ರವಾದ ಪ್ರೇಮಕಥೆ ಬೆಳಕಿಗೆ ಬಂದಿತು. ಫಾರೂಕ್ ಮುಸ್ಕಾನ್‌ನಿಂದ ನೆರೆ ಹೊರೆಯವರು. ಸೈಯದ್ ಹೇಳಿದಂತೆ, “ಸಾಮ್ನೆ ವಾಲಿ ಖಿಡ್ಕಿ ಮೇ”. ಇವರಿಬ್ಬರಿಗೂ ಸಂಗೀತ ಇಷ್ಟ. ಈ ಇಷ್ಟವೇ ಇವರನ್ನು ಒಂದಾಗಿಸಿದ್ದು. ಮುಸ್ಕಾನ್ ಹಾಡುತ್ತಿರುವ ಹಾಡುಗಳನ್ನು ಫಾರೂಕ್ ಇಷ್ಟಪಡುತ್ತಿದ್ದ. ಅವನು ಆಕೆಯ ಮನೆಗೆ ಭೇಟಿ ನೀಡುತ್ತಿದ್ದ. ಅವನ ಮೇಲೆ ಏನೋ ಒಂದು ಭಾವನೆ ಇದೆ ಎಂಬುದು ಮುಸ್ಕಾನ್ ಅರಿವಿಗೆ ಬಂತು. ಕೆಲ ಬಾರಿ ಭೇಟಿ ಮಾಡಿದ ನಂತರ, ಆಕೆ ಬಾಬ್ಬಿ ಡಿಯೋಲ್ ಮತ್ತು ರಾಣಿ ಮುಖರ್ಜಿ ನಟಿಸಿದ ಹಿಂದಿ ಸಿನಿಮಾ ಬಾದಲ್​​ನ “ನಾ ಮಿಲೋ ಹಮ್ಸೆ ಜ್ಯಾದಾ” ಎಂದು ಹಾಡುವ ಮೂಲಕ ಅವನಿಗೆ ಸುಳಿವು ನೀಡಲಾರಂಭಿಸಿದಳು.

ಮೊದಲು ಪ್ರೇಮ ಹುಟ್ಟಿದ್ದು ಮುಸ್ಕಾನ್​​ಗೆ. ಫಾರೂಕ್ ತನ್ನ ಭಾವನೆಯನ್ನು ವ್ಯಕ್ತ ಪಡಿಸಲಿಲ್ಲ. ಅದೊಂದು ದಿನ ಆಕೆ ಅವನನ್ನಿ ತನ್ನ ಮನಸ್ಸಿನ ಭಾವನೆಯನ್ನು ಹೇಳಿದಾಗ ಅವನೂ ಪ್ರೀತಿಸುವುದಾಗಿ ಹೇಳಿದರು. ಹಾಗೆ ಇವರಿಬ್ಬರೂ ಮೊಹಬ್ಬತ್ ಕಿ ಶಾದಿ ಅಂದರೆ ಪ್ರೇಮ ವಿವಾಹವಾಗಲು ತೀರ್ಮಾನಿಸಿದರು.

ಈ ಮದುವೆಗೆ ತಮ್ಮ ಎಲ್ಲಾ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ವಿರೋಧಿಸಿದರು ಅಂತಾರೆ ಈ ಜೋಡಿ. ಆದರೆ ನಾವು ಜತೆಯಾಗಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಎದುರಿಸಲು ಸಿದ್ಧ. ಪರಸ್ಪರ ಒಪ್ಪಿಗೆಯಿಂದಲೇ ಮದುವೆ ಆಗಿದ್ದೇವೆ ಎಂದು ಹೇಳಿದ್ದಾರೆ ಈ ದಂಪತಿ.

ವಯಸ್ಸು 50 ಕಳೆದರೂ ಅವಿವಾಹಿತನಾಗಿದ್ದ ಫಾರೂಕ್,ಮುಸ್ಕಾನ್ ನನಗೆ ಸಿಕ್ಕಿದ್ದು ದೇವರ ಆಶೀರ್ವಾದ ಅಂತಾರೆ. ನಮ್ಮ ಪ್ರೀತಿಗಾಗಿ ನಾವು ಯಾವ ಹಂತಕ್ಕೂ ಹೋಗಲು ಸಿದ್ಧ, ಬೇಕಾದರೆ ಪ್ರಾಣವನ್ನೇ ಕೊಡುತ್ತೇನೆ ಎಂದು ಈ ನವಜೋಡಿ ಹೇಳಿದೆ.

ಇದೇ ರೀತಿ ಇಸ್ಲಾಮಾಬಾದ್ ನಲ್ಲಿಯೂ ಸ್ಪೆಷಲ್ ಪ್ರೇಮ ವಿವಾಹವೊಂದು ಸುದ್ದಿಯಾಗಿದೆ. ಮನೆಯೊಡತಿಯೊಬ್ಬಳು ತನ್ನ ಕೆಲಸದ ಸಹಾಯಕನನ್ನು ಮೆಚ್ಚಿ ಮದುವೆಯಾಗಿದ್ದಾರೆ. ಮನೆಯೊಡತಿ ನಾಝಿಯಾ, ಮನೆಯ ಸುತ್ತಲಿನ ಕೆಲಸಗಳಲ್ಲಿ ಸಹಾಯ ಮಾಡಲು ಸುಫಿಯಾನ್ ಎಂಬಾತನನ್ನು ನೇಮಕ ಮಾಡಿದ್ದರು. ಆಕೆಗೆ ಅವನಲ್ಲಿ ಪ್ರೇಮ ಹುಟ್ಟಿ ನನ್ನನ್ನು ನೋಡಿಕೊಳ್ಳುತ್ತೀಯಾ ಎಂದು ಕೇಳಿದ್ದಾರೆ. ಅವನು ಹೂಂ ಅಂದಿದ್ದು, ಇವರಿಬ್ಬರೂ ಮದುವೆಯಾಗಿದ್ದಾರೆ. ಈ ದಂಪತಿಗಳು ತಮ್ಮನ್ನು “ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್” ಗೆ ಹೋಲಿಸುತ್ತಾರೆ.

Published On - 8:15 pm, Tue, 30 August 22