ಸುಡಾನ್​​ನಲ್ಲಿ 72 ಗಂಟೆಗಳ ಕದನ ವಿರಾಮ; ನಾಗರಿಕರನ್ನು ಸ್ಥಳಾಂತರಿಸಲು ಸುರಕ್ಷಿತ ದಾರಿ ಹುಡುಕುತ್ತಿದೆ ಭಾರತ

|

Updated on: Apr 25, 2023 | 3:01 PM

ಖಾರ್ಟೂಮ್ ಬಳಿ ಇರುವ ಮಿಲಿಟರಿ ವಾಯುನೆಲೆಗಳಿಂದ ವಿಮಾನಗಳನ್ನು ನಿರ್ವಹಿಸುವ ಸಾಧ್ಯತೆಯನ್ನು ಭಾರತವು ನೋಡುತ್ತಿದೆ. ಖಾರ್ಟೂಮ್‌ನಿಂದ ಸುಮಾರು ಒಂದು ಗಂಟೆಯ ದೂರದಲ್ಲಿ ಮಿಲಿಟರಿ ವಾಯುನೆಲೆ ಇದೆ . ಇದು ಪರಿಗಣಿಸಲಾದ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

ಸುಡಾನ್​​ನಲ್ಲಿ 72 ಗಂಟೆಗಳ ಕದನ ವಿರಾಮ; ನಾಗರಿಕರನ್ನು ಸ್ಥಳಾಂತರಿಸಲು ಸುರಕ್ಷಿತ ದಾರಿ ಹುಡುಕುತ್ತಿದೆ ಭಾರತ
ಭಾರತಕ್ಕೆ ಸ್ಥಳಾಂತರವಾಗಲು ಕಾಯುತ್ತಿರುವ ಪ್ರಜೆಗಳು
Follow us on

ದೆಹಲಿ: ಸುಡಾನ್‌ನಿಂದ (Sudan) ಸುಮಾರು 3,000 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ (evacuate) ಪ್ರಯತ್ನಗಳನ್ನು ಭಾರತೀಯ ಅಧಿಕಾರಿಗಳು ಮಂಗಳವಾರ ಆರಂಭಿಸಿದ್ದಾರೆ. ಸೇನಾಪಡೆ ಮತ್ತು ಬಂಡುಕೋರ ಅರೆಸೇನಾ ಪಡೆ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು, ಸುಡಾನ್​​ನಲ್ಲಿ ಸಿಲುಕಿರುವ ನಾಗರಿಕರನ್ನು ಹೊರಕ್ಕೆ ಸಾಗಿಸಲು ಪ್ರಮುಖ ವೇದಿಕೆಯಾಗಿ ಸೌದಿ ಅರೇಬಿಯಾ ಹೊರಹೊಮ್ಮಿದೆ. ಕಳೆದ ಕೆಲವು ದಿನಗಳಿಂದ ಸೌದಿ ಅರೇಬಿಯಾ (Saudi Arabia) ಮತ್ತು ಫ್ರಾನ್ಸ್‌ನಿಂದ ಕೆಲವೇ ಕೆಲವು ಭಾರತೀಯ ಪ್ರಜೆಗಳನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ನೂರಾರು ಜನರು ದೇಶದ ವಿವಿಧ ಭಾಗಗಳಲ್ಲಿ, ಮುಖ್ಯವಾಗಿ ರಾಜಧಾನಿ ಖಾರ್ಟೂಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಸುಮಾರು 500 ಭಾರತೀಯರು ಪೋರ್ಟ್ ಸುಡಾನ್‌ನಲ್ಲಿ ಜಮಾಯಿಸಿದ್ದಾರೆ, ಇದು ಖಾರ್ಟೂಮ್‌ನಿಂದ 800 ಕಿ.ಮೀ ದೂರದಲ್ಲಿರುವ ದೇಶದ ಪ್ರಮುಖ ಬಂದರು ಆಗಿದೆ.

ಸುಡಾನ್ ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಪ್ರತಿಸ್ಪರ್ಧಿ, ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ಮುಖ್ಯಸ್ಥರಾಗಿರುವ ಜನರಲ್ ಮೊಹಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಪಡೆಗಳು ಏಪ್ರಿಲ್ 24 ಮಧ್ಯರಾತ್ರಿಯಿಂದ 72 ಗಂಟೆಗಳ ರಾಷ್ಟ್ರವ್ಯಾಪಿ ಕದನ ವಿರಾಮವನ್ನು ಜಾರಿಗೆ ತರಲು ಒಪ್ಪಿಕೊಂಡಿವೆ. ಕದನವಿರಾಮ ಜಾರಿಯಲ್ಲಿರುವಾಗ, ಸುಡಾನ್‌ನಲ್ಲಿ ಸಿಲುಕಿರುವ ಪ್ರಜೆಗಳನ್ನು ಹೊರತರಲು ಉತ್ತಮ ಆಯ್ಕೆಗಳನ್ನು ಕಂಡುಹಿಡಿಯಲು ಭಾರತೀಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಭಾರತೀಯ ವಾಯುಪಡೆಯ (IAF) ಎರಡು C-130J ಸಾರಿಗೆ ವಿಮಾನಗಳು ಭಾನುವಾರ ಸೌದಿ ಅರೇಬಿಯಾದ ಜೆಡ್ಡಾದಲ್ಲಿದೆ. ಇದು ಖಾರ್ಟೂಮ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ ಹಾರಲು ಸಾಧ್ಯವಾಗುತ್ತದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಸಂಘರ್ಷದಿಂದಾಗಿ ಖಾರ್ಟೂಮ್ ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆ.ಇದಲ್ಲದೆ, ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗಾಗಿ ಏರ್ ಟ್ರಾಫಿಕ್ ಕಂಟ್ರೋಲ್ ಸೌಲಭ್ಯಗಳು ಬೇಕಾಗುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಖಾರ್ಟೂಮ್ ಬಳಿ ಇರುವ ಮಿಲಿಟರಿ ವಾಯುನೆಲೆಗಳಿಂದ ವಿಮಾನಗಳನ್ನು ನಿರ್ವಹಿಸುವ ಸಾಧ್ಯತೆಯನ್ನು ಭಾರತವು ನೋಡುತ್ತಿದೆ. ಖಾರ್ಟೂಮ್‌ನಿಂದ ಸುಮಾರು ಒಂದು ಗಂಟೆಯ ದೂರದಲ್ಲಿ ಮಿಲಿಟರಿ ವಾಯುನೆಲೆ ಇದೆ . ಇದು ಪರಿಗಣಿಸಲಾದ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣದ ಬಳಿ ಸಂಘರ್ಷ ಪ್ರದೇಶವಾಗಿರುವುದುರಿಂದ ಸುರಕ್ಷತೆಯ ದೃಷ್ಟಿಯಿಂದ ಖಾರ್ಟೂಮ್‌ನಿಂದ ತನ್ನ ರಾಜತಾಂತ್ರಿಕರು ಮತ್ತು ನಾಗರಿಕರನ್ನು ಸ್ಥಳಾಂತರಿಸಲು ಯುಎಸ್ ಹೆವಿ ಲಿಫ್ಟ್ ಹೆಲಿಕಾಪ್ಟರ್‌ಗಳನ್ನು ಬಳಸಿದೆ.

ಭಾರತೀಯ ನೌಕಾಪಡೆಯ ಗಸ್ತು ನೌಕೆ ಐಎನ್ಎಸ್ ಸುಮೇಧಾ ಈಗಾಗಲೇ ಪೋರ್ಟ್ ಸುಡಾನ್ ತಲುಪಿದೆ. ಭಾರತೀಯ ಪ್ರಜೆಗಳನ್ನು ಕೆಂಪು ಸಮುದ್ರದ ಮೂಲಕ ಸೌದಿ ಅರೇಬಿಯಾಕ್ಕೆ ಸಾಗಿಸಲು ಬಳಸಬಹುದು. ಪೋರ್ಟ್ ಸುಡಾನ್‌ನಲ್ಲಿ ಒಟ್ಟುಗೂಡುವ ಭಾರತೀಯರನ್ನು ಜೆಡ್ಡಾಕ್ಕೆ ಕರೆದೊಯ್ಯಬಹುದು. ಅಲ್ಲಿಂದ ಅವರನ್ನು ಭಾರತಕ್ಕೆ ವಿಮಾನಗಳಲ್ಲಿ ಕಳುಹಿಸಬಹುದು ಎಂದು ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಖ್ಯಾತ ಲೇಖಕ, ಅಂಕಣಕಾರ ತಾರೆಕ್ ಫತಾಹ್ ವಿಧಿವಶ

ಏಪ್ರಿಲ್ 14 ರಂದು ಸುಡಾನ್‌ನಲ್ಲಿ ನಡೆದ ಹೋರಾಟದ ನಂತರ ಭಾರತದ ಕಡೆಯಿಂದ ನಿಕಟ ಸಂಪರ್ಕವನ್ನು ಸ್ಥಾಪಿಸಿದ ಸೌದಿ ಅರೇಬಿಯಾ, ಸ್ಥಳಾಂತರಿಸುವ ಪ್ರಯತ್ನಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಸುಡಾನ್‌ನ ಸಾಮೀಪ್ಯವನ್ನು ಗಮನಿಸಿದರೆ, ಯುದ್ಧ ಪೀಡಿತ ದೇಶದಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ವಿಮಾನ ಅಥವಾ ಸಮುದ್ರದ ಮೂಲಕ ಸೌದಿ ಅರೇಬಿಯಾಕ್ಕೆ ಕರೆದೊಯ್ಯಬಹುದು.
ಯುಎನ್ ಏಜೆನ್ಸಿಗಳ ಪ್ರಕಾರ ಇದುವರೆಗೆ ಹೋರಾಟದಲ್ಲಿ 420 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ . ಇದರಲ್ಲಿ 3,700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸುಡಾನ್ ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ ಹತ್ತಾರು ಜನರು ದೇಶವನ್ನು ತೊರೆದಿದ್ದಾರೆ, ಅವರಲ್ಲಿ ಹಲವರು ಈಜಿಪ್ಟ್, ಚಾಡ್ ಮತ್ತು ದಕ್ಷಿಣ ಸುಡಾನ್‌ಗೆ ಹೋಗುತ್ತಿದ್ದಾರೆ.

ಸೂಡಾನ್‌ನಲ್ಲಿ ಆಹಾರ, ನೀರು, ಔಷಧಗಳು ಮತ್ತು ಇಂಧನದ ತೀವ್ರ ಕೊರತೆಯು ಈ ಸರಕುಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗುತ್ತದೆ. ಖಾರ್ಟೋಮ್ ನ ಅನೇಕ ಪ್ರದೇಶಗಳು ವಿದ್ಯುತ್ ಇಲ್ಲದೆ ಮತ್ತು ಇಂಟರ್ನೆಟ್ ಸಂಪರ್ಕ ಸೇರಿದಂತೆ ಸೀಮಿತ ಸಂವಹನಗಳನ್ನು ಹೊಂದಿವೆ. ಮಂಗಳವಾರದಂದು ಕದನ ವಿರಾಮ ಜಾರಿಯಾಗಿದ್ದರೂ, ಪಶ್ಚಿಮ ಡಾರ್ಫೂರ್‌ನಲ್ಲಿ ಸಂಘರ್ಷ ನಡೆದಿರುವುದಾಗಿ ವರದಿಯಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Tue, 25 April 23