AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australia: ಮಾದಕ ದ್ರವ್ಯ ನೀಡಿ ಐವರು ಕೊರಿಯನ್ ಮಹಿಳೆಯರ ಮೇಲೆ ಭಾರತೀಯನಿಂದ ಅತ್ಯಾಚಾರ ಪ್ರಕರಣ: ತಪ್ಪಿತಸ್ಥ ಎಂದು ಕೋರ್ಟ್​ ತೀರ್ಪು

ಮಾದಕ ದ್ರವ್ಯ ನೀಡಿ ಐವರು ಕೊರಿಯನ್ ಮಹಿಳೆಯರ ಮೇಲೆ ಅತ್ಯಾಚಾರ(Rape) ವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ವ್ಯಕ್ತಿ ಬಾಲೇಶ್ ಧನ್​ಕರ್ ತಪ್ಪಿತಸ್ಥ ಎಂದು ಕೋರ್ಟ್​ ತೀರ್ಪು ನೀಡಿದೆ.

Australia: ಮಾದಕ ದ್ರವ್ಯ ನೀಡಿ ಐವರು ಕೊರಿಯನ್ ಮಹಿಳೆಯರ ಮೇಲೆ ಭಾರತೀಯನಿಂದ ಅತ್ಯಾಚಾರ ಪ್ರಕರಣ: ತಪ್ಪಿತಸ್ಥ ಎಂದು ಕೋರ್ಟ್​ ತೀರ್ಪು
ಬಾಲೇಶ್​ ಧನ್​ಕರ್Image Credit source: NDTV
ನಯನಾ ರಾಜೀವ್
|

Updated on: Apr 25, 2023 | 9:02 AM

Share

ಮಾದಕ ದ್ರವ್ಯ ನೀಡಿ ಐವರು ಕೊರಿಯನ್ ಮಹಿಳೆಯರ ಮೇಲೆ ಅತ್ಯಾಚಾರ(Rape) ವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ವ್ಯಕ್ತಿ ಬಾಲೇಶ್ ಧನ್​ಕರ್ ತಪ್ಪಿತಸ್ಥ ಎಂದು ಕೋರ್ಟ್​ ತೀರ್ಪು ನೀಡಿದೆ. ಸಿಡ್ನಿಯಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಆಘಾತಕಾರಿ ಕೆಲವು ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಧನ್​ಕರ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. 2018ರಲ್ಲಿ ಅಪಾರ್ಟ್​ಮೆಂಟ್​ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಡಜನ್​ಗಟ್ಟಲೆ ವಿಡಿಯೋಗಳನ್ನು ಸಂಗ್ರಹಿಸಿದ್ದರು.

ಡೇಟಿಂಗ್ ವೆಬ್​ಸೈಟ್​ನಲ್ಲಿ ಭೇಟಿಯಾಗಿ ಅವರನ್ನು ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡು ಮಾದಕ ದ್ರವ್ಯ ನೀಡಿ ಅಥವಾ ಮತ್ತು ಬರುವ ಔಷಧ ನೀಡಿ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಕೊರಿಯನ್​ ಮಹಿಳೆಯರಿಗೆ ಉದ್ಯೋಗ ಕೊಡಿಸುವುದಾಗಿ ಜಾಹೀರಾತು ನೀಡಿ ಆಮಿಷವೊಡ್ಡಿ ಅವರನ್ನು ಕರೆಸಿಕೊಂಡು ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ.

ಧಂಖರ್ ತನ್ನ ಹಾಸಿಗೆಯ ಪಕ್ಕದಲ್ಲಿ ಅಲಾರ್ಮ್​ ಗಡಿಯಾರದಲ್ಲಿ ಮತ್ತು ತನ್ನ ಫೋನ್​ನಲ್ಲಿ ಯಾರಿಗೂ ತಿಳಿಯದಂತೆ ಕ್ಯಾಮರಾ ಆನ್​ ಮಾಡಿಟ್ಟು ರೆಕಾರ್ಡ್​ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ: ಹಾಸನ: 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ನಾಲ್ವರು ಅರೆಸ್ಟ್

ಕೆಲವು ಮಹಿಳೆಯರು ಪ್ರಜ್ಞಾಹೀನರಾಗಿದ್ದರೆ, ಇನ್ನೂ ಕೆಲವೊಬ್ಬರಿಗೆ ತಮಗೆ ಏನಾಗಿದೆ ಎನ್ನುವ ಪರಿವೇ ಇದ್ದಂತಿರಲಿಲ್ಲ. ವೀಡಿಯೊಗಳನ್ನು ಫೋಲ್ಡರ್‌ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದಕ್ಕೂ ಕೊರಿಯನ್ ಮಹಿಳೆಯ ಹೆಸರಿನೊಂದಿಗೆ ಲೇಬಲ್ ಅಂಟಿಸಲಾಗಿದೆ. 95 ನಿಮಿಷಗಳ ಹಲವು ವಿಡಿಯೋಗಳು ಪತ್ತೆಯಾಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ