AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TIME’s Most Influential People 2024: ಜಾಗತಿಕ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 8 ಮಂದಿ ಭಾರತೀಯರು

ಭಾರತ ಎಲ್ಲದರಲ್ಲೂ ಮುಂದುವರಿಯುತ್ತಿದೆ. ಅದರಲ್ಲೂ ಆರ್ಥಿಕ, ಸಿನಿಮಾ, ತಂತ್ರಜ್ಞಾನ ಇನ್ನು ಅನೇಕ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಇದೀಗ ಟೈಮ್ ಮ್ಯಾಗಜೀನ್‌ನ 2024 ಜಾಗತಿಕ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಮೂಲದ ಎಂಟು ಜನರನ್ನು ಗುರುತಿಸಿದೆ. ಅವರು ಯಾರು ಇಲ್ಲಿದೆ ನೋಡಿ

TIME's Most Influential People 2024: ಜಾಗತಿಕ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 8 ಮಂದಿ ಭಾರತೀಯರು
most influential people
Follow us
ಅಕ್ಷಯ್​ ಪಲ್ಲಮಜಲು​​
|

Updated on: Apr 18, 2024 | 3:03 PM

ಜಗತ್ತಿನ ಅತ್ಯಂತ ನೂರು ಪ್ರಭಾವಶಾಲಿ ವ್ಯಕ್ತಿಗಳ (Most Influential People) ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಭಾರತದ ಎಂಟು ಜನರ ಹೆಸರು ಕೂಡ ಇದೆ. ಟೈಮ್ ಮ್ಯಾಗಜೀನ್‌ನ 2024 100 ಜಾಗತಿಕ ಪ್ರಭಾವಿ ವ್ಯಕ್ತಿಗಳಲ್ಲಿ ಭಾರತದ ಎಂಟು ಜನರನ್ನು ಗುರುತಿಸಿದೆ. ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿದಂತೆ 8 ಜನ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕೆಲಸದ ಮೂಲಕ ಪ್ರಭಾವ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ.  ಕಲಾವಿದರು, ಐಕಾನ್‌ಗಳು, ಚಲನಚಿತ್ರ ತಾರೆಯರು, ಕ್ರೀಡಾಪಟುಗಳು, ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಒಳಗೊಂಡಿದೆ.

ಟೈಮ್ ಮ್ಯಾಗಜೀನ್‌ 2024ರ ಇಪ್ಪತ್ತೊಂದನೇ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ ಬೇರೆ ಬೇರೆ ದೇಶಗಳ 100 ವ್ಯಕ್ತಿಗಳನ್ನು ಈ ಪ್ರಭಾವಶಾಲಿ ಪಟ್ಟಿಗೆ ಸೇರಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವಿ ವ್ಯಕ್ತಿಗಳು

ಆಲಿಯಾ ಭಟ್:

ಟೈಮ್ ಮ್ಯಾಗಜೀನ್​ನಲ್ಲಿ ಬ್ರಿಟಿಷ್ ಚಲನಚಿತ್ರ ನಿರ್ದೇಶಕ ಟಾಮ್ ಹಾರ್ಪರ್ ಆಲಿಯಾ ಭಟ್ ಅವರನ್ನು “ಅಸಾಧಾರಣ ಪ್ರತಿಭೆ” ಎಂದು ಬಣ್ಣಿಸಿದ್ದಾರೆ. ಬ್ರಿಟಿಷ್ ಪೌರತ್ವವನ್ನು ಹೊಂದಿರುವ ಆಲಿಯಾ ಭಾರತದಲ್ಲಿ ನೆಲೆಸಿದ್ದಾರೆ ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ, ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಗುಸ್ಸಿಗೆ ಬ್ರಾಂಡ್ ಅಂಬಾಸಿಡರ್ ಹಾಗೂ ನೆಟ್‌ಫಿಕ್ಸ್‌ನ “ಹಾರ್ಟ್ ಆಫ್ ಸ್ಟೋನ್​​​​ ಮೂಲಕ ಅಂತರರಾಷ್ಟ್ರೀಯ ಚಿತ್ರೋದ್ಯಮಕ್ಕೂ ಬಂದಿದ್ದಾರೆ.

ದೇವ್ ಪಟೇಲ್

ಭಾರತೀಯ ಮೂಲದ ಬ್ರಿಟಿಷ್ ನಟ, ಇವರು ತಂದೆ -ತಾಯಿ ಮೂಲತ ಗುಜರಾತಿ ಹಿಂದೂಗಳು, ದೇವ್ ಪಟೇಲ್ ಅವರು “ಸ್ಲಮ್‌ಡಾಗ್ ಮಿಲಿಯನೇರ್” ಮೂಲಕ ಸಿನಿಮಾಕ್ಕೆ ಚೊಚ್ಚಲ ಪ್ರವೇಶ ಮಾಡಿದರು, ಇದು ಅವರನ್ನು 2008 ರಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆಯುವಂತೆ ಮಾಡಿತ್ತು. ಹಾಗೂ “ಮಂಕಿ ಮ್ಯಾನ್” ಸಿನಿಮಾದ ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು.

ಸಾಕ್ಷಿ ಮಲಿಕ್

ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮತ್ತು ಏಕೈಕ ಮಹಿಳಾ ಕುಸ್ತಿಪಟು, ಸಾಕ್ಷಿ ಮಲಿಕ್ ಕಳೆದ ವರ್ಷ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು. ಈ ಹೋರಾಟವು ಇನ್ನು ಮುಂದೆ ಭಾರತದ ಮಹಿಳಾ ಕುಸ್ತಿಪಟುಗಳಿಗೆ ಮಾತ್ರ ಅಲ್ಲ, ಇದು ಭಾರತದ ಹೆಣ್ಣುಮಕ್ಕಳಿಗಾಗಿ ಎಂದು ಹೇಳಿದರು.

ಸತ್ಯ ನಾಡೆಲ್ಲಾ

ಮೈಕ್ರೋಸಾಫ್ಟ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಮೂರನೇ ಬಾರಿಗೆ ಟೈಮ್‌ನ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. OpenAI ನಲ್ಲಿ Microsoft ನ ಹೂಡಿಕೆಗಳು ಮತ್ತು Mistral AI ಜೊತೆಗಿನ ಪಾಲುದಾರಿಕೆಯೊಂದಿಗೆ, ಬೆಳೆಯುತ್ತಿರುವ AI ಆಂದೋಲನದಲ್ಲಿ ನಾಡೆಲ್ಲಾ ಮುಂಚೂಣಿಯಲ್ಲಿದ್ದಾರೆ .ಅವರು ಹೈದರಾಬಾದ್‌ನಲ್ಲಿ ಜನಿಸಿದರು. ಯುನೈಟೆಡ್ ಸ್ಟೇಟ್ಸ್‌ಗೆ ತೆರಳುವ ಮೊದಲು ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದರು.

ಇದನ್ನೂ ಓದಿ: ಭಾರತಕ್ಕೆ ರಾಜತಾಂತ್ರಿಕ ಜಯ: ಭಾರತೀಯರನ್ನು ಬಂಧಿಸಿಲ್ಲ, ಯಾವಾಗಬೇಕಾದರೂ ಭಾರತಕ್ಕೆ ಹೋಗಬಹುದು

ಅಜಯ್ ಬಂಗಾ

ಭಾರತ ಮೂಲದ ಅಜಯ್ ಬಂಗಾ ಇಂದು ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಗ್ಗೆ ಟೈಮ್ ಮ್ಯಾಗಜೀನ್‌ ಬರೆಯಲಾಗಿದೆ. US ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಬಂಗಾ ಅವರ ಕೌಶಲ್ಯ ಮತ್ತು ಉತ್ಸಾಹ ನಮಗೆಲ್ಲ ಮಾದರಿ. ಬಂಗಾ ಅವರು ಪುಣೆಯಲ್ಲಿ ಜನಿಸಿದ್ದು, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಜಿಗರ್ ಷಾ

ಡೈರೆಕ್ಟರ್, ಜಿಗರ್ ಷಾ ಜಗತ್ತು ಹಿಂದೆಂದೂ ನೋಡದ ಅತಿದೊಡ್ಡ ಆರ್ಥಿಕ-ಅಭಿವೃದ್ಧಿ ಕಾರ್ಯಕ್ರಮವನ್ನು ನೀಡಿದರು.

ಅಸ್ಮಾ ಖಾನ್

ಬ್ರಿಟಿಷ್ ರೆಸ್ಟೋರೆಂಟ್ ಮತ್ತು ಅಡುಗೆ ಪುಸ್ತಕ ಲೇಖಕಿಯಾಗಿರುವ ಅಸ್ಮಾ ಖಾನ್ ಅವರು ಮಹಿಳೆಯರ ಮೆಚ್ಚಿನ ವ್ಯಕ್ತಿ, ಡಾರ್ಜಿಲಿಂಗ್ ಎಕ್ಸ್‌ಪ್ರೆಸ್ ಎಂಬ ಮೆಚ್ಚುಗೆ ಪಡೆದ ಲಂಡನ್ ರೆಸ್ಟೋರೆಂಟ್‌ನ ಹಿಂದಿನ ಶಕ್ತಿ ಕೂಡ ಹೌದು.

ಪ್ರಿಯಂವದಾ ನಟರಾಜನ್

ಪ್ರಿಯಂವದಾ ನಟರಾಜನ್ ಅವರು ಯೇಲ್ ವಿಶ್ವವಿದ್ಯಾನಿಲಯದಲ್ಲಿ ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗಗಳಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ಮ್ಯಾಪಿಂಗ್ ಮಾಡುವ ಕೆಲಸದಲ್ಲೂ ಹೆಸರು ಪಡೆದಿದ್ದಾರೆ. ನಟರಾಜನ್ ತಮಿಳುನಾಡಿನಲ್ಲಿ ಜನಿಸಿದ್ದು, ತಮ್ಮ ಶಿಕ್ಷಣವನ್ನು ಆರ್ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್​​ನಲ್ಲಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ