Big News: ವೆನೆಜುವೆಲಾದಲ್ಲಿ ಭೀಕರ ಪ್ರವಾಹ, ಭೂಕುಸಿತ; 22 ಜನ ಸಾವು, 50 ಮಂದಿ ನಾಪತ್ತೆ

ವರದಿಗಳ ಪ್ರಕಾರ, ವೆನೆಜುವೆಲಾ ಇತ್ತೀಚಿನ ವಾರಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಬಿಕ್ಕಟ್ಟಿನಿಂದ ತತ್ತರಿಸಿದೆ. ಇಲ್ಲಿಯವರೆಗೆ, 22 ಮಂದಿ ಸಾವನ್ನಪ್ಪಿರುವುದು ಪತ್ತೆಯಾಗಿದೆ ಮತ್ತು 52ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

Big News: ವೆನೆಜುವೆಲಾದಲ್ಲಿ ಭೀಕರ ಪ್ರವಾಹ, ಭೂಕುಸಿತ; 22 ಜನ ಸಾವು, 50 ಮಂದಿ ನಾಪತ್ತೆ
ವೆನೆಜುವೆಲಾದಲ್ಲಿ ಭೂಕುಸಿತ
Updated By: ಸುಷ್ಮಾ ಚಕ್ರೆ

Updated on: Oct 10, 2022 | 3:51 PM

ವೆನೆಜುವೆಲಾ: ವೆನೆಜುವೆಲಾದಲ್ಲಿ ಭೂಕುಸಿತ (Venezuela Landslide) ಸಂಭವಿಸಿ ಸುಮಾರು 22 ಜನರು ಸಾವನ್ನಪ್ಪಿದ್ದಾರೆ. ನದಿಗಳು ಉಕ್ಕಿ ಹರಿದ ನಂತರ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದ ಉಂಟಾದ ಇತ್ತೀಚಿನ ಮಾರಣಾಂತಿಕ ಪ್ರವಾಹ ವೆನೆಜುವೆಲಾ ದೇಶವನ್ನು ಅಪ್ಪಳಿಸಿದೆ. ಹೆಚ್ಚಿನ ಮಳೆಯ ಪರಿಣಾಮವಾಗಿ ಬಿಕ್ಕಟ್ಟು ಪೀಡಿತ ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಡಜನ್​ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ.

ಈ ಘಟನೆಯಿಂದ ಮನೆಗಳು ಮತ್ತು ಅಂಗಡಿಗಳು ನಾಶವಾಗಿವೆ. ಸುಮಾರು 1 ಸಾವಿರ ಜನರು ರಕ್ಷಣಾ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ ಎಂದು ಆಂತರಿಕ ಮತ್ತು ನ್ಯಾಯ ಸಚಿವ ರೆಮಿಜಿಯೊ ಸೆಬಾಲ್ಲೋಸ್ ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ವೆನೆಜುವೆಲಾದಲ್ಲಿ 5 ನದಿಗಳು ಉಕ್ಕಿ ಹರಿಯುತ್ತಿದ್ದು, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಮತ್ತು 52 ಮಂದಿ ನಾಪತ್ತೆಯಾಗಿದ್ದಾರೆ. ವೆನೆಜುವೆಲಾದಲ್ಲಿ ಪ್ರವಾಹವು ಭಾನುವಾರ ಬೆಳಿಗ್ಗೆ ಮೂರು ರಾಜ್ಯಗಳಲ್ಲಿ ಹಾನಿಯನ್ನುಂಟುಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದ 25 ಜನ ಸಾವು; ಶಾಲೆಗಳಿಗೆ ರಜೆ ಘೋಷಣೆ

ವರದಿಗಳ ಪ್ರಕಾರ, ವೆನೆಜುವೆಲಾ ಇತ್ತೀಚಿನ ವಾರಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಬಿಕ್ಕಟ್ಟಿನಿಂದ ತತ್ತರಿಸಿದೆ. ಇಲ್ಲಿಯವರೆಗೆ, 22 ಮಂದಿ ಸಾವನ್ನಪ್ಪಿರುವುದು ಪತ್ತೆಯಾಗಿದೆ ಮತ್ತು 52ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ನಾವು ಈ ಜನರನ್ನು ಹುಡುಕಲು ಕೆಲಸ ಮಾಡುತ್ತಿದ್ದೇವೆ ಎಂದು ಉಪಾಧ್ಯಕ್ಷ ಡೆಲ್ಸಿ ರೋಡ್ರಿಗಸ್ ಹೇಳಿದ್ದಾರೆ.

ಈ ದುರಂತದ ನಂತರ 3 ದಿನಗಳ ಶೋಕಾಚರಣೆಯನ್ನು ಘೋಷಿಸಲಾಯಿತು. ಬಿಕ್ಕಟ್ಟಿನ ಮಧ್ಯೆ 1 ಸಾವಿರಕ್ಕೂ ಹೆಚ್ಚು ವೆನೆಜುವೆಲಾದವರು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ