ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್​​​ ದಾಖಲೆ ಸೇರಿತು

| Updated By: ವಿವೇಕ ಬಿರಾದಾರ

Updated on: Jun 29, 2022 | 7:39 PM

ಮೆಕ್ಸಿಕೋದ 900 ಕ್ಕೂ ಹೆಚ್ಚು ನೃತ್ಯಗಾರರು ಒಟ್ಟಿಗೆ ಮೆಕ್ಸಿಕೋದ ಜಾನಪದ ಹಾಡಿಗೆ ನೃತ್ಯ ಮಾಡುವ ಮೂಲಕ ಗಿನ್ನಿಸ್​​​ ದಾಖಲೆ ಮಾಡಿದ್ದಾರೆ.

ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್​​​ ದಾಖಲೆ ಸೇರಿತು
ಗಿನ್ನಿಸ್​​ ದಾಖಲೆ ಸೃಷಿಸಿದ ಮೆಕ್ಸಿಕೋ ನೃತ್ಯಗಾರರು
Follow us on

ಮೆಕ್ಸಿಕೋ: ಮೆಕ್ಸಿಕೋದ (Mexico) 900 ಕ್ಕೂ ಹೆಚ್ಚು ನೃತ್ಯಗಾರರು (Dancers) ಒಟ್ಟಿಗೆ ಮೆಕ್ಸಿಕೋದ ಜಾನಪದ (Folk) ಹಾಡಿಗೆ ನೃತ್ಯ (Dance) ಮಾಡುವ ಮೂಲಕ ಗಿನ್ನಿಸ್​ (Guinness Record)​​ ದಾಖಲೆ ಮಾಡಿದ್ದಾರೆ. ವರದಿಗಳ ಪ್ರಕಾರ “ಜುವಾನ್ ಕೊಲೊರಾಡೋ” ಹಾಡಿನ ಲೈವ್ ಆವೃತ್ತಿಗೆ ಸಾಂಪ್ರದಾಯಿಕ ಜಾನಪದ ನೃತ್ಯ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಹಿಂದೆ 2019 ರಲ್ಲಿ ಜಲಿಸ್ಕೋ ರಾಜ್ಯದಲ್ಲಿ 882 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಸರಿಗಟ್ಟುವ  954 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡಿದ್ದಾರೆ.

ಈ ದಾಖಲೆಯನ್ನು ನಿರ್ಮಿಸಲು ಜೂನ್​​ 26ರಂದು ಆರ್ಟಿಸನಲ್, ಟೂರಿಸ್ಟಿಕ್, ಕಲ್ಚರಲ್ ಮತ್ತು ಆಗ್ರೋ-ಇಂಡಸ್ಟ್ರಿಯಲ್ ಗ್ರೂಪ್ ಆಫ್ ಬ್ಯೂಟಿಫುಲ್ ಮೈಕೋಕಾನ್ ಸಂಸ್ಥೆಗಳು, ಮೊರೆಲಿಯಾದ ಪುರಸಭೆಯ ಆಶ್ರಯದಲ್ಲಿ ಕೂಟವನ್ನು ಆಯೋಜಿಸಿದ್ದವು. ಕೂಟದಲ್ಲಿ 945 ನೃತ್ಯಗಾರರು ನೃತ್ಯ ಮಾಡುವ ಮೂಲಕ ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾರೆ. ಈ ಸಂಬಂಧ ಮಾತನಾಡಿದ ಮೆಕ್ಸಿಕೋದ ಸಂಸ್ಕೃತಿ ಸಚಿವ ಫಾತಿಮಾ ಚಾವೆಜ್ ಅಲ್ಕರಾಜ್ ಎಲ್ಲರಿಗೂ ಧನ್ಯವಾದಗಳು ನಿಮ್ಮ ಈ ಅಭೂತ ಪೂರ್ವ ಕಾರ್ಯದಿಂದ ಗಿನ್ನಿಸ್​  ರೆಕಾರ್ಡ್​​ ಮಾಡಿದ್ದೇವೆ ಎಂದು ಹೇಳಿದ್ದಾರೆ.