Morocco Earthquake: ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ ದೇಶದಲ್ಲಿ ಭೂಕಂಪನದಿಂದ 2 ಸಾವಿರ ಜನರ ಸಾವು

| Updated By: ವಿವೇಕ ಬಿರಾದಾರ

Updated on: Sep 10, 2023 | 7:08 AM

ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ ದೇಶದಲ್ಲಿ ಸಂಭವಿಸಿದ ಭೂಕಂಪನದಿಂದ 2 ಸಾವಿರ ಜನರ ಸಾವಿಗೀಡಾಗಿದ್ದಾರೆ. ಹೀಗಾಗಿ ಮೊರಾಕೊದಲ್ಲಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

Morocco Earthquake: ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ ದೇಶದಲ್ಲಿ ಭೂಕಂಪನದಿಂದ 2 ಸಾವಿರ ಜನರ ಸಾವು
ಮೊರೊಕ್ಕೊ ಭೂಕಂಪ
Follow us on

ರಬತ್: ಅಟ್ಲಾಂಟಿಕ್ (Atlantica) ಹಾಗೂ ಮೆಡಿಟರೇಯನ್ ಸಮುದ್ರ (Mediterranean Sea) ತೀರದಲ್ಲಿರುವ ಉತ್ತರ ಆಫ್ರಿಕಾ (North Africa) ಖಂಡದ ಮೊರಾಕ್ಕೊ (Morocco) ದೇಶದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯಲ್ಲಿ ಭೂಕಂಪ (Earthquake) ಸಂಭವಿಸಿತ್ತು. ಈ ಭೂಕಪಂದಲ್ಲಿ 2000 ಮಂದಿ ಸಾವಿಗೀಡಾಗಿದ್ದಾರೆ. 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 205 ಜನರ ಸ್ಥಿತಿ ಗಂಭೀರವಾಗಿದೆ. ಅವಶೇಷಗಳಡಿ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿಗಳು ಎದುರಾಗಿವೆ. ಹೀಗಾಗಿ ಮೊರಾಕೊದಲ್ಲಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ಭೂಕಂಪದಿಂದಾಗಿ ಅಟ್ಲಾಸ್ ಪರ್ವತಶ್ರೇಣಿಯಿಂದ ಐತಿಹಾಸಿಕ ನಗರಿ ಮ್ಯಾರಕೇಶ್‌ವರೆಗೆ ಇರುವ ನಗರ, ಹಳ್ಳಿಗಳ ಹಲವಾರು ಕಟ್ಟಡಗಳು ಸಂಪೂರ್ಣ ಅಥವಾ ಭಾಗಶಃ ಕುಸಿದಿವೆ. ವಿದ್ಯುತ್‌ ಹಾಗೂ ರಸ್ತೆ ಸಂಪರ್ಕ ಹಲವು ಪ್ರದೇಶಗಳಲ್ಲಿ ಕಡಿತಗೊಂಡಿದೆ. ಗಾಯಾಳುಗಳನ್ನು ಸಾಗಣೆ ಮಾಡುವುದಕ್ಕೆ ಆಂಬುಲೆನ್ಸ್​​​ ಸಂಚರಿಸುವುದಕ್ಕೂ ಆಗದಷ್ಟು ರಸ್ತೆಗಳ ಮೇಲೆ ಬಂಡೆಗಳು ಕುಸಿದಿದ್ದು, ರಕ್ಷಣಾ ತಂಡಗಳು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.

ಇದನ್ನೂ ಓದಿ: ಮೊರಾಕೊದಲ್ಲಿ 6.8 ತೀವ್ರತೆಯ ಭೂಕಂಪ, ಪ್ರಧಾನಿ ಮೋದಿ ಸಂತಾಪ

45 ಲಕ್ಷ ಜನರು ನೆಲೆಸಿರುವ ಮೊರಾಕ್ಕೊದ ವಾಣಿಜ್ಯ ನಗರ ಮ್ಯಾರಕೇಶ್‌ ನಿಂದ ದಕ್ಷಿಣ ದಿಕ್ಕಿಗೆ 70 ಕಿ.ಮೀ. ದೂರದಲ್ಲಿರುವ ಅಲ್ ಸೌತ್ ಪ್ರಾಂತ್ಯದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಮೇಲಿನಿಂದ 18 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. 11 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ ಎಂದು ಮೊರೊಕ್ಕೊದ ಭೂಕಂಪನ ಸಂಸ್ಥೆ ತಿಳಿಸಿದೆ. ಇಷ್ಟೊಂದು ಆಳದಲ್ಲಿ ಸಂಭವಿಸುವ ಭೂಕಂಪಗಳು ಅಪಾಯಕಾರಿಯಾಗಿಯೇ ಇರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಉತ್ತರ ಆಫ್ರಿಕಾದಲ್ಲಿ ಭೂಕಂಪಗಳೇ ಬಲು ಅಪರೂಪ, ಮೊರಾಕ್ಕೊದ ಅಗದೀ‌ ನಗರದಲ್ಲಿ 1960ರಲ್ಲಿ 5.3 ತೀವ್ರತೆಯ ಕಂಪನ ಸಂಭವಿಸಹಸ್ರಾರು ಮಂದಿ ಸಾವಿಗೀಡಾಗಿದ್ದರು. 2004ರಲ್ಲಿ 6.4 ತೀವ್ರತೆಯ ಕಂಪನದಿಂದ 600 ಮಂದಿ ಸಾವಿಗೀಡಾಗಿದ್ದರು. ಈಗ ಅದಕ್ಕಿಂತಲೂ ಭೀಕರವಾದ ಕಂಪನ ಉಂಟಾಗಿದೆ.

ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ