AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಐಕ್ಯೂವನ್ನೂ ಮೀರಿಸಿದ ಬಾಲಕಿ ಜಗತ್ತನ್ನೇ ನಿಬ್ಬೆರಗುಗೊಳಿಸಿದಳು!

ಸದ್ಯ ತನ್ನ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಾರಾ ಪರ್ವೇಜ್, ವಿಶೇಷ ಚೇತನ ಮಕ್ಕಳ ಭಾವನೆಗಳನ್ನು ಗುರುತಿಸುವ ಬ್ರೇಸ್​ಲೇಟ್​ನ್ನು ಅಭಿವೃದ್ಧಿಪಡಿಸುತ್ತಿದ್ದಾಳೆ.

ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಐಕ್ಯೂವನ್ನೂ ಮೀರಿಸಿದ ಬಾಲಕಿ ಜಗತ್ತನ್ನೇ ನಿಬ್ಬೆರಗುಗೊಳಿಸಿದಳು!
ಅಧಾರಾ ಪರೇಜ್
TV9 Web
| Edited By: |

Updated on: Sep 10, 2021 | 5:25 PM

Share

ಮಾನವ ಬುದ್ಧಿಮತ್ತೆಯನ್ನು ಐಕ್ಯೂ (ಇಂಟಲಿಜೆಂಟ್ ಕೋಶಂಟ್) ಎಂಬ ಮಾಪನದಿಂದ ಅಳೆಯುತ್ತಾರೆ. ಜಗದ್ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೀನ್ ಅಥವಾ ಸ್ಟೀಫನ್ ಹಾಕಿಂಗ್ ಅವರೆಲ್ಲ ಅಪಾರ ಬುದ್ಧಿಮತ್ತೆ ಹೊಂದಿದವರು ಎಂಬ ಮಾತಿದೆ. ಆದರೆ ಇಲ್ಲೋರ್ವ ಮೆಕ್ಸಿಕನ್ ಬಾಲಕಿ ಅಂತಹ ಮಹಾನುಭಾವರ ಬುದ್ಧಿಮತ್ತೆಯನ್ನೂ ಮೀರಿಸಿದ್ದಾಳೆ. ಇನ್ನೂ 8 ವರ್ಷದ ಅಧಾರಾ ಪರೇಜ್ ಎಂಬ ಬಾಲಕಿಯೇ ಈ ಹೆಗ್ಗಳಿಕೆಗೆ ಪಾತ್ರವಾದ ಬಾಲಕಿ. ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಇಬ್ಬರೂ 160 ಐಕ್ಯೂ ಹೊಂದಿದ್ದರು. ಆದರೆ ಆಧಾರಾ ಪರ್ವೇಜ್ 162 ಐಕ್ಯೂ ಹೊಂದಿದ್ದಾಳೆ. ಈ ಸಂಗತಿ ಈಗ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಮೆಕ್ಸಿಕೋದ ಕೊಳಗೇರಿಯೊಂದರಲ್ಲಿ ಅಧಾರಾ ಪರ್ವೇಜ್ ವಾಸಿಸುತ್ತಾಳೆ. ಈಕೆ ಅಸ್ಪೆರ್ಜಸ್ ಸಿಂಡ್ರೋಮ್ ಹೊಂದಿದ್ದು, ಇದು ಸಾಮಾಜಿಕವಾಗಿ ಬೆರೆಯುವಿಕೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ, ಜನರ ಜತೆ ಮೌಖಿಕವಲ್ಲದ ಸಂವಹನ ಮಾಡುವ ಕೌಶಲವನ್ನು ಕುಂಠಿತಗೊಳಿಸುತ್ತದೆ. ಈ ಕಾರಣಗಳಿಂದ ಅಧಾರಾ ಪರ್ವೇಜ್ ಶಾಲೆಗೆ ಹೋಗಿಲ್ಲ. ಅಲ್ಲದೇ ಕೆಲವು ಒತ್ತಡಗಳಿಗೂ ಒಳಗಾಗಿದ್ದಾಳೆ. ಒಮ್ಮೆ ಅಧಾರಾ ಪರ್ವೇಜ್ ತನ್ನ ಅಮ್ಮನ ಜತೆ ಚಿಕಿತ್ಸೆಗೆಂದು ಟಾಲೆಂಟ್ ಕೇರ್ ಸೆಂಟರಿಗೆ ಭೇಟಿ ನೀಡಿದ್ದಳು. ಆಗಲೇ ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಅವರಿಗಿಂತ ಹೆಚ್ಚು ಐಕ್ಯೂವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ತನ್ನ ಬುದ್ಧಿ ಸಾಮರ್ಥ್ಯದ ಕಾರಣದಿಂದಲೆ ತನ್ನ 8ನೇ ವಯಸ್ಸಿಗೆ ಅಧಾರಾ ಪರ್ವೇಜ್ ತನ್ನ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನೂ ಮುಗಿಸಿದ್ದಾಳೆ. ಅಲ್ಲದೇ, ಎರಡು ಆನ್​ಲೈನ್  ಕೋರ್ಸ್​ಗಳನ್ನೂ ಮುಗಿಸಿರುವ ಈಕೆ ‘ಡು ನಾಟ್ ಗಿವ್ ಅಪ್’ ಎಂಬ ಪುಸ್ತಕವನ್ನೂ ಬರೆದಿದ್ದಾಳೆ.

ಸದ್ಯ ತನ್ನ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಾರಾ ಪರ್ವೇಜ್, ವಿಶೇಷ ಚೇತನ ಮಕ್ಕಳ ಭಾವನೆಗಳನ್ನು ಗುರುತಿಸುವ ಬ್ರೇಸ್​ಲೇಟ್​ನ್ನು ಅಭಿವೃದ್ಧಿಪಡಿಸುತ್ತಿದ್ದಾಳೆ. ಅಲ್ಲದೇ, ‘ಫೋರ್ಬ್ಸ್ ಮೆಕ್ಸಿಕೋ 100 ಬಲಶಾಲಿ ಮಹಿಳೆಯರ ಪಟ್ಟಿಯಲ್ಲೂ ಅಧಾರಾ ಪರ್ವೇಜ್ ಸ್ಥಾನ ಗಳಿಸಿಕೊಂಡಿದ್ದಾಳೆ.

ಇದನ್ನೂ ಓದಿ: 

ವಾಯು ಮಾಲಿನ್ಯವು ಶೇ 40 ಭಾರತೀಯರ ಜೀವಿತಾವಧಿಯನ್ನು 9 ವರ್ಷ ಕಡಿತಗೊಳಿಸಬಹುದು: ಅಮೆರಿಕದ ಅಧ್ಯಯನ ವರದಿ

ಪಾಕಿಸ್ತಾನದ ಶೇಕಡಾ 29 ಮಹಿಳೆಯರು ಮಾತ್ರ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ!

(8 years Mexican Girl Adhara Perez have more IQ than Albert Einstein and Stephen Hawking)

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ