ನ್ಯೂಯಾರ್ಕ್​​ನ ಮ್ಯಾನ್​ಹಟನ್​​ನಲ್ಲಿದ್ದ ಗಾಂಧಿ ಪ್ರತಿಮೆ ಧ್ವಂಸ; ಇದೊಂದು ತುಚ್ಛ ಕೃತ್ಯವೆಂದ ಭಾರತೀಯ ರಾಯಭಾರಿ ಕಚೇರಿ

| Updated By: Lakshmi Hegde

Updated on: Feb 06, 2022 | 1:25 PM

ಕಳೆದ ತಿಂಗಳು ಯುಎಸ್​​ನ ಕ್ಯಾಲಿಫೋರ್ನಿಯಾದ ಡೇವಿಸ್​ ನಗರದ ಸೆಂಟ್ರಲ್​ ಪಾರ್ಕ್​ನಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ಕೂಡ ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಕಾಲಿನ ಭಾಗ ಮತ್ತು ಮುಖವನ್ನು ಧ್ವಂಸ ಮಾಡಿದ್ದರು. 

ನ್ಯೂಯಾರ್ಕ್​​ನ ಮ್ಯಾನ್​ಹಟನ್​​ನಲ್ಲಿದ್ದ ಗಾಂಧಿ ಪ್ರತಿಮೆ ಧ್ವಂಸ; ಇದೊಂದು ತುಚ್ಛ ಕೃತ್ಯವೆಂದ ಭಾರತೀಯ ರಾಯಭಾರಿ ಕಚೇರಿ
ಗಾಂಧಿ ಪ್ರತಿಮೆ
Follow us on

ನ್ಯೂಯಾರ್ಕ್ ಸಿಟಿಯ ಮ್ಯಾನ್​ಹಟನ್​ ಬಳಿಯ ಯೂನಿಯನ್​ ಸ್ಕ್ವಾರ್​​ನಲ್ಲಿದ್ದ 8 ಅಡಿ ಎತ್ತರದ  ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಇದನ್ನು ಯುಎಸ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದ್ದು, ತುಚ್ಛ ಕಾರ್ಯ ಎಂದು ಹೇಳಿದೆ. ಹಾಗೇ, ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸದಿಂದಾಗಿ ಭಾರತೀಯರು ಮತ್ತು ಅಮೆರಿಕದಲ್ಲಿರುವ ಭಾರತೀಯರಿಗೆ ನೋವಾಗಿದೆ ಮತ್ತು ಇದೊಂದು ಶಾಕಿಂಗ್​ ಘಟನೆ ಎಂದು ಹೇಳಿದೆ. 

ಶನಿವಾರ ಬೆಳಗ್ಗೆ (ಯುಎಸ್​ ಕಾಲಮಾನದ ಪ್ರಕಾರ) ಈ ಘಟನೆ ನಡೆದಿದೆ. ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿದ್ದು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ನ್ಯೂಯಾರ್ಕ್​​ನಲ್ಲಿರುವ ಭಾರತದ ಕಾನ್ಸುಲೇಟ್​ ಜನರಲ್​ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಈ ಹೇಯಕೃತ್ಯದ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದೂ ಹೇಳಿದೆ. ಅಂದಹಾಗೇ, ಈ 8 ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು, ಗಾಂಧಿ ಸ್ಮಾರಕ ಅಂತರಾಷ್ಟ್ರೀಯ ಪ್ರತಿಷ್ಠಾನ 1986ರ ಅಕ್ಟೋಬರ್​ 2ರಂದು, ಮಹಾತ್ಮ ಗಾಂಧಿಯವರ 117ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ  ನೀಡಿತ್ತು. ಅಂದಿನ ಸಮಾರಂಭದಲ್ಲಿ ಅಮೆರಿಕದ ನಾಗರಿಕ ಹಕ್ಕುಗಳ ಪರ ಹೋರಾಟಗಾರ ಬೇಯಾರ್ಡ್ ರಸ್ಟಿನ್ ಭಾಷಣವನ್ನೂ ಮಾಡಿದ್ದರು.

ಕಳೆದ ತಿಂಗಳು ಯುಎಸ್​​ನ ಕ್ಯಾಲಿಫೋರ್ನಿಯಾದ ಡೇವಿಸ್​ ನಗರದ ಸೆಂಟ್ರಲ್​ ಪಾರ್ಕ್​ನಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ಕೂಡ ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಕಾಲಿನ ಭಾಗ ಮತ್ತು ಮುಖವನ್ನು ಧ್ವಂಸ ಮಾಡಿದ್ದರು.  ಅದು ಆರು ಅಡಿ ಎತ್ತರದ, 294 ಕೆಜಿ ತೂಕದ ಕಂಚಿನ ಪ್ರತಿಮೆಯಾಗಿತ್ತು.  ಈ ಪ್ರತಿಮೆಯನ್ನು ಭಾರತ ಸರ್ಕಾರ ಡೇವಿಸ್​ ನಗರಕ್ಕೆ ನೀಡಿತ್ತು. ಇದನ್ನು ಸ್ಥಾಪಿಸುವಾಗ ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಅದೆಲ್ಲದರ ಮಧ್ಯೆಯೂ ನಗರ ಆಡಳಿತ ಯಶಸ್ವಿಯಾಗಿ ಗಾಂಧಿ ಪ್ರತಿಮೆ ಸ್ಥಾಪನೆ ಮಾಡಿತ್ತು.

ಇದನ್ನೂ ಓದಿ:  ಮಕ್ಕಳ ಅತಿಯಾದ ಮೊಬೈಲ್​ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ

Published On - 1:24 pm, Sun, 6 February 22