Mikhail Gorbachev: ಅಮೆರಿಕ-ಸೋವಿಯತ್ ನಡುವಣ ಶೀತಲ ಸಮರ ಅಂತ್ಯಗೊಳಿಸಿದ್ದ ರಷ್ಯಾ ನಾಯಕ ಮೈಕೆಲ್ ಗೋರ್​ಬಚೆವ್ ನಿಧನ

ಅಮೆರಿಕದೊಂದಿಗೆ ಶಸ್ತ್ರಾಸ್ತ್ರ ಒಪ್ಪಂದಗಳ ಮೂಲಕ ಉದ್ವಿಗ್ನತೆ ಶಮನಗೊಳಿಸಲು ಗೋರ್​ಬಚೆವ್ ಯತ್ನಿಸಿದರು. ಜರ್ಮನಿಯ ಏಕೀಕರಣಕ್ಕೂ ಪರೋಕ್ಷವಾಗಿ ಕಾರಣರಾದರು.

Mikhail Gorbachev: ಅಮೆರಿಕ-ಸೋವಿಯತ್ ನಡುವಣ ಶೀತಲ ಸಮರ ಅಂತ್ಯಗೊಳಿಸಿದ್ದ ರಷ್ಯಾ ನಾಯಕ ಮೈಕೆಲ್ ಗೋರ್​ಬಚೆವ್ ನಿಧನ
ರಷ್ಯಾದ ಮಾಜಿ ಅಧ್ಯಕ್ಷ ಮೈಕೆಲ್ ಗೋರ್​ಬಚೆವ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 31, 2022 | 7:39 AM

ಮಾಸ್ಕೊ: 2ನೇ ಮಹಾಯುದ್ಧದ ನಂತರ ರಷ್ಯಾ ನೇತೃತ್ವದ ಸೋವಿಯತ್ ಒಕ್ಕೂಟ (USSR) ಹಾಗೂ ಅಮೆರಿಕ (USA) ನಡುವೆ ಶೀತಲ ಯುದ್ಧದ (Cold War) ರೂಪದಲ್ಲಿ ತಲೆದೋರಿದ್ದ ಸುದೀರ್ಘ ಸಂಘರ್ಷವನ್ನು ರಕ್ತಪಾತವಿಲ್ಲದೆ ಅಂತ್ಯಗೊಳಿಸಿದ್ದ ಸೋವಿಯತ್ ನಾಯಕ ಮೈಕೆಲ್ ಗೋರ್​ಬಚೆವ್ (92) (Mikhail Gorbachev) ಮಂಗಳವಾರ ರಾತ್ರಿ ನಿಧನರಾದರು. ಅಮೆರಿಕಕ್ಕೆ ಸೆಡ್ಡು ಹೊಡೆದು, ಹಲವು ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ದಾಖಲಿಸಿದ್ದ ಸೋವಿಯತ್ ಒಕ್ಕೂಟವು ಸಿಡಿದು ಛಿದ್ರವಾಗುವುದನ್ನು ತಡೆಯುವಲ್ಲಿ ಗೋರ್​ಬಚೆವ್ ವಿಫಲರಾಗಿದ್ದರು.

2ನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳೊಂದಿಗೆ ರಷ್ಯಾ ಅಂತರ ಕಾಪಾಡಿಕೊಂಡಿತ್ತು. ಕಬ್ಬಿಣದ ಪರದೆ (Iron Curtain) ಎಂದು ಸೂಚ್ಯವಾಗಿ ಹೇಳುತ್ತಿದ್ದ ಉದ್ವಿಗ್ನತೆ ಮತ್ತು ಮುಸುಕಿನ ಗುದ್ದಾಟವು ಎರಡು ಪ್ರಬಲ ಶಕ್ತಿಗಳ ನಡುವೆ ಸುದೀರ್ಘ ಕಾಲದವರೆಗೆ ಅಸ್ತಿತ್ವದಲ್ಲಿತ್ತು. ಶಸ್ತ್ರಾಸ್ತ್ರ ಒಪ್ಪಂದಗಳ ಮೂಲಕ ಉದ್ವಿಗ್ನತೆ ಶಮನಗೊಳಿಸಲು ಗೋರ್​ಬಚೆವ್ ಯತ್ನಿಸಿದರು. ಜರ್ಮನಿಯ ಏಕೀಕರಣಕ್ಕೂ ಪರೋಕ್ಷವಾಗಿ ಕಾರಣರಾದರು.

1989ರಲ್ಲಿ ಸೋವಿಯತ್ ದೇಶಗಳಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಆರಂಭವಾದಾಗ ಗೋರ್​ಬಚೆವ್ ಸೇನಾ ಬಲ ಬಳಸಿ ಹತ್ತಿಕ್ಕಲಿಲ್ಲ. 1956ರಲ್ಲಿ ಹಂಗೇರಿ ಮತ್ತು 1968ರಲ್ಲಿ ಜೆಕೊಸ್ಲೊವಾಕಿಯಾದಲ್ಲಿ ಪ್ರತಿಭಟನೆ ಜೋರಾದಾಗ ಅಂದಿನ ಅಧ್ಯಕ್ಷರು ಸೇನಾ ಬಲ ಬಳಸಿ ಪ್ರತಿಭಟನೆಗಳನ್ನು ಹತ್ತಿಕ್ಕಿದ್ದರು. 1989ರ ಈ ಪ್ರತಿಭಟನೆಗಳು ಕ್ರಮೇಣ ಇತರ ಪ್ರಾಂತ್ಯಗಳಿಗೂ ವ್ಯಾಪಿಸಿತು. ಎರಡೇ ವರ್ಷಗಳಲ್ಲಿ ಅಂದರೆ 1991ರಲ್ಲಿ ಸುಮಾರು 15 ಪ್ರಾಂತ್ಯಗಳು ಸ್ವತಂತ್ರ ಗಣರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದವು. ಅಸ್ತವ್ಯಸ್ತ ಸ್ಥಿತಿಯು ಜಾಗತಿಕ ಬಲಾಬಲಗಳನ್ನು ಏರುಪೇರು ಮಾಡಿತು. ಸೋವಿಯತ್ ಒಕ್ಕೂಟವು ಕುಸಿಯುವುದನ್ನು ತಡೆಯಲು ಗೋರ್​ಬಚೆವ್ ಹತಾಶ ಪ್ರಯತ್ನ ಮಾಡಿದರು. ಆದರೆ ಈ ಪ್ರಯತ್ನವು ಯಾವುದೇ ಫಲ ಕೊಡಲಿಲ್ಲ.

ತಮ್ಮ 54ನೇ ವರ್ಷದಲ್ಲಿ, ಅಂದರೆ 1985ರಲ್ಲಿ ಸೋವಿಯತ್ ಕಮ್ಯುನಿಸ್ಟ್ ಪಕ್ಷ ಪ್ರಧಾನ ಕಾರ್ಯದರ್ಶಿಯಾದರು ಗೋರ್​ಬಚೆವ್. ಸೋವಿಯತ್ ಒಕ್ಕೂಟದ ವಿವಿಧ ಪ್ರಾಂತ್ಯಗಳಿಗೆ ಸೀಮಿತ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಕೊಡುವ ಕ್ರಮಗಳನ್ನು ಘೋಷಿಸಿದರು. ಆದರೆ ಈ ಸುಧಾರಣಾ ಕ್ರಮಗಳು ನಿಯಂತ್ರಣ ಮೀರಿ ಹೋದವು. ‘ಗ್ಲಾಸ್​ನೊಸ್ಟ್​’ ಎನ್ನುವ ಮುಕ್ತ ಅಭಿವ್ಯಕ್ತಿಯ ಹೊಸ ನೀತಿಯನ್ನು ಆರಂಭಿಸಿದರು. ಇಂಥದ್ದೊಂದು ವ್ಯವಸ್ಥೆ ರಷ್ಯಾದಲ್ಲಿ ಜಾರಿಯಾಗಬಹುದು ಎಂದು ಈ ಮೊದಲು ಊಹಿಸಲೂ ಸಾಧ್ಯವಿರಲಿಲ್ಲ. ಪಕ್ಷ ಮತ್ತು ಸರ್ಕಾರವನ್ನು ಜನರು ಮುಕ್ತವಾಗಿ ಟೀಕಿಸಲು ಈ ನೀತಿಯು ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದು ರಾಷ್ಟ್ರೀಯವಾದಿಗಳಿಗೆ ಹೊಸ ಧೈರ್ಯ ತುಂಬಿ, ಅವರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುವಂತೆ ಮಾಡಿತು. ಲ್ಯಾಟ್​ವಿಯಾ, ಲಿಥುನಿಯಾ, ಈಸ್ಟೊನಿಯಾ ಮತ್ತಿತರರ ಬಾಲ್ಕನ್ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯದ ಬೇಡಿಕೆ ಹೆಚ್ಚಾಯಿತು.

ರಷ್ಯನ್ನರ ಜೀವನಮಟ್ಟದ ಕುಸಿಯಲು ಸಹ ಗೋರ್​ಬಚೆವ್ ತೆಗೆದುಕೊಂಡ ಸುಧಾರಣೆಯ ಕ್ರಮಗಳು ಕಾರಣ ಎಂದು ಹಲವು ರಷ್ಯಾದ ನಾಗರಿಕರು ಇಂದಿಗೂ ಬೇಸರ ವ್ಯಕ್ತಪಡಿಸುತ್ತಾರೆ. ಪ್ರಜಾಪ್ರಭುತ್ವಕ್ಕಾಗಿ ತೆತ್ತ ಬೆಲೆ ದೊಡ್ಡದು ಎನ್ನುವ ಕಾರಣಕ್ಕೆ ಸಾಕಷ್ಟು ಜನರು ಗೊರ್​ಬಚೆವ್ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಕಳೆದ ಜೂನ್ 30ರಂದು ಉದಾರವಾದಿ ರಸ್ಲಾನ್ ಗ್ರಿನ್​ಬರ್ಗ್​ ಕಳೆದ ಜೂನ್ 30ರಂದು ಗೊರ್​ಬಚೆವ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ನಂತರ ಹೀಗೆ ಹೇಳಿದ್ದರು. ‘ಅವರು ನಮಗೆ ಸ್ವಾತಂತ್ರ್ಯ ಕೊಟ್ಟರು. ಆದರೆ ಅದನ್ನು ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಾಗಲಿಲ್ಲ’ ಎಂದು ಹೇಳಿದ್ದರು.

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್