ಯುಕೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಲಭಿಸಲಿದೆ ಆದ್ಯತೆ ಮತ್ತು ಸೂಪರ್ ಪ್ರಯಾರಿಟಿ ವೀಸಾ
ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಅಗತ್ಯವಿರುವ ದಾಖಲಾತಿಗಳೊಂದಿಗೆ ಸಾಧ್ಯವಾದಷ್ಟು ಬೇಗ ನಿಮ್ಮ ವೀಸಾಕ್ಕೆ ಅರ್ಜಿ ಸಲ್ಲಿಸಲು ನಾವು ಶಿಫಾರಸು ಮಾಡುತ್ತೇವೆ ಎಂದು ಎಲ್ಲಿಸ್ ಮುಂಬರುವ ಶೈಕ್ಷಣಿಕ ಅಧಿವೇಶನಕ್ಕಾಗಿ ಯುಕೆಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
ಯುನೈಟೆಡ್ ಕಿಂಗ್‌ಡಮ್ ಇದೀಗ ಭಾರತೀಯ ವಿದ್ಯಾರ್ಥಿಗಳಿಗೆ ಆದ್ಯತೆ (Priority) ಮತ್ತು ಪರಮೋಚ್ಛ ಆದ್ಯತೆ ವೀಸಾಗಳನ್ನು (Super Priority Visa) ಲಭ್ಯವಾಗುವಂತೆ ಮಾಡಿದೆ ಎಂದು ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ (Alex Ellis) ಮಂಗಳವಾರ ಹೇಳಿದ್ದಾರೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಅಗತ್ಯವಿರುವ ದಾಖಲಾತಿಗಳೊಂದಿಗೆ ಸಾಧ್ಯವಾದಷ್ಟು ಬೇಗ ನಿಮ್ಮ ವೀಸಾಕ್ಕೆ ಅರ್ಜಿ ಸಲ್ಲಿಸಲು ನಾವು ಶಿಫಾರಸು ಮಾಡುತ್ತೇವೆ ಎಂದು ಎಲ್ಲಿಸ್ ಮುಂಬರುವ ಶೈಕ್ಷಣಿಕ ಅಧಿವೇಶನಕ್ಕಾಗಿ ಯುಕೆಗೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ನೀವು ಬಯಸಿದರೆ, ನೀವು ಆದ್ಯತೆಯ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು, ಅದು ಸುಮಾರು ಐದು ದಿನಗಳಲ್ಲಿ ನಿಮಗೆ ಸಿಗುತ್ತದೆ ಅಥವಾ ಅದಕ್ಕಿಂತ ವೇಗವಾಗಿ ಬೇಕಾದರೆ ಸೂಪರ್ ಪ್ರಿಯಾರಿಟಿ ವೀಸಾವನ್ನು ಪಡೆಯಬಹುದು ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಪ್ರಸ್ತುತ ಯುಕೆ ಸುಮಾರು 15 ದಿನಗಳಲ್ಲಿ ವೀಸಾ ವಿನಂತಿಗಳೊಂದಿಗೆ ವ್ಯವಹರಿಸುತ್ತಿದೆ ಎಂದು ಬ್ರಿಟಿಷ್ ಹೈ ಕಮಿಷನರ್ ಹೇಳಿದ್ದಾರೆ. ಭಾರತೀಯ ವಿದ್ಯಾರ್ಥಿಗಳೇ, ನೀವು ಯುಕೆಗೆ ಬರಲು ಬಯಸುತ್ತೀರಿ ಎಂದಾದರೇ ಈಗಲೇ ಅರ್ಜಿ ಸಲ್ಲಿಸಿ, ದಾಖಲೆಗಳನ್ನು ಸರಿಯಾಗಿ ಪಡೆದುಕೊಳ್ಳಿ” ಎಂದು ಅವರು ಹೇಳಿದ್ದಾರೆ
ಯುಕೆ ಸರ್ಕಾರದ ವೆಬ್‌ಸೈಟ್‌ನ ಪ್ರಕಾರ, ವೀಸಾ ನಿರ್ಧಾರವನ್ನು ಸುರಕ್ಷಿತವಾಗಿರಿಸಲು ಇವು ತ್ವರಿತ ಮಾರ್ಗಗಳಾಗಿವೆ. ‘ಪ್ರಿಯಾರಿಟಿ’ ಸೇವೆಯು ಐದು ಕೆಲಸದ ದಿನಗಳಲ್ಲಿ ವೀಸಾ ನಿರ್ಧಾರವನ್ನು ಖಚಿತಪಡಿಸುತ್ತದೆ, ‘ಸೂಪರ್ ಪ್ರಿಯಾರಿಟಿ’ ಸೇವೆಯ ಅಡಿಯಲ್ಲಿ, ಮುಂದಿನ ಕೆಲಸದ ದಿನದ ಅಂತ್ಯದೊಳಗೆ ನಿರ್ಧಾರವನ್ನು ಪ್ರಕಟಿಸಬಹುದು.
Update for ?? students ? travelling to the UK
?? has now made Priority and Super Priority visas available for students.
There is a high demand — we recommend you apply for your visa as early as possible with the required documentation.
Apply now! pic.twitter.com/yGodCzGphO
— Alex Ellis (@AlexWEllis) August 30, 2022
ವಾರದ ಕೊನೆಯ ಕೆಲಸದ ದಿನದಂದು ಅಥವಾ ಸಾರ್ವಜನಿಕ ರಜೆಯ ಮೊದಲು ಕೊನೆಯ ಕೆಲಸದ ದಿನದಂದು ಸಲ್ಲಿಸಿದ ಅರ್ಜಿಗಳು ಮುಂದಿನ ಕೆಲಸದ ದಿನದ ಕೊನೆಯಲ್ಲಿ ಕೈ ಸೇರುತ್ತದೆ ಎಂದು ವೆಬ್‌ಸೈಟ್ ಹೇಳುತ್ತದೆ.
‘ಸೂಪರ್ ಪ್ರಿಯಾರಿಟಿ’ ಸೇವೆಯು ಐಚ್ಛಿಕವಾಗಿದೆ ಮತ್ತು ವೀಸಾ ಶುಲ್ಕದ ಜೊತೆಗೆ ಶುಲ್ಕವನ್ನು ಹೊಂದಿದೆ.
ವೀಸಾ ಅನುಮೋದನೆಗಳಲ್ಲಿನ ವಿಳಂಬದ ಕುರಿತು ಎಲ್ಲಿಸ್ ಟ್ವಿಟರ್‌ನಲ್ಲಿ ವಿಡಿಯೊ ಸಂದೇಶವನ್ನು ಹಂಚಿಕೊಂಡ ವಾರಗಳ ನಂತರ ಆ ಟ್ವೀಟ್ ಬಂದಿದೆ. ವೀಸಾ ವಿಳಂಬದಿಂದಾಗಿ ನೊಂದ ಜನರಲ್ಲಿ ಅವರು ಕ್ಷಮೆಯಾಚಿಸಿದ್ದಾರೆ
ವಿಳಂಬದ ಹಿಂದಿನ ಕಾರಣವನ್ನು ಉಲ್ಲೇಖಿಸಿದ, ಹೈ ಕಮಿಷನರ್ “ಕೋವಿಡ್ ನಂತರದ ಯುಕೆ ವೀಸಾಗಳ ಬೇಡಿಕೆಯಲ್ಲಿ ಅಭೂತಪೂರ್ವ ಏರಿಕೆಯಾಗಿದೆ. ವಿಶೇಷವಾಗಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮೊದಲಾದ ಜಾಗತಿಕ ಘಟನೆಗಳ ಕಾರಣ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಇತ್ತೀಚಿನ ಯುಕೆ ವಲಸೆ ಅಂಕಿಅಂಶಗಳ ಮಾಹಿತಿಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತೀಯರಿಗೆ ನೀಡಲಾದ ವಿದ್ಯಾರ್ಥಿ ವೀಸಾಗಳಲ್ಲಿ ಶೇಕಡಾ 89 ರಷ್ಟು ಹೆಚ್ಚಳವನ್ನು ತೋರಿಸಿದೆ. ಜೂನ್ 2022ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ 1.18 ಲಕ್ಷ ವೀಸಾಗಳೊಂದಿಗೆ ಯುಕೆಯಲ್ಲಿ ಪ್ರಾಯೋಜಿತ ಅಧ್ಯಯನ ವೀಸಾಗಳನ್ನು ನೀಡಲಾಗುತ್ತಿರುವ ಅತಿದೊಡ್ಡ ರಾಷ್ಟ್ರೀಯತೆಯಾಗಿ ಚೀನಾವನ್ನು ಹಿಂದಿಕ್ಕಿದೆ ಎಂದು ಅದು ತೋರಿಸಿದೆ.