ಅಧ್ಯಯನವೊಂದರ ಪ್ರಕಾರ ಸಾರ್ಸ್-ಕೊವ್-2 ವೈರಸ್ ಈಗಲೂ ಸಸ್ತನಿಗಳ ನಡುವೆ ಸೋಂಕು ಹರಡುತ್ತಿದೆ!

ಪ್ರೋಟೀನುಗಳನ್ನು ಸಾಲ್ವೇಟೆಡ್ ಪ್ರತ್ಯಾನುಕರಣೆಯಲ್ಲಿ ಇಡಲು ಸಂಶೋಧಕರು ಕಂಪ್ಯೂಟರ್ ಮಾಲಿಕ್ಯೂಲರ್ ಡೈನಾಮಿಕ್ ಹೆಸರಿನ ಪ್ರತ್ಯಾನುಕರಣೆ ವಿಧಾನವನ್ನು ಬಳಸಿ ಅವುಗಳ ಚಲನವಲನಗಳನ್ನು ಗಮನಿಸಿದ್ದಾರೆ.

ಅಧ್ಯಯನವೊಂದರ ಪ್ರಕಾರ ಸಾರ್ಸ್-ಕೊವ್-2 ವೈರಸ್ ಈಗಲೂ ಸಸ್ತನಿಗಳ ನಡುವೆ ಸೋಂಕು ಹರಡುತ್ತಿದೆ!
ಸಾರ್ಸ್ -ಕೋವ್-2
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 05, 2022 | 2:34 PM

ವಾಷಿಂಗ್ಟನ್: ಕಂಪ್ಯೂಟರ್ ಪ್ರತ್ಯಾನುಕರಣೆ ಆಧಾರಿತ ಅಧ್ಯಯನವೊಂದರ ಪ್ರಕಾರ ಸಾರ್ಸ್-ಕೊವ್-2 ವೈರಸ್ ಈಗಲೂ ಸಸ್ತನಿಗಳ (mammals) ನಡುವೆ ಸೋಂಕು ಹರಡುವಲ್ಲಿ ಸಕ್ರಿಯವಾಗಿದೆ. ಅಮೆರಿಕದ ರೋಚೆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ), ಸಂಶೋಧಕರು, ಕೊರೋನವೈರಸ್‌ಗಳು ಜೀವಕೋಶಗಳನ್ನು (cells) ಸೋಂಕಿಗೊಳಪಡಿಸಲು ತಮ್ಮ ಸ್ಪೈಕ್ ಪ್ರೊಟೀನ್‌ಗಳನ್ನು (spike proteins) ಬಳಸುತ್ತವೆ ಎಂಬ ಅಂಶವನ್ನು ಪತ್ತೆಮಾಡಿದ್ದಾರೆ. ಮಾನವ ಮತ್ತು ಬಾವಲಿಗಳಲ್ಲಿ ಒಂದೇ ತೆರನಾಗಿ ಅವು ಸೋಂಕನ್ನು ಉಂಟುಮಾಡುತ್ತವೆ.

ರಾಯಲ್ ಸೊಸೈಟಿ ಓಪನ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು, ಹಲವಾರು ಸಾರ್ಸ್-ಕೋವ್-2 ರೂಪಾಂತರಗಳಲ್ಲಿನ ವೈರಲ್ ಸ್ಪೈಕ್ ಪ್ರೋಟೀನ್‌ಗಳು ಮಾನವ ಹಾಗೂ ರೈನೋಲೋಫಸ್ ಪ್ರಜಾತಿಯ ವಿವಿಧ ಬಾವಲಿಗಳಲ್ಲಿ ಎಸಿಎ2 ಎಂದು ಕರೆಯಲ್ಪಡುವ ಅತಿಥೇಯ ಸೆಲ್ ಗ್ರಾಹಕಗಳೊಂದಿಗೆ ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ತೋರಿಸುತ್ತವೆ.

‘ಮಾನವರು ವೈರಸ್ ಗೆ ಹೆಚ್ಚು ಒಗ್ಗಿ ಬಾವಲಿಗಳಿಗೆ ಕಡಿಮೆ ಒಗ್ಗಿರುವುದರಿಂದ ವಿಕಸನದ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ನಾವು ಭಾವಿಸಿದ್ದೆವು, ಆದರೆ ಅಂಥ ಮಹತ್ತರ ಬದಲಾವಣೆಗಳೇನೂ ನಮ್ಮ ಗಮನಕ್ಕೆ ಬರಲಿಲ್ಲ,’ ಎಂದು ಆರ್ ಐಟಿ ಯ ಸಹಾಯಕ ಪ್ರಾಧ್ಯಾಪಕ ಗ್ರೆಗೊರಿ ಬಾಬಿಟ್ ಹೇಳಿದ್ದಾರೆ.

‘ಈ ಬೈಂಡಿಂಗ್ ಸೈಟ್ ಹೆಚ್ಚು ವಿಕಸನಗೊಂಡಿರದ ಕಾರಣ, ಸೋಂಕು ಮನುಷ್ಯರಿಂದ ಬಾವಲಿಗಳಿಗೆ ಹರಡುವುದನ್ನು ತಡೆಯಲಾರದು’ ಎಂದು ಬಾಬಿಟ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಧ್ಯಯನದ ಪ್ರಕಾರ ಪ್ರಬೇಧಗಳಾಂತರ ಸೋಂಕು ವ್ಯಾಪಕವಾಗಿದ್ದು ಅಧ್ಯಯನಗಳಲ್ಲಿ ಈ ಅಂಶಕ್ಕೆ ಪೂರಕವಾಗುವ ಪುರಾವೆಗಳು ಲಭ್ಯವಾಗಿವೆ.

ಪ್ರೋಟೀನುಗಳನ್ನು ಸಾಲ್ವೇಟೆಡ್ ಪ್ರತ್ಯಾನುಕರಣೆಯಲ್ಲಿ ಇಡಲು ಸಂಶೋಧಕರು ಕಂಪ್ಯೂಟರ್ ಮಾಲಿಕ್ಯೂಲರ್ ಡೈನಾಮಿಕ್ ಹೆಸರಿನ ಪ್ರತ್ಯಾನುಕರಣೆ ವಿಧಾನವನ್ನು ಬಳಸಿ ಅವುಗಳ ಚಲನವಲನಗಳನ್ನು ಗಮನಿಸಿದ್ದಾರೆ.

ಪ್ರತಿ ಪರಮಾಣು ಕಾಲಾನಂತರದಲ್ಲಿ ಏನು ಮಾಡುತ್ತದೆ ಎಂಬುದನ್ನು ತೋರಿಸಲು ಈ ವಿಧಾನವು ಗ್ರಾಫಿಕ್ಸ್ ಪ್ರೊಸೆಸರ್‌ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಅನ್ನು ಬಳಸುತ್ತದೆ.

ಸಾಂಪ್ರದಾಯಿಕ ಪ್ರಯೋಗಾಲಯಗಳಲ್ಲಿ ಉತ್ತರಿಸಲಾಗದ ಪ್ರಶ್ನೆಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಈ ವಿಧಾನ ನೆರವಾಗುತ್ತದೆ ಎಂದು ಬಾಬಿಟ್ ಹೇಳಿದ್ದಾರೆ.

‘ಬಾವಲಿಗಳನ್ನು ಮಾನವ ವೈರಲ್ ತಳಿಗಳೊಂದಿಗೆ ಮರುಸೋಂಕಿಸುವ ಪ್ರಯೋಗಗಳನ್ನು ಮಾಡುವುದು ಅಪಾಯಕಾರಿ ಅನ್ನೋದು ನಿರ್ವಿವಾದಿತ, ಆದ್ದರಿಂದ ಕಂಪ್ಯೂಟರ್ ಆಧಾರಿತ ಪ್ರತ್ಯಾನುಕರಣೆ ನಮಗೆ ಹೆಚ್ಚು ಸುರಕ್ಷಿತವಾದ ಪರ್ಯಾಯ ಎನಿಸಿದೆ,’ ಎಂದು ಬಾಬಿಟ್ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ