- Kannada News Photo gallery 2022 Nobel Prizes physiology or medicine, physics, chemistry, economic science, literature and peace work Winners
2022 Nobel Prizes 2022ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜೇತರು
ಪ್ರತಿ ವರ್ಷ ಅಕ್ಟೋಬರ್‌ನಲ್ಲಿ, ಸ್ವೀಡನ್ ಮತ್ತು ನಾರ್ವೆಯ ಸಮಿತಿಗಳು ಆರು ನೊಬೆಲ್ ಪ್ರಶಸ್ತಿಗಳನ್ನು ನೀಡುತ್ತವೆ, ನಿರ್ದಿಷ್ಟ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಅದ್ಭುತ ಕೊಡುಗೆಯನ್ನು ಇದು ಗುರುತಿಸಿ, ಪ್ರಶಸ್ತಿ ನೀಡುತ್ತಿದ್ದು ಈ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತರು ಇವರು.
Updated on:Oct 10, 2022 | 6:07 PM

ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಗಾಗಿ ನೀಡುವ ಪ್ರಶಸ್ತಿಯನ್ನು ಶ್ರೀಮಂತ ಸ್ವೀಡಿಷ್ ಕೈಗಾರಿಕೋದ್ಯಮಿ ಮತ್ತು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಿಂದ ಸ್ಥಾಪಿಸಲಾಯಿತು. ನೊಬೆಲ್ ಮರಣದ ಐದು ವರ್ಷಗಳ ನಂತರ 1901 ರಲ್ಲಿ ಮೊದಲ ಪ್ರಶಸ್ತಿಗಳನ್ನು ನೀಡಲಾಯಿತು.

2022ನೇ ಸಾಲಿನ ನೊಬೆಲ್ ಪ್ರಶಸ್ತಿ: ವೈದ್ಯಕೀಯ ಕ್ಷೇತ್ರದಲ್ಲಿ ಜಿನೋಮ್‌ಗಳಿಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ ಸ್ವಾಂಟೆ ಪಾಬೊಗೆ ಪ್ರಶಸ್ತಿ

ಅಲೈನ್ ಆಸ್ಪೆಕ್ಟ್, ಜಾನ್ ಎಫ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ 2022ನೇ ಸಾಲಿನ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ರಸಾಯನಶಾಸ್ತ್ರದಲ್ಲಿ ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಅವರಿಗೆ ಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿ ಅಭಿವೃದ್ಧಿಗಾಗಿ ನೊಬೆಲ್ ಪ್ರಶಸ್ತಿ

ಬೆಲಾರಸ್ನ ಮಾನವ ಹಕ್ಕುಗಳ ಕಾರ್ಯಕರ್ತ ಅಲೆಸ್ ಬಿಯಾಲಿಯಾಟ್ಸ್ಕಿ (Ales Bialiatski) ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ (Memorial) ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ (Center for Civil Liberties) ನೊಬೆಲ್ ಶಾಂತಿ ಪ್ರಶಸ್ತಿ

ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರಿಗೆ 2022ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ

ಬೆನ್ ಬರ್ನಾಂಕೆ , ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
Published On - 6:06 pm, Mon, 10 October 22




