ಮಕ್ಕಳು ಇನ್ನೆಷ್ಟು ಕಾಯಬೇಕು? ಶಾಲೆಗಳ ಮರು ಆರಂಭಕ್ಕೆ ದಿಟ್ಟ ಕ್ರಮ ಕೈಗೊಳ್ಳಿ; ಸರ್ಕಾರಗಳನ್ನು ಆಗ್ರಹಿಸಿದ ಯುನಿಸೆಫ್​

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಶಾಲೆಗಳನ್ನು ಮುಚ್ಚಲಾಗಿತ್ತು. ಅದರಲ್ಲಿ ತಮಿಳುನಾಡು, ಚಂಡಿಗಢ್​, ಹರ್ಯಾಣ ಸರ್ಕಾರಗಳು, 2022ರ ಫೆಬ್ರವರಿ 1ರಿಂದ ತಾವು ಮತ್ತೆ ಶಾಲೆಗಳನ್ನು ಪ್ರಾರಂಭ ಮಾಡುವುದಾಗಿ ಘೋಷಿಸಿವೆ.

ಮಕ್ಕಳು ಇನ್ನೆಷ್ಟು ಕಾಯಬೇಕು? ಶಾಲೆಗಳ ಮರು ಆರಂಭಕ್ಕೆ ದಿಟ್ಟ ಕ್ರಮ ಕೈಗೊಳ್ಳಿ; ಸರ್ಕಾರಗಳನ್ನು ಆಗ್ರಹಿಸಿದ ಯುನಿಸೆಫ್​
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 29, 2022 | 12:59 PM

ಕೊವಿಡ್​ 19 ಸೋಂಕು (Covid 19) ಎಲ್ಲ ಕ್ಷೇತ್ರಗಳ ಮೇಲೂ ಕೂಡ ದುಷ್ಪರಿಣಾಮ ಬೀರಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರ ತುಸು ಜಾಸ್ತಿಯೇ ಬಾಧಿತವಾಗಿದೆ. ವಿದ್ಯಾರ್ಥಿಗಳ ಕಲಿಕೆ, ಆಯಾ ಕಾಲಕ್ಕೆ ನಡೆಯಬೇಕಿದ್ದ ಪರೀಕ್ಷೆಗಳು ಎಲ್ಲದಕ್ಕೂ ಅಡ್ಡಗಾಲು ಹಾಕಿದ್ದು ಈ ಕೊರೊನಾ. ಪದೇಪದೆ ಶಾಲೆ/ಕಾಲೇಜುಗಳು ಮುಚ್ಚಲ್ಪಡುತ್ತಿವೆ. ಆನ್​ಲೈನ್​ ಕ್ಲಾಸ್​ (Online Class)ಗಳು ಅನೇಕ ವಿದ್ಯಾರ್ಥಿಗಳಿಗೆ ತಲುಪುವುದೇ ಇಲ್ಲ. ಹೀಗೆ ಕೊರೊನಾ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡುವುದು ಮಕ್ಕಳ ಪಾಲಿಗೆ ಬಹುದೊಡ್ಡ ಸವಾಲಾಗುತ್ತಿರುವ ಸಂದರ್ಭದಲ್ಲಿ ವಿಶ್ವ ಸಂಸ್ಥೆ ಮಕ್ಕಳ ನಿಧಿ (UNICEF)ಯ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರಿಯೆಟ್ಟಾ ಫೋರ್ (Henrietta Fore), ಶಾಲೆಗಳನ್ನು ಮರು ಪ್ರಾರಂಭ ಮಾಡುವ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಕೊರೊನಾ ಹೆಚ್ಚುತ್ತಿದೆ. ಈ ಮಧ್ಯೆ ಕೂಡ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಏನೆಲ್ಲ ಕ್ರಮ ಕೈಗೊಳ್ಳಬಹುದೋ ಅದನ್ನು ಮಾಡಿ, ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಮಾಡಲು ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಾಗುವಂಥದ್ದನ್ನೆಲ್ಲ ಜಾರಿಗೊಳಿಸಿ ಎಂದು ನಾವು ಸರ್ಕಾರಗಳನ್ನು ಆಗ್ರಹಿಸುತ್ತಿದ್ದೇವೆ. ಮಕ್ಕಳು ಇನ್ನೂ ಕಾಯಲು ಸಾಧ್ಯವಿಲ್ಲ. ಅವರ ಶಿಕ್ಷಣಕ್ಕೆ ಇನ್ನೇನೂ ಅಡ್ಡಿಯಾಗಬಾರದು ಎಂದು ಹೆನ್ರಿಯೆಟ್ಟಾ ತಿಳಿಸಿದ್ದಾರೆ.

ಯುನಿಸೆಫ್​ ತನ್ನ ಸಹಭಾಗಿಗಳ ಸಹಯೋಗದಲ್ಲಿ ಶಾಲೆ ಮರು ಆರಂಭಕ್ಕೆ ಸಂಬಂಧಪಟ್ಟಂತೆ ಒಂದು ಚೌಕಟ್ಟಿನಡಿ ನಿಯಮಗಳನ್ನು ರೂಪಿಸಿದೆ. ಅದರ ಅನ್ವಯ, ಶಾಲೆಗಳನ್ನು ತೆರೆಯಲು ಸ್ಥಳೀಯ ಆಡಳಿತಗಳು ನಿರ್ಧರಿಸಿದಾಗ ಮೊದಲು ಶಿಕ್ಷಣ, ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ-ಆರ್ಥಿಕ ಅಂಶಗಳಿಗೆ ಸ್ಥಳೀಯವಾಗಿ ಇರುವ ಸವಾಲುಗಳು ಏನು ಮತ್ತು ಅಲ್ಲಿರುವ ಅನುಕೂಲತೆಗಳು ಏನು ಎಂಬುದನ್ನು ಸರಿಯಾಗಿ ಗಮನಿಸಿಕೊಳ್ಳಬೇಕು. ಅದಕ್ಕೆ ಏನೆನೆಲ್ಲ ಪುರಾವೆಗಳು ಲಭ್ಯವಾಗುತ್ತವೋ, ಅದನ್ನೆಲ್ಲ ಬಳಸಿಕೊಳ್ಳಬೇಕು. ಪ್ರತಿ ಮಗುವಿನ ಹಿತಾಸಕ್ತಿ ಅತ್ಯಂತ ಮುಖ್ಯವಾಗಿದೆ ಎಂದು ಯುನಿಸೆಫ್​ ಹೇಳಿದೆ.

ಯುನಿಸೆಫ್​​ನ ಶಿಫಾರಸ್ಸು ಏನು? ಕೊರೊನಾದಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಡಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಯುನಿಸೆಫ್​, ಜಗತ್ತಿನಾದ್ಯಂತ ಕೊರೊನಾದಿಂದ ಶಾಲೆಗಳು ಮುಚ್ಚಲ್ಪಟ್ಟ ಕಾರಣಕ್ಕೆ ಸರಿಸುಮಾರು 616 ಮಿಲಿಯನ್ ಮಕ್ಕಳಿಗೆ ತೊಂದರೆಯಾಗಿದೆ. ಕೊರೊನಾ ಗಂಭೀರತೆಯನ್ನು ಕಡಿಮೆ ಮಾಡಿದರೆ ಶಾಲೆಗಳನ್ನು ಮರು ಆರಂಭ ಮಾಡಬಹುದು ಎಂಬುದು ನಮಗೆ ಗೊತ್ತು. ಹಾಗೇ, ಡಿಜಿಟಲ್​ ಸಂಪರ್ಕ ಕ್ಷೇತ್ರಕ್ಕೆ ಸರ್ಕಾರಗಳು ಹೆಚ್ಚೆಚ್ಚು ಹೂಡಿಕೆ ಮಾಡಿ, ಅಲ್ಲಿ ಅಭಿವೃದ್ಧಿ ಮಾಡುವುದರಿಂದಲೂ ಮಕ್ಕಳು ಶಿಕ್ಷಣ ಪಡೆಯಬಹುದು ಎಂಬ ವಿಚಾರವೂ ನಮಗೆ ಗೊತ್ತು. ಆದರೆ ಅದೆಲ್ಲದರ ಹೊರತಾಗಿ, ಕೊರೊನಾ ಪೂರ್ವದಲ್ಲಿ ಮಕ್ಕಳು ಹೇಗೆ ಶಾಲೆಗೆ ಬಂದು ಕಲಿಯುತ್ತಿದ್ದರೋ, ಹಾಗೇ ಈಗಲೂ ಕೂಡ ಶಾಲೆಗೆ ಆಗಮಿಸಿ ಶಿಕ್ಷಣ ಪಡೆಯುವಂತೆ ಮಾಡಲು, ಸರ್ಕಾರಗಳು ದಿಟ್ಟ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೆನ್ರಿಯೆಟ್ಟಾ ಫೋರ್ ಹೇಳಿದ್ದಾರೆ.

ದೇಶದಲ್ಲಿ ಏನಿದೆ ಪರಿಸ್ಥಿತಿ?  ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಶಾಲೆಗಳನ್ನು ಮುಚ್ಚಲಾಗಿತ್ತು. ಅದರಲ್ಲಿ ತಮಿಳುನಾಡು, ಚಂಡಿಗಢ್​, ಹರ್ಯಾಣ ಸರ್ಕಾರಗಳು, 2022ರ ಫೆಬ್ರವರಿ 1ರಿಂದ ತಾವು ಮತ್ತೆ ಶಾಲೆಗಳನ್ನು ಪ್ರಾರಂಭ ಮಾಡುವುದಾಗಿ ಘೋಷಿಸಿವೆ. ಹಾಗೇ, ಕೊವಿಡ್​ 19 ನಿಯಂತ್ರಣ ಸಂಬಂಧ ಎಲ್ಲ ಶಿಷ್ಟಾಚಾರ, ಮಾರ್ಗಸೂಚಿಗಳನ್ನೂ ಪಾಲಿಸುವುದಾಗಿಯೂ ತಿಳಿಸಿವೆ. ಇನ್ನುಳಿದ ಕೆಲವು ರಾಜ್ಯಗಳು ಈ ಬಗ್ಗೆ ಏನೂ ನಿರ್ಧಾರ ಪ್ರಕಟಿಸಿಲ್ಲ.

ಕರ್ನಾಕದಲ್ಲಿ ಬೆಂಗಳೂರಲ್ಲಿ ಮಾತ್ರ ಶಾಲೆ/ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಆನ್​ಲೈನ್​ ಕ್ಲಾಸ್​ ನಡೆಯುತ್ತಿದೆ. ಈ ಮಧ್ಯೆ, ಶಾಲೆಗಳನ್ನು ಮತ್ತೆ ಆರಂಭ ಮಾಡುವ ಸಂಬಂಧ ಕೇಂದ್ರ ಸರ್ಕಾರವೇ ಶೀಘ್ರದಲ್ಲಿ ಒಂದು ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸದ್ಯ 15-18 ವರ್ಷದವರಿಗೆ ಕೊರೊನಾ ಲಸಿಕೆ ನೀಡಿಕೆ ನಡೆಯುತ್ತಿದ್ದು, ಅದು ಮುಗಿಯುತ್ತಿದ್ದಂತೆ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: NeoCoV: ನಿಯೋ ಕೊವ್​ ಬಗ್ಗೆ ಹೆದರುವ ಅಗತ್ಯ ಇಲ್ಲವೇ ಇಲ್ಲ, ಇದು ಕೊರೊನಾದ ರೂಪಾಂತರಿ ಅಲ್ಲ; ಅಧ್ಯಯನ ತಿಳಿಸಿದೆ ಒಂದು ಗುಡ್​ ನ್ಯೂಸ್ !

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ