South Africa Church: ದಕ್ಷಿಣ ಆಫ್ರಿಕಾದ ಚರ್ಚ್​ ಪ್ರಾರ್ಥನೆ ವೇಳೆ ಪ್ರವಾಹ; 9 ಜನ ಸಾವು, 8 ಮಂದಿ ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Dec 05, 2022 | 9:00 AM

ಪ್ರವಾಹದಲ್ಲಿ ಮೃತಪಟ್ಟವರು ಮತ್ತು ನಾಪತ್ತೆಯಾದವರೆಲ್ಲರೂ ಶನಿವಾರ ನದಿಯ ಉದ್ದಕ್ಕೂ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

South Africa Church: ದಕ್ಷಿಣ ಆಫ್ರಿಕಾದ ಚರ್ಚ್​ ಪ್ರಾರ್ಥನೆ ವೇಳೆ ಪ್ರವಾಹ; 9 ಜನ ಸಾವು, 8 ಮಂದಿ ನಾಪತ್ತೆ
ದಕ್ಷಿಣ ಆಫ್ರಿಕಾದಲ್ಲಿ ಪ್ರವಾಹ
Follow us on

ಜೋಹಾನ್ಸ್​ಬರ್ಗ್: ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನ ಚರ್ಚ್​ ಪ್ರಾರ್ಥನೆ ವೇಳೆ ಜುಕ್ಸ್‌ಕೇಯ್ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ (Flood) ಮುಳುಗಿ, ದಕ್ಷಿಣ ಆಫ್ರಿಕಾದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. 8 ಜನರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟವರು ಮತ್ತು ನಾಪತ್ತೆಯಾದವರೆಲ್ಲರೂ ಶನಿವಾರ ನದಿಯ ಉದ್ದಕ್ಕೂ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಾಗ ಇಬ್ಬರ ಶವಗಳು ಪತ್ತೆಯಾಗಿದ್ದು, ಇದುವರೆಗೂ ಒಟ್ಟು 9 ಶವಗಳು ಪತ್ತೆಯಾಗಿವೆ ಎಂದು ರಕ್ಷಣಾ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡಗಳು ಪ್ರವಾಹದ ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ತೆರಳಿದ್ದಾರೆ.

ಇದನ್ನೂ ಓದಿ: Big News: ವೆನೆಜುವೆಲಾದಲ್ಲಿ ಭೀಕರ ಪ್ರವಾಹ, ಭೂಕುಸಿತ; 22 ಜನ ಸಾವು, 50 ಮಂದಿ ನಾಪತ್ತೆ

ಧಾರ್ಮಿಕ ಗುಂಪುಗಳು ಬ್ಯಾಪ್ಟಿಸಮ್ ಮತ್ತು ಧಾರ್ಮಿಕ ಶುದ್ಧೀಕರಣಕ್ಕಾಗಿ ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಅಲೆಕ್ಸಾಂಡ್ರಾದಂತಹ ಹಿಂದಿನ ಟೌನ್‌ಶಿಪ್‌ಗಳನ್ನು ನಡೆಸುವ ಜಕ್ಸ್‌ಕೀ ನದಿಯ ಉದ್ದಕ್ಕೂ ಆಗಾಗ ಧಾರ್ಮಿಕ ಸಭೆ ನಡೆಯುತ್ತದೆ. ಆ ಪ್ರದೇಶದಲ್ಲಿ ಪ್ರವಾಹ ಉಂಟಾಗುವ ಬಗ್ಗೆ ಜನರಿಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಈ ದುರಂತ ಸಂಭವಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ