ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ

|

Updated on: Mar 01, 2021 | 4:31 PM

ನನ್ನ ಮಗಳು ಧರಿಸಿದ ಉಡುಪು ಸರಿಯಾಗಿಯೇ ಇದೆ. ಕಪ್ಪು ಬಣ್ಣದ ಡ್ರೆಸ್ ಅನುಚಿತವಾಗಿಲ್ಲ. ಶಿಕ್ಷಕಿಯ ಈ ನಡೆ ಅಸಂಬದ್ಧವಾಗಿದೆ ಎಂದು ವಿದ್ಯಾರ್ಥಿನಿಯ ಅಪ್ಪ ಕ್ರಿಸ್ಟೋಫರ್ ಕಿಡಿಕಾರಿದ್ದಾರೆ.

ಹೊಸ ಡ್ರೆಸ್​ ಹಾಕಿ ಖುಷಿಯಿಂದ ಶಾಲೆಗೆ ಹೋದ ಬಾಲಕಿಯನ್ನು ಬೈದು ಮನೆಗೆ ಕಳಿಸಿದ ಶಿಕ್ಷಕಿ; ನೈತಿಕ ಪೊಲೀಸ್​ಗಿರಿಯ ವಿರುದ್ಧ ನೆಟ್ಟಿಗರು ಗರಂ
ಕ್ಯಾರಿಸ್ ವಿಲ್ಸನ್
Follow us on

ಆಕೆ 17ವರ್ಷದ ಬಾಲಕಿ..ಸೀನಿಯರ್ ಸೆಕೆಂಡರಿ ಸ್ಕೂಲ್​ನಲ್ಲಿ ಓದುತ್ತಿದ್ದ ಆಕೆ ಕಳೆದ ಮಂಗಳವಾರವೂ ಎಂದಿನಂತೆ ಖುಷಿಯಿಂದ ಶಾಲೆಗೆ ಹೋದಳು. ಆದರೆ ಕೆಲವೇ ಹೊತ್ತಲ್ಲಿ ಶಿಕ್ಷಕಿ ಆಕೆಗೆ ಬೈದು, ಮನೆಗೆ ಕಳಿಸಿದ್ದಾರೆ. ಈ ಘಟನೆ ನಡೆದಿದ್ದು, ಬ್ರಿಟಿಷ್​ ಕೊಲಂಬಿಯಾದ ನೋರ್​ಕಾಮ್​ ಸೀನಿಯರ್​ ಸೆಕೆಂಡರಿ ಸ್ಕೂಲ್​​ನಲ್ಲಿ. ಅಷ್ಟಕ್ಕೂ ಆ ವಿದ್ಯಾರ್ಥಿನಿ ಮಾಡಬಾರದ್ದೇನೂ ಮಾಡಿರಲಿಲ್ಲ..ಮೊಣಕಾಲುದ್ದ ಬಟ್ಟೆ ಧರಿಸಿ, ಚೆಂದವಾಗಿ ರೆಡಿಯಾಗಿ ಹೋಗಿದ್ದಳಷ್ಟೇ !

12ನೇ ಕ್ಲಾಸ್​ನಲ್ಲಿ ಓದುತ್ತಿರುವ ಕ್ಯಾರಿಸ್ ವಿಲ್ಸನ್​ಗೆ ಈ ಕೆಟ್ಟ ಅನುಭವ ಆಗಿದೆ. ಆಕೆ ಮೊಣಕಾಲವರೆಗಷ್ಟೇ ಉದ್ದವಿರುವ ಕಪ್ಪು ಬಣ್ಣದ, ಬಿಗಿಯಾದ ಡ್ರೆಸ್​ ಧರಿಸಿ ಶಾಲೆಗೆ ಹೋಗಿದ್ದಳು. ಬಿಳಿ ಬಣ್ಣದ, ಪೂರ್ತಿ ಕುತ್ತಿಗೆಯವರೆಗೆ ಮುಚ್ಚುವ ಟಿ ಶರ್ಟ್​ ಕೂಡ ಹಾಕಿದ್ದಳು. ಆದರೆ ಈ ಉಡುಪು ಶಾಲೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಶಿಕ್ಷಕಿ ಹೇಳಿದ್ದಾರೆ. ಅಲ್ಲದೆ, ಇಂಥ ಡ್ರೆಸ್​ಗಳನ್ನು ಹಾಕಿಬಂದರೆ ಪುರುಷ ಶಿಕ್ಷಕರು, ವಿದ್ಯಾರ್ಥಿಗಳು ಮುಜುಗರಕ್ಕೀಡಾಗಬಹುದು. ಅವರಿಗೆ ಇರಿಸುಮುರಿಸಾಗಬಹುದು ಎಂದೂ ಆ ಶಿಕ್ಷಕಿ ಸಮಜಾಯಿಷಿ ನೀಡಿದ್ದಾರೆ. ಇನ್ನು ಬಾಲಕಿಯಂತೂ ಅಳುತ್ತ ವಾಪಸ್​ ಮನೆಗೆ ಬಂದಿದ್ದಾಳೆ.

ಕ್ಯಾರಿಸ್​ ಅಪ್ಪ ಹೇಳಿದ್ದೇನು?
ಮಗಳನ್ನು ಶಿಕ್ಷಕಿ ಮನೆಗೆ ಕಳಿಸಿದ್ದಕ್ಕೆ ಆಕೆಯ ತಂದೆ ಕ್ರಿಸ್ಟೋಫರ್​ ವಿಲ್ಸನ್​ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಫೇಸ್​ಬುಕ್​ನಲ್ಲಿ ವಿಸ್ತಾರವಾಗಿ ಪೋಸ್ಟ್ ಹಾಕಿದ್ದಾರೆ. ಇಂದು ನನ್ನ ಸುಂದರವಾದ ಮಗಳು, ಒಳ್ಳೆಯ ಉಡುಪು ಧರಿಸಿಕೊಂಡು ಕಲಿಕೆಯ ಉತ್ಸಾಹದಿಂದ ಶಾಲೆಗೆ ಹೋದಳು. ಆದರೆ ಶಿಕ್ಷಕಿ ಆಕೆಯ ಉತ್ಸಾಹವನ್ನೇ ಕುಗ್ಗಿಸಿದರು. ಕೆಲವೇ ಹೊತ್ತಲ್ಲಿ ಮನೆಗೆ ಕಳಿಸಲಾಯಿತು. ಕಾರಣ ಕೇಳಿದ್ದಕ್ಕೆ, ಉಡುಪು ಅನುಚಿತವಾಗಿದೆ ಎಂದೂ ಹೇಳಿದರು. ಈ ವಿಷಯ ಕೇಳಿ ನನಗೆ ತುಂಬ ನೋವು, ಹತಾಶೆ, ನಿರಾಸೆಯಾಯಿತು. ಇದೆಂತಾ ವ್ಯವಸ್ಥೆ ಎಂದೂ ಅನ್ನಿಸಿತು ಎಂದಿದ್ದಾರೆ.

ನನ್ನ ಮಗಳು ಧರಿಸಿದ ಉಡುಪು ಸರಿಯಾಗಿಯೇ ಇದೆ. ಕಪ್ಪು ಬಣ್ಣದ ಡ್ರೆಸ್ ಅನುಚಿತವಾಗಿಲ್ಲ. ಶಿಕ್ಷಕಿಯ ಈ ನಡೆ ಅಸಂಬದ್ಧವಾಗಿದೆ ಎಂದು ವಿದ್ಯಾರ್ಥಿನಿಯ ಅಪ್ಪ ಕ್ರಿಸ್ಟೋಫರ್ ಕಿಡಿಕಾರಿದ್ದಾರೆ. ​ಇನ್ನು ಕ್ಯಾರಿಸ್​ರನ್ನು ಹೊರಗೆ ಕಳಿಸುತ್ತಿದ್ದಂತೆ ಆಕೆಯ ಕ್ಲಾಸ್​ಮೇಟ್​​ಗಳು ಕೂಡ ಹೊರನಡೆದಿದ್ದಾರೆ. ಈ ಮೂಲಕ ಕ್ಯಾರಿಸ್​ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಗತ್ತಿನಾದ್ಯಂತ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನೈತಿಕ ಪೊಲೀಸ್​ಗಿರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೂರು ಮದುವೆಯಾಚೆಗೂ ನನಗೆ ಹಲವರೊಂದಿಗೆ ಅಫೇರ್ ಇತ್ತು..ಹುಟ್ಟಿದ ಮಕ್ಕಳೂ ಲೆಕ್ಕವಿಲ್ಲ: ಫುಟ್ಬಾಲ್​ ದಂತಕತೆ ಪೀಲೆ ಬಿಚ್ಚಿಟ್ಟ ಸತ್ಯ