ಟೋಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ( Fukushima) ಕರಾವಳಿಯಲ್ಲಿ ಬುಧವಾರ ಸಂಜೆ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ(tsunami) ಎಚ್ಚರಿಕೆ ನೀಡಲಾಗಿದೆ. ಭೂಕಂಪವು ಸಮುದ್ರದಿಂದ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. ಈ ಪ್ರದೇಶವು ಉತ್ತರ ಜಪಾನ್‌ನ ಭಾಗವಾಗಿದೆ. ಇದು 9.0 ತೀವ್ರತೆಯ ಭೂಕಂಪ ಮತ್ತು ಸುನಾಮಿಯಿಂದ ಧ್ವಂಸಗೊಂಡಿತ್ತು. ಅಂದಹಾಗೆ ಪ್ರಾಣಹಾನಿ ಅಥವಾ ಹಾನಿಯ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಭಾಗಗಳಲ್ಲಿ ಒಂದು ಮೀಟರ್ (3-ಅಡಿ) ವರೆಗೆ ಸಮುದ್ರ ಉಲ್ಬಣಗೊಂಡಿದ್ದು ಹವಾಮಾನ ಸಂಸ್ಥೆಯು ಸುನಾಮಿ ಎಚ್ಚರಿಕೆ ನೀಡಿದೆ. ಎನ್ಎಚ್ಕೆ ರಾಷ್ಟ್ರೀಯ ದೂರದರ್ಶನವು ಸುನಾಮಿ ಈಗಾಗಲೇ ಕೆಲವು ಪ್ರದೇಶಗಳನ್ನು ತಲುಪಿರಬಹುದು ಎಂದು ಹೇಳಿದೆ. 2011 ರ ಭೂಕಂಪ ಮತ್ತು ಸುನಾಮಿಯ ನಂತರ ಅನೇಕ ಕರಗುವಿಕೆಗಳನ್ನು ಅನುಭವಿಸಿದ ಫುಕುಶಿಮಾ ಡೈಚಿ ಪರಮಾಣು ಸ್ಥಾವರವನ್ನು ನಿರ್ವಹಿಸುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಹೋಲ್ಡಿಂಗ್ಸ್(TEPCO) , ತಮ್ಮ ಕಾರ್ಮಿಕರು ಯಾವುದೇ ಸಂಭವನೀಯ ಹಾನಿಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದೆ.
ಟೋಕಿಯೊ ಸೇರಿದಂತೆ ಪೂರ್ವ ಜಪಾನ್‌ನ ದೊಡ್ಡ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕಂಪನ ಅನುಭವಿಸಿವೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
3月16日午後11時36分頃、福島県沖を震源とするマグニチュード7.3の地震が発生しました。
現在、この地震による当社設備への影響を確認しております。— 東京電力 (原子力) (@TEPCO_Nuclear) March 16, 2022
ಟೋಕಿಯೊದಲ್ಲಿ 700,000 ಸೇರಿದಂತೆ ಎರಡು ದಶಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಇಲ್ಲದೆ ಉಳಿದಿವೆ ಎಂದು ವಿದ್ಯುತ್ ಪೂರೈಕೆದಾರ ಟೆಪ್ಕೊ ಹೇಳಿದೆ.
ಜಪಾನ್ ಪೆಸಿಫಿಕ್ “ರಿಂಗ್ ಆಫ್ ಫೈರ್” ಮೇಲೆ ಕುಳಿತಿದೆ, ಇದು ಆಗ್ನೇಯ ಏಷ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನದಾದ್ಯಂತ ವ್ಯಾಪಿಸಿರುವ ತೀವ್ರವಾದ ಭೂಕಂಪನ ಚಟುವಟಿಕೆಯ ಪ್ರದೇಶವಾಗಿದೆ.
ದೇಶವು ನಿಯಮಿತವಾಗಿ ಭೂಕಂಪಗಳಿಂದ ಹಾನಿಗೊಳಗಾಗುತ್ತದೆ ಮತ್ತು ಕಟ್ಟಡಗಳು ಬಲವಾದ ಕಂಪನಗಳನ್ನು ತಡೆದುಕೊಳ್ಳಬಲ್ಲವು ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ನಿರ್ಮಾಣ ನಿಯಮಗಳನ್ನು ಹೊಂದಿದೆ. ಆದರೆ ಈಶಾನ್ಯ ಜಪಾನ್‌ನಲ್ಲಿ 2011 ರಲ್ಲಿ ಸಮುದ್ರದೊಳಗಿನ ಭೂಕಂಪವು ಮಾರಣಾಂತಿಕ ಸುನಾಮಿಯನ್ನು ಪ್ರಚೋದಿಸಿತ್ತು. ಈ ಸುನಾಮಿಯಲ್ಲಿ ಸುಮಾರು 18,500 ಮಂದಿ ಸಾವಿಗೀಡಾಗಿದ್ದರು.
ಇದನ್ನೂ ಓದಿ: ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಸಂದೇಶ
Published On - 8:44 pm, Wed, 16 March 22