ಆಸ್ಟ್ರೇಲಿಯಾದ ಈ ವ್ಯಕ್ತಿ 9999ರ ಡಿಸೆಂಬರ್​ 31ರವರೆಗೂ ಇಸ್ರೇಲ್​​ನಿಂದ ಎಲ್ಲಿಯೂ ಹೋಗುವಂತಿಲ್ಲ; ಕೋರ್ಟ್ ಆದೇಶಕ್ಕೆ ಕಾರಣವೇನು ಗೊತ್ತಾ?

| Updated By: Lakshmi Hegde

Updated on: Dec 25, 2021 | 7:33 PM

2013ರಲ್ಲಿ ನಡೆದ ಪ್ರಕರಣವಾದರೂ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹಪೆರ್ಟ್​ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಸ್ರೇಲಿ ಮಹಿಳೆಯನ್ನು ಮದುವೆಯಾದ ತಪ್ಪಿಗೆ ಈ ಕಷ್ಟ ಅನುಭವಿಸುತ್ತಿದ್ದೇನೆ ಎಂದಿದ್ದಾರೆ.

ಆಸ್ಟ್ರೇಲಿಯಾದ ಈ ವ್ಯಕ್ತಿ 9999ರ ಡಿಸೆಂಬರ್​ 31ರವರೆಗೂ ಇಸ್ರೇಲ್​​ನಿಂದ ಎಲ್ಲಿಯೂ ಹೋಗುವಂತಿಲ್ಲ; ಕೋರ್ಟ್ ಆದೇಶಕ್ಕೆ ಕಾರಣವೇನು ಗೊತ್ತಾ?
ಇಸ್ರೇಲ್​ನಿಂದ ಪ್ರಯಾಣ ನಿಷೇಧಿಸಲ್ಪಟ್ಟ ವ್ಯಕ್ತಿ
Follow us on

ಇಸ್ರೇಲ್​​ನಲ್ಲಿರುವ ಆಸ್ಟ್ರೇಲಿಯಾದ ಈ ವ್ಯಕ್ತಿಗೆ ಒಂದು ವಿಚಿತ್ರ ಶಿಕ್ಷೆ ವಿಧಿಸಲಾಗಿದೆ.  ಈ ವ್ಯಕ್ತಿಯ ಪತ್ನಿ ಇಸ್ರೇಲ್​ನವರಾಗಿದ್ದು, ಪತಿಗೆ ವಿಧಿಸಲಾದ ಶಿಕ್ಷೆಗೆ ಇವರೇ ಕಾರಣ. ಈಕೆ ತನ್ನ ಪತಿಯ ವಿರುದ್ಧ ವಿಚ್ಛೇದನ ಕೇಸ್ ಹಾಕಿದ್ದು, ಅದರ ಅನ್ವಯ ಇನ್ನು 8000 ವರ್ಷಗಳ ಕಾಲ ಅವರು ಇಸ್ರೇಲ್​​ ತೊರೆಯುವಂತಿಲ್ಲ. ಅಂದರೆ 9999ನೇ ಇಸ್ವಿ, ಡಿಸೆಂಬರ್​ 31ರವರೆಗೂ ಅವರು ಇಸ್ರೇಲ್​ ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ರಜಾದಿನಗಳನ್ನು ಕಳೆಯಲೂ ಕೂಡ ಹೋಗುವಂತಿಲ್ಲ !

ಈ ಶಿಕ್ಷೆಗೆ ಒಳಗಾದವರ ಹೆಸರು ನೋಮ್ ಹಪರ್ಟ್. ಮಗುವಿನ ಭವಿಷ್ಯದ ಬೆಳವಣಿಗಾಗಿ ಅವರು 3.34 ಮಿಲಿಯನ್ ಡಾಲರ್​​ಗಳಷ್ಟು (18.19 ಕೋಟಿ ರೂ.) ಹಣವನ್ನು ಪತ್ನಿಗೆ ಪಾವತಿ ಮಾಡಿದರೆ ಇಸ್ರೇಲ್​ ಬಿಡಬಹುದು ಅದಾಗದೆ ಇದ್ದರೆ, 9999ನೇ ಇಸ್ವಿ ಡಿಸೆಂಬರ್​ 31ರವರೆಗೆ ಇಸ್ರೇಲ್​ನಿಂದ ಹೊರಗೆಲ್ಲೂ ಹೋಗುವಂತಿಲ್ಲ ಎಂದು ಸ್ಥಳೀಯ ನ್ಯಾಯಾಲಯವೊಂದು ಆದೇಶ ನೀಡಿದೆ. ಈ ಹಪರ್ಟ್ ಅವರು 2012ರಲ್ಲಿ ಇಸ್ರೇಲ್​ಗೆ ಹೋಗಿದ್ದಾರೆ. ಅದಕ್ಕೂ ಒಂದು ವರ್ಷ ಮೊದಲು ಅವರ ಮಾಜಿ ಪತ್ನಿ ಇಸ್ರೇಲ್​ಗೆ ವಾಪಸ್​ ಹೋಗಿದ್ದರು. ನಂತರ ಮಕ್ಕಳನ್ನು ನೋಡಲೆಂದು, ಅವರೊಂದಿಗೆ ಇರಲೆಂದು ಹಪರ್ಟ್ ಕೂಡ ಹೋಗಿದ್ದರು.  ಆದರೆ 2013ರಲ್ಲಿ ಪತ್ನಿ ಇವರ ವಿರುದ್ಧ ವಿಚ್ಛೇದನ ಕೇಸ್​ ದಾಖಲಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಹಪೆರ್ಟ್​ ಅವರು, ಅವರ ಇಬ್ಬರೂ ಮಕ್ಕಳು 18 ವರ್ಷ ತುಂಬುವವರೆಗೆ ಪ್ರತಿತಿಂಗಳೂ 5 ಸಾವಿರ ಇಸ್ರೇಲಿ ಶೆಕೆಲ್​ಗಳನ್ನು ನೀಡಬೇಕು. ಅದಾಗದೆ ಇದ್ದರೆ ಇನ್ನು 8000 ಸಾವಿರ ವರ್ಷಗಳ ಕಾಲ, ಇಸ್ರೇಲ್​ ಬಿಟ್ಟು ಎಲ್ಲಿಗೂ ಹೋಗಬಾರದು. ಕೆಲಸಕ್ಕಾಗಲೀ, ರಜಾದಿನಗಳನ್ನು ಕಳೆಯಲಾಗಲಿ ಎಲ್ಲಿಯೂ ಹೋಗುವಂತಿಲ್ಲ ಎಂದು ಆದೇಶ ನೀಡಿದೆ.

2013ರಲ್ಲಿ ನಡೆದ ಪ್ರಕರಣವಾದರೂ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹಪೆರ್ಟ್​ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಸ್ರೇಲಿ ಮಹಿಳೆಯನ್ನು ಮದುವೆಯಾದ ತಪ್ಪಿಗೆ ಈ ಕಷ್ಟ ಅನುಭವಿಸುತ್ತಿದ್ದೇನೆ. ಇಸ್ರೇಲಿ ಕಾನೂನುಗಳಿಂದ ದೌರ್ಜನ್ಯಕ್ಕೆ ಒಳಗಾದ ವಿದೇಶಿಗರಲ್ಲಿ ನಾನೂ ಒಬ್ಬ. ನನಗೆ ಯಾವುದೇ ಕೆಲಸಕ್ಕೂ ಹೊರಗೆ ಹೋಗಲು ಸಾಧ್ಯವಾಗದೆ, ಇಲ್ಲೇ ಲಾಕ್​ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ಕಠಿಣ ಕಾನೂನುಗಳನ್ನು ಹೊಂದಿರುವ ದೇಶಗಳಲ್ಲಿ ಇಸ್ರೇಲ್​ ಕೂಡ ಒಂದು. ಇಲ್ಲಿ ಮಹಿಳೆಯರು, ತಾವು ಡಿವೋರ್ಸ್​ ಕೊಟ್ಟ ಬಳಿಕ ಮಕ್ಕಳ ಭವಿಷ್ಯಕ್ಕೆ ಹಣ ನೀಡುವ ಕಾರಣಕ್ಕೆ ಅವರ ತಂದೆ (ತಮ್ಮ ಮಾಜಿ ಪತಿ)ಗೆ ಪ್ರಯಾಣ ನಿಷೇಧ ಹೇರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: 2021ರಲ್ಲಿ ಬಿಕಿನಿ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ತಾರೆಯರು ಇವರೇ..; ಚಿತ್ರಗಳು ಇಲ್ಲಿವೆ