3 ವರ್ಷಗಳಿಂದ ನಿರುದ್ಯೋಗಿ, ತಿಂಗಳ ಖರ್ಚಿಗೆ 3 ಗರ್ಲ್​ಫ್ರೆಂಡ್ಸ್​, ಕೊನೆಗೂ ಆತನನ್ನು ಜೈಲಿಗಟ್ಟಿದ್ಹೇಗೆ?

ಪ್ರೀತಿ(Love) ಹೆಸರಿನಲ್ಲಿ ವಂಚಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಆತ ನಿರುದ್ಯೋಗಿ ಕಳೆದ ಎರಡು ವರ್ಷಗಳಿಂದ ದುಡಿಮೆ ಇಲ್ಲ, ಆದರೆ ಮೂವರು ಗರ್ಲ್​ ಫ್ರೆಂಡ್ಸ್ ಇದ್ದಾರೆ, ಅವರಿಗೆ ಪ್ರೀತಿ ಹೆಸರಿನಲ್ಲಿ ಮೋಸಮಾಡುತ್ತಾ ಇದುವರೆಗೆ 12 ಲಕ್ಷ ರೂ. ದೋಚಿದ್ದಾನೆ

3 ವರ್ಷಗಳಿಂದ ನಿರುದ್ಯೋಗಿ, ತಿಂಗಳ ಖರ್ಚಿಗೆ 3 ಗರ್ಲ್​ಫ್ರೆಂಡ್ಸ್​, ಕೊನೆಗೂ ಆತನನ್ನು ಜೈಲಿಗಟ್ಟಿದ್ಹೇಗೆ?
ಯುವತಿಯರುImage Credit source: NDTV
Follow us
ನಯನಾ ರಾಜೀವ್
|

Updated on: May 31, 2023 | 8:39 AM

ಪ್ರೀತಿ(Love) ಹೆಸರಿನಲ್ಲಿ ವಂಚಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಆತ ನಿರುದ್ಯೋಗಿ ಕಳೆದ ಎರಡು ವರ್ಷಗಳಿಂದ ದುಡಿಮೆ ಇಲ್ಲ, ಆದರೆ ಮೂವರು ಗರ್ಲ್​ ಫ್ರೆಂಡ್ಸ್ ಇದ್ದಾರೆ, ಅವರಿಗೆ ಪ್ರೀತಿ ಹೆಸರಿನಲ್ಲಿ ಮೋಸಮಾಡುತ್ತಾ ಇದುವರೆಗೆ 12 ಲಕ್ಷ ರೂ. ದೋಚಿದ್ದಾನೆ.  ಮೂವರು ಯುವತಿಯರಿಗೂ ಒಬ್ಬರಿಗೊಬ್ಬರು ಪರಿಚಯವಿಲ್ಲ, ಒಂದು ದಿನ ಆತ ಕುಡಿದು ನಶೆಯಲ್ಲಿ ಮಲಗಿರುವ ವೇಳೆ ಚೆನ್​ಹ್ಯಾಂಗ್​ಗೆ ಅನುಮಾನ ಬಂದು ಶಿವೈ ಮೊಬೈಲ್ ಪರಿಶೀಲಿಸಿದ್ದಳು, ನನ್ನ ಕರೆಗಳನ್ನು ಏಕೆ ಸ್ವೀಕರಿಸುತ್ತಿಲ್ಲ ಎನ್ನುವ ಮಹಿಳೆಯ ಸಂದೇಶವನ್ನು ನೋಡಿದ್ದಾಳೆ, ಬಳಿಕ ಚೆನ್ ಕ್ಸಿಯಾವೋ ಫ್ಯಾನ್ ಎಂಬ ಮಹಿಳೆಯನ್ನು ಸಂಪರ್ಕಿಸಿದಳು. ಶಿವೈ ಚೆನ್ ಹಾಗೂ ಕ್ಸಿಯಾವೊ ಇಬ್ಬರನ್ನೂ ಮದುವೆಯಾಗಲು ಬಯಸಿದ್ದ.

ಫೆಬ್ರವರಿ 10 ರಂದು ಝಾವೋ ಲಿನ್ ಎಂಬ ಮೂರನೇ ಮಹಿಳೆಯಿಂದ ಚೆನ್​ಗೆ ಕರೆ ಬಂತು, ಆಗ ಆಕೆ ತಾನು ಶಿವೈ ಗೆಳತಿ ಎಂದು ಹೇಳಿಕೊಂಡಳು. ತಮ್ಮಿಂದ ಪಡೆದಿರುವ ಹಣವನ್ನು ಮರಳಿ ನೀಡುವಂತೆ ಮೂವರು ಮಹಿಳೆಯರು ಒತ್ತಡ ಹೇರಿದ್ದರು, ಏನಾದರೂ ಹಣ ವಾಪಸ್ ಬರಲಿಲ್ಲ, ಹೀಗಾಗಿ ಪೊಲೀಸರ ಬಳಿ ಮೂವರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ‌ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ

2022 ರ ಅಕ್ರೋಬರ್​ನಲ್ಲಿ ಚೆನ್​, ಜೂನ್​ನಲ್ಲಿ ಕ್ಸಿಯಾವೋ ಹಾಗೂ 2021ರಿಂದ ಝಾವೋ ಜತೆಯಲ್ಲಿ ಆತ ಡೇಟಿಂಗ್ ಮಾಡುತ್ತಿದ್ದ. 202ರಲ್ಲೇ ಆತ ಕೆಲಸ ಬಿಟ್ಟಿದ್ದ, ಮಹಿಳೆಯರು ನೀಡಿರುವ ಹಣವನ್ನು ಸಾಲ ತೀರಿಸಲು ಬಳಸುತ್ತಿದ್ದ. ಬಳಿಕ ಆತನನ್ನು ಜೈಲಿಗೆ ಕಳುಹಿಸಿದ್ದಾರೆ, ಉತ್ತಮ ಸ್ನೇಹಿತರಾದ ಮೂವರು ಮಹಿಳೆಯರು ಒಟ್ಟಿಗೆ ವಿದೇಶ ಪ್ರವಾಸವನ್ನು ಕೂಡ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ