ಪೌಂಡ್ ಸ್ಟರ್ಲಿಂಗ್​ಗೆ 14 ಶತಮಾನಗಳ ಇತಿಹಾಸ; ವಿಶ್ವದ ಅತ್ಯಂತ ಹಳೆಯ ಕರೆನ್ಸಿಯ ಕುತೂಹಲಕಾರಿ ಕಥೆ

World's oldest existing currency: ಪ್ರಸ್ತುತ ಯುಎಸ್ ಡಾಲರ್ ಪ್ರಪಂಚದ ಮೇಲೆ ಪ್ರಾಬಲ್ಯ ಹೊಂದಿದೆ. ಆದರೆ ಬ್ರಿಟನ್‌ನ ಕರೆನ್ಸಿ ಹಲವಾರು ನೂರು ವರ್ಷಗಳವರೆಗೆ ಪ್ರಬಲವಾಗಿತ್ತು. ಇದು ವಿಶ್ವದ ಅತ್ಯಂತ ಹಳೆಯ ಕರೆನ್ಸಿಯಾಗಿದೆ. ಏಳೆಂಟನೇ ಶತಮಾನದಲ್ಲೇ ಇದರ ಆರಂಭವಾಗಿತ್ತು. ಪೌಂಡ್ ಸ್ಟರ್ಲಿಂಗ್ ಆಗಿದ್ದು ಇದು ಈಗ ಜಿಬಿಪಿ ಆಗಿದೆ.

ಪೌಂಡ್ ಸ್ಟರ್ಲಿಂಗ್​ಗೆ 14 ಶತಮಾನಗಳ ಇತಿಹಾಸ; ವಿಶ್ವದ ಅತ್ಯಂತ ಹಳೆಯ ಕರೆನ್ಸಿಯ ಕುತೂಹಲಕಾರಿ ಕಥೆ
ಪೌಂಡ್ ಸ್ಟರ್ಲಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 17, 2024 | 7:14 PM

ವಿಶ್ವದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ಕರೆನ್ಸಿ ಎಂದರೆ ಅದು ಯುಎಸ್ ಡಾಲರ್. ಆದರೆ, ಡಾಲರ್​ಗಿಂತಲೂ ಹೆಚ್ಚು ಮೌಲ್ಯ ಹೊಂದಿರುವ ಮತ್ತು ವಿಶ್ವದಲ್ಲೇ ಅತ್ಯಂತ ಹಳೆಯದು ಎನಿಸಿರುವ ಕರೆನ್ಸಿ ಎಂದರೆ ಅದು ಬ್ರಿಟಿಷ್ ಪೌಂಡ್ ಅಥವಾ ಪೌಂಡ್ ಸ್ಟರ್ಲಿಂಗ್. ಎಂಟು ಮತ್ತು ಒಂಬತ್ತನೇ ಶತಮಾನದಲ್ಲೇ ಈ ಕರೆನ್ಸಿ ಅಸ್ತಿತ್ವದಲ್ಲಿತ್ತು ಎಂದರೆ ನಿಜಕ್ಕೂ ಸೋಜಿಗದ ಸಂಗತಿ. ಕೆಲ ಮಾಹಿತಿ ಪ್ರಕಾರ ಕ್ರಿಸ್ತಶಕ 600ರ ಆಸುಪಾಸಿನ ವರ್ಷಗಳಲ್ಲೇ ಪೌಂಡ್ ಸ್ಟರ್ಲಿಂಗ್ ಚಲಾವಣೆ ಆರಂಭವಾಗಿತ್ತಂತೆ.

ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಏಕೀಕರಣದ ನಂತರ 1707 ರಲ್ಲಿ ಬ್ರಿಟಿಷ್ ಪೌಂಡ್ ಯುನೈಟೆಡ್ ಕಿಂಗ್ಡಮ್‌ನ ಅಧಿಕೃತ ಕರೆನ್ಸಿಯಾಯಿತು. ಆದರೆ ಇಂಗ್ಲೆಂಡಿನಲ್ಲಿ ಪೌಂಡ್ ಬಳಕೆ ಆರಂಭವಾದದ್ದು ಕ್ರಿ.ಶ.760ರಲ್ಲಿ. ಪೌಂಡ್ ಸ್ಟರ್ಲಿಂಗ್​ನಲ್ಲಿರುವ ಪೌಂಡ್ ಹೆಸರು ಲ್ಯಾಟಿನ್ ಪದ ಲಿಬ್ರಾ ಪಾಂಡೋ ಎಂಬುದರಿಂದ ಬಂದಿದೆ. ಲಿಬ್ರಾ ಎಂದರೆ ತುಲಾ ರಾಶಿಯ ಪದ ಎಂದು ಗೊತ್ತಿರಬಹುದು. ತಕ್ಕಡಿ ಚಿಹ್ನೆ ಇದೆ. ಪಾಂಡೋ ಎಂದರೆ ತೂಕ ಎಂದರ್ಥ. ಸ್ಟರ್ಲಿಂಗ್ ಕರೆನ್ಸಿಗೆ ಪೌಂಡ್ ಹೆಸರು ಸೇರ್ಪಡೆ ಆಗಿದ್ದಕ್ಕೆ ಇದು ಮೂಲ ಎನ್ನಲಾಗಿದೆ.

ಹಾಗೆಯೇ, ಸ್ಟರ್ಲಿಂಗ್ ಹೆಸರು ಹೇಗೆ ಬಂತು ಎನ್ನುವುದಕ್ಕೆ ನಾಲ್ಕೈದು ಥಿಯರಿಗಳಿವೆ. ಹಳೆಯ ಇಂಗ್ಲೀಷ್ ಭಾಷೆಯಲ್ಲಿ ಸ್ಟಾರ್​ಗೆ ಸ್ಟಿಯೋರಾ ಎನ್ನಲಾಗುತ್ತಿತ್ತು. 12ನೇ ಶತಮಾನದಲ್ಲಿ ಸಿಲ್ವರ್ ಪೆನ್ನಿ ಕಾಯಿನ್​ನಲ್ಲಿ ಸಣ್ಣ ನಕ್ಷತ್ರವೊಂದನ್ನು ಮುದ್ರಿಸಲಾಗುತ್ತಿತ್ತು. ಈ ನಕ್ಷತ್ರದಿಂದಾಗಿ ಸ್ಟರ್ಲಿಂಗ್ ಹೆಸರು ಅಂಟಿಕೊಂಡಿತು. ಪೌಂಡ್ ಸ್ಟರ್ಲಿಂಗ್ ಹೆಸರು ಪ್ರಾಪ್ತವಾಯಿತು ಎನ್ನುತ್ತಾರೆ. ಸದ್ಯಕ್ಕೆ ಪೌಂಡ್ ಸ್ಟರ್ಲಿಂಗ್ ಜಿಬಿಪಿ ಅಥವಾ ಗ್ರೇಟ್ ಬ್ರಿಟನ್ ಪೌಂಡ್ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಬಳಸುವಂತಿಲ್ಲ; ಎಷ್ಟು ದಂಡ ಕಾದಿರುತ್ತೆ ಗೊತ್ತಾ?

ಸದ್ಯ ಬ್ಯಾಂಕ್ ಆಫ್ ಇಂಗ್ಲೆಂಡ್ 5, 10, 20 ಮತ್ತು 50 ಜಿಬಿಪಿ ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದೆ. ಒಂದು ಮತ್ತು ಎರಡು ಜಿಬಿಪಿ ಮುಖಬೆಲೆಯ ನಾಣ್ಯಗಳು ಚಲಾವಣೆಯಲ್ಲಿವೆ. ಒಂದು ಪೌಂಡ್​ನಲ್ಲಿ 100 ಪೆನ್ಸ್​ಗಳಿರುತ್ತವೆ. 1, 2, 5, 10, 20 ಮತ್ತು 50 ಪೆನ್ಸ್ ಮೌಲ್ಯದ ನಾಣ್ಯಗಳೂ ಚಲಾವಣೆಯಲ್ಲಿವೆ.

ಮೊದಲ ಪೌಂಡ್ ನೋಟುಗಳ ಮುದ್ರಣ

ಬ್ಯಾಂಕ್ ಆಫ್ ಇಂಗ್ಲೆಂಡ್ ಸುಮಾರು 300 ವರ್ಷಗಳ ಹಿಂದೆ ಮೊದಲ ಬಾರಿಗೆ ಪೌಂಡ್ ನೋಟುಗಳನ್ನು ಬಿಡುಗಡೆ ಮಾಡಿತು. ಇದಾದ ನಂತರ ಅದರಲ್ಲಿ ಹಲವು ಬದಲಾವಣೆಗಳಾಗಿವೆ. ಮೊದಲ ಪೌಂಡ್ ನಾಣ್ಯವು 1489 ರಲ್ಲಿ ಹೆನ್ರಿ VII ರ ಆಳ್ವಿಕೆಯಲ್ಲಿ ಕಾಣಿಸಿಕೊಂಡಿತು.

1855 ರಲ್ಲಿ ನೋಟುಗಳ ಮುದ್ರಣ ಪ್ರಾರಂಭವಾಗುವ ಮೊದಲು, ಬ್ಯಾಂಕ್ ಆಫ್ ಇಂಗ್ಲೆಂಡ್ ಬ್ಯಾಂಕ್ ನೋಟುಗಳನ್ನು ಕೈಯಿಂದ ಬರೆಯುತ್ತಿತ್ತಂತೆ. ಒಂದು ಸಂದರ್ಭದಲ್ಲಿ ಬ್ರಿಟಿಷ್ ಪೌಂಡ್ ಅನ್ನು ಬ್ರಿಟಿಷ್ ಸಾಮ್ರಾಜ್ಯದ ವಸಾಹತುಗಳಲ್ಲಿ ಬಳಸಲಾಗುತ್ತಿತ್ತು. ಇವುಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾ ಕೂಡ ಸೇರಿವೆ.

19 ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ, ಅನೇಕ ದೇಶಗಳು ತಮ್ಮ ಕರೆನ್ಸಿಯ ಮೌಲ್ಯವನ್ನು ಚಿನ್ನದ ಬೆಲೆಗೆ ಜೋಡಿಸಿದವು. ಮೊದಲನೆಯ ಮಹಾಯುದ್ಧದ ಮೊದಲು, ಬ್ರಿಟಿಷ್ ಪೌಂಡ್‌ನ ಮೌಲ್ಯವನ್ನು ನಿರ್ಧರಿಸಲು ಬ್ರಿಟನ್ ಚಿನ್ನದ ಮಾನದಂಡವನ್ನು ಬಳಸಿತು. ಪೌಂಡ್ ಅನೇಕ ವರ್ಷಗಳಿಂದ ಜಗತ್ತಿನಲ್ಲಿ ಜನಪ್ರಿಯವಾಗಿತ್ತು ಆದರೆ US ಡಾಲರ್ ಹೊರಹೊಮ್ಮಿದ ನಂತರ, ಕಳೆದ ಎಂಟು ದಶಕಗಳಲ್ಲಿ ಅದರ ಜನಪ್ರಿಯತೆ ಕಡಿಮೆಯಾಯಿತು.

ಇದನ್ನೂ ಓದಿ: 1,900 ಕೋಟಿ ರೂಗೆ ಕಟ್ಟಿದ ರಸ್ತೆಗೆ 8,000 ಕೋಟಿ ರೂ ಟೋಲ್? ನಿತಿನ್ ಗಡ್ಕರಿ ಉತ್ತರ ಇದು

ಅತ್ಯಂತ ಹಳೆಯ ಕರೆನ್ಸಿಗಳು

ವಿಶ್ವದ ಎರಡನೇ ಅತ್ಯಂತ ಹಳೆಯ ಕರೆನ್ಸಿ ಸರ್ಬಿಯಾದ ದಿನಾರ್ ಆಗಿದೆ. ಇದನ್ನು 1214 ರಲ್ಲಿ ಪ್ರಾರಂಭಿಸಲಾಯಿತು. ರಷ್ಯಾದ ಕರೆನ್ಸಿ ರೂಬಲ್ ಅನ್ನು 1300 ರಲ್ಲಿ ಪರಿಚಯಿಸಲಾಯಿತು. ಯುಎಸ್ ಡಾಲರ್ 1785 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಎರಡನೇ ಮಹಾಯುದ್ಧದ ನಂತರ ಇಡೀ ಪ್ರಪಂಚದಲ್ಲಿ ಪ್ರಾಬಲ್ಯ ಸಾಧಿಸಿದೆ. ಹೈಟಿಯ ಕರೆನ್ಸಿ ಗೌರ್ಡೆ ಅನ್ನು 1833 ರಲ್ಲಿ ಪರಿಚಯಿಸಲಾಯಿತು ಮತ್ತು ಫಾಕ್‌ಲ್ಯಾಂಡ್‌ನ ಕರೆನ್ಸಿ ಪೌಂಡ್ 1833 ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಡೊಮಿನಿಕನ್ ರಿಪಬ್ಲಿಕ್‌ನ ಕರೆನ್ಸಿ, ಪೆಸೊ, 1844 ರಿಂದ ಚಲಾವಣೆಯಲ್ಲಿದೆ, ಸ್ವಿಸ್ ಫ್ರಾಂಕ್ ಅನ್ನು 1850 ರಲ್ಲಿ ಪರಿಚಯಿಸಲಾಯಿತು. ಕೆನಡಾದ ಡಾಲರ್ ಅನ್ನು 1871 ರಲ್ಲಿ ಪರಿಚಯಿಸಲಾಯಿತು ಮತ್ತು ಜಪಾನ್‌ನ ಕರೆನ್ಸಿ ಯೆನ್ ಸಹ 1871 ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Tue, 17 September 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ