ಪಾಕಿಸ್ತಾನದ ಖ್ಯಾತ ಲೇಖಕ, ಅಂಕಣಕಾರ ತಾರೆಕ್ ಫತಾಹ್ ವಿಧಿವಶ
ನವೆಂಬರ್ 20, 1949ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ತಾರೆಕ್ ಫತಾಹ್ 1980ರ ಆರಂಭದಲ್ಲಿ ದಶಕದಲ್ಲಿ ಕೆನಡಾಗೆ ವಲಸೆ ಹೋಗಿದ್ದರು. ಅಲ್ಲಿ ಅವರು ರಾಜಕೀಯ ಕಾರ್ಯಕರ್ತ, ಪತ್ರಕರ್ತ, ಟಿವಿ ನಿರೂಪಕರಾಗಿ ಕೆಲಸ ಮಾಡಿದ್ದರು
ಪಾಕಿಸ್ತಾನ (Pakistan) ಮೂಲದ ಕೆನಡಾದ ಅಂಕಣಕಾರ ಮತ್ತು ಪ್ರಸಿದ್ಧ ಟಿವಿ ನಿರೂಪಕ ತಾರೆಕ್ ಫತಾಹ್ (73) (Tarek Fatah)ಸೋಮವಾರ(ಏಪ್ರಿಲ್ 24) ನಿಧನರಾದರು. ಕೆನಡಾದ (Canada) ಲೇಖಕರಾದ ಫತಾಹ್ ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರ ಪುತ್ರಿ ನತಾಶಾ ಫತಾಹ್ (Natasha Fatah) ಅವರು ಟ್ವಿಟರ್ ಪೋಸ್ಟ್‌ನಲ್ಲಿ ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಪಂಜಾಬ್‌ನ ಸಿಂಹ. ಹಿಂದುಸ್ತಾನದ ಮಗ. ಕೆನಡಾದ ಪ್ರೇಮಿ. ಸತ್ಯದ ಮಾತುಗಾರ. ನ್ಯಾಯಕ್ಕಾಗಿ ಹೋರಾಟಗಾರ. ದೀನದಲಿತರು, ಹಿಂದುಳಿದವರು ಮತ್ತು ತುಳಿತಕ್ಕೊಳಗಾದವರ ದನಿ ತಾರೆಕ್ ಫತಾಹ್ ನಿಧನರಾಗಿದ್ದಾರೆ. ಅವರ ಕ್ರಾಂತಿಯು ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಎಲ್ಲರೊಂದಿಗೆ ಮುಂದುವರಿಯುತ್ತದೆ. ನೀವು ನಮ್ಮೊಂದಿಗೆ ಸೇರುತ್ತೀರಾ?’ ಎಂದು ನತಾಶಾ ಟ್ವೀಟ್ ಮಾಡಿದ್ದಾರೆ.
ನವೆಂಬರ್ 20, 1949ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ತಾರೆಕ್ ಫತಾಹ್ 1980ರ ಆರಂಭದಲ್ಲಿ ದಶಕದಲ್ಲಿ ಕೆನಡಾಗೆ ವಲಸೆ ಹೋಗಿದ್ದರು. ಅಲ್ಲಿ ಅವರು ರಾಜಕೀಯ ಕಾರ್ಯಕರ್ತ, ಪತ್ರಕರ್ತ, ಟಿವಿ ನಿರೂಪಕರಾಗಿ ಕೆಲಸ ಮಾಡಿದ್ದರು. ಅವರು ‘ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್’ ಮತ್ತು ‘The Jew is Not My Enemy: Unveiling the Myths that Fuel Muslim Anti-Smitism ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
Lion of Punjab. Son of Hindustan. Lover of Canada. Speaker of truth. Fighter for justice. Voice of the down-trodden, underdogs, and the oppressed.@TarekFatah has passed the baton on… his revolution will continue with all who knew and loved him.
Will you join us?
1949-2023 pic.twitter.com/j0wIi7cOBF
— Natasha Fatah (@NatashaFatah) April 24, 2023
ಫತಾಹ್ ಅವರು ಇಸ್ಲಾಂ ಧರ್ಮದ ಬಗ್ಗೆ ಪ್ರಗತಿಪರ ದೃಷ್ಟಿಕೋನಗಳು ಮತ್ತು ಪಾಕಿಸ್ತಾನದ ಬಗ್ಗೆ ಟೀಕಿಸುವ ನಿಲುವುಗಳಿಗೆ ಹೆಸರುವಾಸಿಯಾಗಿದ್ದರು. ಅವರು ತಮ್ಮನ್ನು ಪಾಕಿಸ್ತಾನದಲ್ಲಿ ಜನಿಸಿದ ಭಾರತೀಯ ಮತ್ತು ಇಸ್ಲಾಂನಲ್ಲಿ ಜನಿಸಿದ ಪಂಜಾಬಿ ಎಂದು ಹೇಳುತ್ತಿದ್ದರು.
ಅವರ ನಿಧನದಕ್ಕೆ ಸಾಮಾಜಿಕ ತಾಣದಲ್ಲಿ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ. ಅರಗಿಸಿಕೊಳ್ಳಲು ತುಂಬಾ ಕಷ್ಟ, ತಾರೆಕ್ ಫತಾಹ್ ಹೋದರು. ನನ್ನ ಸ್ನೇಹಿತ, ಮಾರ್ಗದರ್ಶಕ ಮತ್ತು ಕುಟುಂಬ. ಅವರ ಆತ್ಮಕ್ಕೆ ಶಾಂತಿ ಸಿಗಲಿ ನಾವು ಮತ್ತೆ ಭೇಟಿಯಾಗುತ್ತೇವೆ! ಓಂ ಶಾಂತಿ ಎಂದಿದ್ದಾರೆ.
There was one and only @TarekFatah – daring, funny, knowledgable, sharp thinker, great orator and a fearless fighter.
Tarek, my brother, it was a delight to have you as a close friend.
Will you be able to rest in peace? Om Shanti. pic.twitter.com/X9VcRKtyK4
— Vivek Ranjan Agnihotri (@vivekagnihotri) April 24, 2023
ಒಬ್ಬನೇ ಒಬ್ಬ ತಾರೆಕ್ ಫತಾಹ್ ಇದ್ದರು. ಧೈರ್ಯಶಾಲಿ, ತಮಾಷೆ, ತಿಳುವಳಿಕೆಯುಳ್ಳ, ತೀಕ್ಷ್ಣವಾದ ಚಿಂತಕ, ಶ್ರೇಷ್ಠ ವಾಗ್ಮಿ ಮತ್ತು ನಿರ್ಭೀತ ಹೋರಾಟಗಾರ. ತಾರೆಕ್, ನನ್ನ ಸಹೋದರ, ನೀವು ಆಪ್ತ ಸ್ನೇಹಿತರಾಗಿರುವುದು ಸಂತೋಷವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಸಂತಾಪ ಸೂಚಿಸಿದ ನಟ ರಣವೀರ್ ಶೋರೆ, ಇದನ್ನು ತಿಳಿದು ತುಂಬಾ ದುಃಖವಾಯಿತು. ಅವರು ನನಗೆ ತಿಳಿದಿರುವ ಅತ್ಯಂತ ಧೈರ್ಯಶಾಲಿ ಮತ್ತು ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು. ಅವರ ಉದಾತ್ತ ಆತ್ಮವು ಸ್ವರ್ಗದಲ್ಲಿ ಸರ್ವಶಕ್ತನೊಂದಿಗೆ ಸೇರಲಿ. ಅವನು ಈ ಜಗತ್ತಿನಲ್ಲಿ ತನ್ನ ಪಾಲಿನ ಒಳಿತಿಗಿಂತ ಹೆಚ್ಚಿನದನ್ನು ಮಾಡಿದನು. ಇಡೀ ಕುಟುಂಬಕ್ಕೆ ಮತ್ತು ಪ್ರಪಂಚದಾದ್ಯಂತದ ಅವರ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ