Video: ಲೆಬನಾನ್​ನಲ್ಲಿ ಪೇಜರ್ಸ್ ಸ್ಫೋಟ, 9 ಮಂದಿ ಸಾವು, 2,800 ಜನರಿಗೆ ಗಾಯ

|

Updated on: Sep 18, 2024 | 8:24 AM

ಭಯೋತ್ಪಾದಕ ಗುಂಪು ಹಿಜ್ಬುಲ್ಲಾ ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌ಗಳ ಸಿಂಕ್ರೊನೈಸ್ ಸ್ಫೋಟದಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 2,800 ಕ್ಕೂ ಮಂದಿ ಗಾಯಗೊಂಡಿದ್ದಾರೆ.

Video: ಲೆಬನಾನ್​ನಲ್ಲಿ ಪೇಜರ್ಸ್ ಸ್ಫೋಟ, 9 ಮಂದಿ ಸಾವು, 2,800 ಜನರಿಗೆ ಗಾಯ
ಸ್ಫೋಟ
Follow us on

ಸಂವಹನಕ್ಕಾಗಿ ಇತ್ತೀಚೆಗೆ ಹಿಜ್ಬುಲ್ಲಾ ಸಂಘಟನೆ ಪರಿಚಯಿಸಿದ್ದ ಪೇಜರ್ಸ್ ಎಂಬ ಸಾಧನಗಳು​ ಲೆಬನಾನ್​ನಲ್ಲಿ ಸ್ಫೋಟಗೊಂಡ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 2800ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇರಾನ್​ ರಾಯಭಾರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ, ಪೇಜರ್​ಗಳ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹಿಜ್ಬುಲ್ಲಾ ದೂರಿದೆ.

ಸ್ಫೋಟದಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಸೈಯ್ಯದ್ ಹಸನ್ ನಸ್ರಲ್ಲಾ ಗಾಯಗೊಂಡಿಲ್ಲ ಎಂದು ಗುಂಪು ಹೇಳಿದೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟ ಸುಮಾರು 1 ಗಂಟೆಗಳ ಕಾಲ ನಡೆಯಿತು. ಸಾಧನಗಳು ಹೇಗೆ ಸ್ಫೋಟಗೊಂಡವು ಎನ್ನುವ ಕುರಿತು ಮಾಹಿತಿ ಇಲ್ಲ.

ಲೆಬನಾನಿನ ವಿದೇಶಾಂಗ ಸಚಿವಾಲಯವು ಬಾಂಬ್ ಸ್ಫೋಟಗಳನ್ನು ಅಪಾಯಕಾರಿ ಮತ್ತು ಉದ್ದೇಶಪೂರ್ವಕ ಇಸ್ರೇಲಿ ದಾಳಿ ಎಂದು ಹೇಳಿದೆ. ಲೆಬನಾನ್‌ನಾದ್ಯಂತ ಹಲವಾರು ವೈರ್‌ಲೆಸ್ ಸಂವಹನ ಸಾಧನಗಳನ್ನು ಸ್ಫೋಟಿಸಲಾಗಿದೆ ಎಂದು ಲೆಬನಾನಿನ ಆಂತರಿಕ ಭದ್ರತಾ ಪಡೆಗಳು ತಿಳಿಸಿವೆ.

ವಿಶೇಷವಾಗಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿರುವ ಹಿಜ್ಬುಲ್ಲಾ ಭದ್ರಕೋಟೆಯಲ್ಲಿ ಸ್ಫೋಟಗೊಂಡ ಪೇಜರ್‌ಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಜ್ಬೊಲ್ಲಾ ಪರಿಚಯಿಸಿದ ಹೊಸ ಮಾದರಿಗಳಾಗಿವೆ.

ಸ್ಫೋಟದಲ್ಲಿ 2,800 ಮಂದಿ ಗಾಯಗೊಂಡಿದ್ದು, ಅವರಲ್ಲಿ 200 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ಹೇಳಿದ್ದಾರೆ.

ಲೆಬನಾನ್​ನಲ್ಲಿ ಸರಣಿ ಸ್ಫೋಟ; 8 ಜನ ಸಾವು, 2750 ಹೆಚ್ಚು ಜನರಿಗೆ ಗಾಯ

ಇಸ್ರೇಲ್‌ನ ಉದ್ದೇಶವು ಹಮಾಸ್ ಅನ್ನು ಹತ್ತಿಕ್ಕುವುದು ಮತ್ತು ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ವಶಪಡಿಸಿಕೊಂಡ ಒತ್ತೆಯಾಳುಗಳನ್ನು ಮನೆಗೆ ಕರೆತರುವುದಾಗಿದೆ. ಈ ಘಟನೆಯು ಯುದ್ಧವನ್ನು ಮತ್ತಷ್ಟು ಪ್ರಚೋದಿಸಿದೆ.

ಶಿನ್ ಬೆಟ್ ಏಜೆನ್ಸಿ, ಮೊಬೈಲ್ ಫೋನ್ ಮತ್ತು ಕ್ಯಾಮೆರಾವನ್ನು ಬಳಸಿಕೊಂಡು ರಿಮೋಟ್ ಡಿಟೋನೇಷನ್ ಸಿಸ್ಟಮ್‌ಗೆ ಲಿಂಕ್ ಮಾಡಲಾದ ಸ್ಫೋಟಕ ಸಾಧನವನ್ನು ವಶಪಡಿಸಿಕೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ