AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​

ವ್ಯಕ್ತಿಯೊಬ್ಬನನ್ನು ಬುಲೆಟ್​ನಿಂದ ಇ-ಸಿಗರೇಟ್ ರಕ್ಷಿಸುವ ಕುರಿತು ವರದಿಯಾಗಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು ಕೊನೆಗೆ ಇ-ಸಿಗರೇಟ್​ನಿಂದ ಬದುಕುಳಿದಿದ್ದಾರೆ.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​
ಇ-ಸಿಗರೇಟ್​
ನಯನಾ ರಾಜೀವ್
|

Updated on: Sep 18, 2024 | 9:37 AM

Share

ಸಿಗರೇಟ್​ ಎಂದಾದರೂ ಮನುಷ್ಯನ ಜೀವ ಕಾಪಾಡಬಲ್ಲದೇ, ಧೂಮಪಾನದಿಂದ ಮನುಷ್ಯನ ಶ್ವಾಸಕೋಶಕ್ಕೆ ಪೆಟ್ಟಾಗುವುದೇ ವಿನಃ ಒಳ್ಳೆಯದಂತೂ ಇಲ್ಲ. ದೀವಾರ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಎದೆಗೆ ಗುಂಡು ಹಾರಿಸಿದರೂ ಜೇಬಿನಲ್ಲಿದ್ದ ಬ್ಯಾಡ್ಜ್​ ಅವರ ಜೀವ ಉಳಿಸಿದಂತೆ ನಿಜ ಜೀವನದಲ್ಲೂ ಅಂಥದ್ದೇ ಘಟನೆ ನಡೆದಿದೆ.

ಕೆಲವೊಮ್ಮೆ ನಾಣ್ಯಗಳು, ಕೆಲವೊಮ್ಮೆ ಐಫೋನ್ ವ್ಯಕ್ತಿಯ ಜೀವ ಉಳಿಸಿದಂತೆ ಈ ಬಾರಿ ಇ-ಸಿಗರೇಟ್​ ವ್ಯಕ್ತಿಯ ಜೀವ ಕಾಪಾಡಿದೆ. ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು.

ಹೇಗೋ ವ್ಯಕ್ತಿ ಕಾರನ್ನು ಓಡಿಸಿಕೊಂಡು ಬಂದು, ಸಹಾಯಕ್ಕಾಗಿ ಕಾರ್​ವಾಶ್​ ಮಾಡಿಸುವ ಸ್ಥಳದಲ್ಲಿ ನಿಲ್ಲಿಸಿದಾಗ ಬುಲೆಟ್​ ತನ್ನ ಕಾರಿನ ಬಾಗಿಲು ತೂರಿಕೊಂಡು ಒಳಗೆ ಬಂದಿತ್ತು. ಅದು ಬಂದು ಇ-ಸಿಗರೇಟ್​ ಡಬ್ಬಿಗೆ ತಗುಲಿತ್ತು.

ಮತ್ತಷ್ಟು ಓದಿ: ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್​ ಸಾವು

ಒಂದೊಮ್ಮೆ ಆ ಸಿಗರೇಟ್​ ಡಬ್ಬಿ ಮತ್ತೊಂದು ಪಾಕೆಟ್​ನಲ್ಲಿದ್ದರೆ ಅದು ಅವರ ಕಾಲಿಗೆ ಬೀಳುತ್ತಿತ್ತು. ಅದನ್ನು ಪೊಲೀಸರಿಗೆ ಕೊಟ್ಟಾಗ ಅವರೂ ಕೂಡ ಆಶ್ಚರ್ಯಗೊಂಡರು. ಪೊಲೀಸರು ಸಾಧನವನ್ನು ಮುರಿದು ನೋಡಿದಾಗ ಗುಂಡು ಇನ್ನೂ ಅದರೊಳಗಿತ್ತು.

ಸಿನೋಲಾ ಮೆಕ್ಸಿಕೋದ ಡ್ರಗ್ ಉದ್ಯಮವನ್ನು ನಡೆಸುತ್ತಿರುವ ಅತ್ಯಂತ ಹಿಂಸಾತ್ಮಕ ಡ್ರಗ್ ಕಾರ್ಟೆಲ್‌ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ವಿಶೇಷ ಪಡೆಗಳ ಸೈನಿಕರು, ವಿಮಾನಗಳು ಮತ್ತು ಭಾರೀ ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದರೂ, ಸ್ಥಳೀಯರಲ್ಲಿ ಭಯ ಮುಂದುವರೆದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್